🌹ಉದ್ಯೋಗಮಣಿ🌹
📡📡📡📡📡📡📡
🎤ಕೃಷಿ ವಿಶ್ವವಿದ್ಯಾಲಯ ಧಾರವಾಡ. 👇
ನೇಮಕಾತಿ ಅಧಿಸೂಚನೆ
63 ಸಹಾಯಕ/ ಸಹಾಯಕ ಕಮದ ಕಂಪ್ಯೂಟರ್ ಆಪರೇಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ..👆👇
ಹೆಚ್ಚಿನ ಮಾಹಿತಿಗಾಗಿ
www.uasd.edu
🍂🍂🍂🍂🍂🍂🍂📡
🌹ಉದ್ಯೋಗಮಣಿ🌹
📡📡📡📡📡📡📡
🎤ಕೃಷಿ ವಿಶ್ವವಿದ್ಯಾಲಯ ಧಾರವಾಡ. 👇
ನೇಮಕಾತಿ ಅಧಿಸೂಚನೆ
63 ಸಹಾಯಕ/ ಸಹಾಯಕ ಕಮದ ಕಂಪ್ಯೂಟರ್ ಆಪರೇಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ..👆👇
ಹೆಚ್ಚಿನ ಮಾಹಿತಿಗಾಗಿ
www.uasd.edu
🍂🍂🍂🍂🍂🍂🍂📡
🌹🌹ಉದ್ಯೋಗಮಣಿ🌹🌹
📡📡ಚಾಮರಾಜನಗರ ವೈದ್ಯಕೀಯ ವಿಜ್ಙಾನಗಳ ಸಂಸ್ಥೆ📡📡
95 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ,
ಹೆಚ್ಚಿನ ಮಾಹಿತಿಗಾಗಿ ಇಮೇಜ್ ನಲ್ಲಿರುವ ವೆಬ್ ಸೈಟ್ ಗೆ ಭೇಟಿ ಕೊಡಿ📡📡📡🌹🍂
🍂🍂🍂🍂🍂🍂🍂🍂
✏ರೋಷನ್ ಜಗಳೂರು
(ಜಿಕೆಮಣಿ)
🌹🌹🌹🌹📙🌹🌹🌹🌹
🍂"ಬರಾಕ್ 8" ಕ್ಷಿಪ್ಪಣಿಯನ್ನು ಯಾವ ಎರಡು ದೇಶಗಳು ಜಂಟಿಯಾಗಿ ನಿರ್ಮಿಸಿವೆ?
👉ಭಾರತ ಇಸ್ರೇಲ್
🍂ಇತ್ತೀಚೆಗೆ ಸ್ಥಾಪಿಸಲಾದ 'ನವಚಾರಕಕ್ಷಾ' ಎಂಬ ನೂತನ ಸಂಗ್ರಾಹಲಯ ಇರುವುದು?
👉ರಾಷ್ಟ್ರಪತಿ ಭವನ ದೆಹಲಿ
🍂ಆಗಸ್ಟ್ 7 ರಾಷ್ಟ್ರೀಯ ಕೈ ಮಗ್ಗ ದಿನವಾಗಿದೆ
🍂ಈಶೋಲಿ ಬ್ಯಾಕ್ಟೀರಿಯ ಎಲ್ಲಿ ಕಂಡು ಬರುತ್ತದೆ?
👉ಮಾನವನ ಕರುಳಿನಲ್ಲಿ
🍂ಮೂತ್ರ ಜನಕಾಂದಲ್ಲಿರುವ ಕಲ್ಲುಗಳಿಗೆ ಕಾರಣವಾದ ಲವಣಗಳು?
👉ಕ್ಯಾಲ್ಸಿಯಂ ಅಕ್ಸಲೇಟ್
🍂ರಿಗೆಲ್ ಎಂಬ ನಕ್ಷತ್ರ ನೀಲಿ ಮಿಶ್ರಿತ ಬೆಳಕು ಬಣ್ಣದಾಗಿ ಕಾಣುತ್ತದೆ ಇದಕ್ಕೆ ಕಾರಣ?
👉ಅದರ ಮೇಲ್ಮೈ ತಾಪ ಬಹಳ ಹೆಚ್ಚಾಗಿರುವುದರಿಂದ
🍂ಮಂದಾ ಎಂಬ ಹಬ್ಬವನ್ನು ಆಚರಿಸುವ ಬುಡಕಟ್ಟು ಜನಾಂಗ ಯಾವ ರಾಜ್ಯದವರು?
👉ಜಾರ್ಖಂಡ್
🍂ಅಂಬ್ರೆಲಾ ಕ್ರಾಂತಿ ಇದು ಹಾಂಗಾಂಕ್ ನಲ್ಲಿ ನಡೆಯಿತು (ಚೀನಾದ ವಿರುದ್ದ ನಡೆದ ಪ್ರಜಾಪ್ರಭುತ್ವ ಚಳುವಳಿಯಾಗಿದೆ)
🍂7ನೇ ಬ್ರಿಕ್ಸ್ ಶೃಂಗ ಸಭೆ ನಡೆದದ್ದು ರಷ್ಯಾದ ಉಫಾ ನಗರದಲ್ಲಿ (ಜುಲೈ 8, 9 2015)
🍂ಗುಪ್ತರ ಕಾಲದಲ್ಲಿ ಹೊರಡಿಸಿದ ಬೆಳ್ಳಿ ನಾಣ್ಯದ ಹೆಸರು?
👉ರೂಪಕ
🍂ತಾಯಿ ಭುವನೇಶ್ವರಿ ಎಂಬ ಕವಿತೆಯನ್ನು ರಚಿಸಿದವರು?
👉ಅಂದಾನಪ್ಪ ದೊಡ್ಡಮೇಟಿ
🍂ವೃದ್ದ ಗಂಗೆ ಎಂದು ಗೋದಾವರಿ ನದಿಯನ್ನು ಕರೆಯುವರು
🍂ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾಗುವ ಲೋಕಸಭಾ ಸದಸ್ಯರ ಸಂಖ್ಯೆ?
👉13
🍂ಮೊಟೆರಾ ಸ್ಟೇಡಿಯಂ ಕಂಡು ಬರುವ ನಗರ?
👉ಅಹಮದಬಾದ್
🍂ಚುಂಚು ಎಂಬ ಬುಡಕಟ್ಟು ಜನಾಂಗ ಕಂಡುಬರುವ ರಾಜ್ಯ?
👉ಒಡಿಶಾ
🍂🙏🙏🍂🙏🍂🙏🍂
ರೋಷನ್ ಜಗಳೂರು
🍂🍂🍂🍂🍂🍂🍂🍂
gkmani2u Roshan
🍂🍂🍂🍂🍂🍂🍂🍂
👬👬👬ವಿಶ್ವ ಸ್ನೇಹಿತರ ದಿನ: ಕುತೂಹಲ ಕೆರಳಿಸುವ ಇಂಟರೆಸ್ಟಿಂಗ್ ಕಹಾನಿ! 👬👬
👉 ನಿಷ್ಕಲ್ಮಷ ಸಂಬಂಧಕ್ಕೆ ಮತ್ತೊಂದು ಹೆಸರೇ ಸ್ನೇಹ. ಯಾವುದೇ ಸಂಬಂಧಗಳು ಮುರಿದು ಬಿದ್ದರೂ ಸ್ನೇಹ ಮಾತ್ರ ಕೊನೇ ತನಕ ಗಟ್ಟಿಯಾಗಿರುತ್ತದೆ. ಅದರ ಶಕ್ತಿಯೇ ಹಾಗೆ. ಸ್ನೇಹಿತರು ಯಾವುದೇ ಕಾರಣಗಳಿಂದ ದೂರಾದರೂ ಯಾವತ್ತಾದರೂ ಅವರ ಸ್ನೇಹ ಮತ್ತೆ ಒಂದಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹವು ಚಿರಾಯುವಾಗಿದೆ.
👉ಸ್ನೇಹಿತರ ಬಗ್ಗೆ ತಮಗಿರುವ ಕಾಳಜಿ ವ್ಯಕ್ತಪಡಿಸುವ ಸಲುವಾಗಿ ವಿಶ್ವದೆಲ್ಲೆಡೆಯಲ್ಲಿ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಸ್ನೇಹಿತರ ದಿನ, ಅದರ ಮೂಲ, ಅದು ಹೇಗೆ ಆರಂಭವಾಯಿತು, ವಿವಿಧ ದೇಶಗಳಲ್ಲಿ ಅದನ್ನು ಹೇಗೆ ಆಚರಿಸಲಾಗುತ್ತದೆ ಹಾಗೂ ಮತ್ತಿತರ ಕೌತುಕದ ವಿಷಯಗಳನ್ನು ಈ ಲೇಖನವು ನಿಮ್ಮ ಮುಂದಿಡಲಿದೆ.
👉ಸ್ನೇಹದ ಬಗ್ಗೆ ಸಾವಿರಾರು ವರ್ಷಗಳಿಂದ ಚರ್ಚೆ ನಡೆಸಲಾಗುತ್ತಿದೆ. ನಂಬಿಕೆ, ಪ್ರೋತ್ಸಾಹ, ಸಂವಹನ, ಪ್ರಾಮಾಣಿಕತೆ, ತಿಳುವಳಿಕೆ, ಕರುಣೆಯನ್ನು ಒಳಗೊಂಡಿರುವಂತಹ ಅತ್ಯಂತ ದೃಢ ಸಂಬಂಧವೇ ಸ್ನೇಹ.
👉ಸ್ನೇಹಿತರ ಬಗ್ಗೆ ಕಾಳಜಿ ಮತ್ತು ಪ್ರೀತಿ ವ್ಯಕ್ತಪಡಿಸಲು ಯಾವುದೇ ವಿಶೇಷ ದಿನ ಬೇಕೆಂದಿಲ್ಲ. ಆದರೆ ಸ್ನೇಹಿತರ ದಿನವು ನಿಮ್ಮ ಸ್ನೇಹಿತರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಗೌರವ ತೋರಿಸುವಂತಹ ಒಂದು ಅವಕಾಶವನ್ನು ಒದಗಿಸುತ್ತದೆ.
👉ಈ ಜಗತ್ತಿನಲ್ಲಿ ಇನ್ನೂ ಗಟ್ಟಿಯಾಗಿ ಉಳಿದಿರುವ ಸಂಬಂಧವೆಂದರೆ ಅದು ಸ್ನೇಹ ಮಾತ್ರ. ಇದು ಅತ್ಯಂತ ವಿಶೇಷವಾಗಿರುಂತಹ ಆಕರ್ಷಣೆ ಮತ್ತು ನಂಬಿಕೆಯ ಸಂಬಂಧ. 👉ಸ್ನೇಹವೆಂದರೆ ನಮ್ಮ ಬಗ್ಗೆ ಕಾಳಜಿ ವಹಿಸುವ ಮತ್ತು ಕಷ್ಟದಲ್ಲಿ ಹೆಗಲು ಕೊಡುವಂತಹ ಒಂದು ಅಭೂತಪೂರ್ವ ಸಂಬಂಧ.
👉 ಸ್ನೇಹಿತರ ದಿನವನ್ನು ಮೊದಲು ಆರಂಭಿಸಿದವರು ಜಾಯ್ಸ್ ಹಾಲ್. 1919ರಲ್ಲಿ ಹಾಲ್ ಮಾರ್ಕ್ ಕಾರ್ಡ್ ಗಳನ್ನು ಸ್ಥಾಪಿಸಿದ ಈತ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಜನರು ಸ್ನೇಹಿತರ ದಿನವಾಗಿ ಆಚರಿಸಬೇಕೆಂದು ಬಯಸಿ ಇದನ್ನು ಆರಂಭಿಸಿದ.
👉1958ರ ಜುಲೈ 20ರಂದು ಡಾ. ಅರ್ಟೆಮಿಯೊ ಬ್ರಾಚೊ ಎಂಬವರು ವಿಶ್ವ ಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸಬೇಕೆಂಬ ಪ್ರಸ್ತಾಪವನ್ನಿಟ್ಟರು. ಪರಾಗ್ವೆಯ ಅಸುನಸಿಯೊನ್ ನಿಂದ 200 ಕಿ.ಮೀ. ಉತ್ತರದಲ್ಲಿರುವ ಪರಾಗ್ವೆ ನದಿಯ ನಗರದವಾದ ಪುರ್ಟೊ ಪಿನಾಸ್ಕೋದಲ್ಲಿ ತನ್ನ ಸ್ನೇಹಿತರೊಂದಿಗೆ ರಾತ್ರಿಯೂಟವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಾಚೋ ಅವರು ಈ ಪ್ರಸ್ತಾವವನ್ನಿಟ್ಟಿದ್ದರು.
👉2011 ಎಪ್ರಿಲ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜುಲೈ 30ನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಅಚರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.
👉 ದಕ್ಷಿಣ ಅಮೆರಿಕಾದ ದಕ್ಷಿಣಭಾಗದ ಕೆಲವೊಂದು ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪರಾಗ್ವೆಯಲ್ಲಿ ಇದನ್ನು ಆಚರಿಸಲಾಗುತ್ತದೆ. 👉1958ರಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಆಚರಿಸಲು ಪರಾಗ್ವೆ ಪ್ರಸ್ತಾವ ಮಾಡಿತ್ತು. ಸಾಂಪ್ರದಾಯಿಕವಾಗಿ ಆಗಸ್ಟ್‌ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಕೆಲವೊಂದು ರಾಷ್ಟ್ರಗಳಲ್ಲಿ ಸ್ನೇಹಿತರ ದಿನ ಆಚರಣೆಗೆ ಯಾವುದೇ ನಿಗದಿತ ದಿನವಿಲ್ಲ. ಗ್ರೀಟಿಂಗ್ ಕಾರ್ಡ್ ಕಂಪೆನಿಗಳಿಂದ ಆರಂಭವಾದಂತಹ ಈ ಆಚರಣೆಯು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಪಡೆದುಕೊಂಡು ರಜಾದಿನವನ್ನು ತುಂಬಾ ಆಸಕ್ತಿಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಭಾರತ, ಬಾಂಗ್ಲಾದೇಶ ಮತ್ತು ಮಲೇಶಿಯಾದಲ್ಲಿ ಇದರ ಬಗ್ಗೆ ಆಸಕ್ತಿ ಬೆಳೆಯುತ್ತಿದೆ.
👉ಸ್ನೇಹಕ್ಕೇಕೆ ಶಾಸ್ತ್ರದ ಹಂಗು !! ದಕ್ಷಿಣ ಏಶ್ಯಾದಲ್ಲಿ ರಜಾದಿನವನ್ನು ಪ್ರಚುರ ಮಾಡುವವರು 1935ರಲ್ಲಿ ಅಮೆರಿಕಾದಲ್ಲಿ ನೆಲೆಸಿರುವಂತಹ ತಮ್ಮ ಸ್ನೇಹಿತರಿಗಾಗಿ ಈ ದಿನವನ್ನು ಅರ್ಪಿಸುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ಆದರೆ ಇದರ ನಿಜವಾದ ವರ್ಷ 1919.
👉ಸ್ನೇಹಿತರ ದಿನದಂದು ಉಡುಗೊರೆ, ಕಾರ್ಡ್ ಮತ್ತು ಕೈಗೆ ರಿಬ್ಬನ್‌ನಂತಹ ಪಟ್ಟಿಗಳನ್ನು ಧರಿಸುವುದು ಸಾಮಾನ್ಯವಾಗಿ ಆಚರಿಸಿಕೊಂಡಿರುವಂತಹ ಸಂಪ್ರದಾಯ.
👉 1935ರಲ್ಲಿ ಅಮೆರಿಕಾದ ಕಾಂಗ್ರೆಸ್ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಘೋಷಿಸಿತು. ಸ್ನೇಹಿತರಿಗೆ ಗೌರವ ಸೂಚಿಸುವ ಸಲುವಾಗಿ ರಾಷ್ಟ್ರೀಯ ರಜೆಯನ್ನು ಘೋಷಿಸಿದೆ. ಮಹಿಳೆಯರ ಸ್ನೇಹಿತರ ದಿನವನ್ನು ಸಪ್ಟೆಂಬರ್ ತಿಂಗಳ ಮೂರನೇ ಭಾನುವಾರದಂದು ಆಚರಿಸಲಾಗುತ್ತದೆ. ಪ್ರತಿಯೊಬ್ಬರು ಸ್ನೇಹಿತರ ದಿನವನ್ನು ಆಚರಿಸಿದರೆ ಬೆಸ್ಟ್ ಫ್ರೆಂಡ್ಸ್ ಅನಿಮಲ್ ಸೊಸೈಟಿಯು ಉತ್ತಮ ಸ್ನೇಹಿತರ ವಾರವನ್ನು ಆಚರಿಸುತ್ತಾ ಬಂದಿದೆ. ಅದು ಪ್ರತೀ ವರ್ಷ ಜೂನ್ 23ರಿಂದ 25ರ ತನಕ. ಇದನ್ನು ಪ್ರಾಣಿಗಳ ರಕ್ಷಣೆ ಮತ್ತು ಹಕ್ಕಿಗಾಗಿ ಆಚರಿಸುತ್ತಾ ಇದೆ. ಈ ವಾರದ ಮೊದಲ ದಿನವನ್ನು ಉತ್ತಮ ಗೆಳೆಯನ ದಿನವೆಂದು ಕರೆಯಲಾಗುತ್ತದೆ.
🍂🍂🍂🍂🍂🍂🍂🍂
🌹WISH U HAPPY
FREINDSHIP DAY🌹
🍂🍂🍂🍂🍂🍂🍂🍂
FM:ರೋಷನ್ ಜಗಳೂರು
🌎gkmani2u group:🌎
ಇವತ್ತಿನ ದಿನದ ಆಯ್ದ ಕೆಲವೊಂದು ಪ್ರಚಲಿತ ಘಟನೆಗಳ ಮಾಹಿತಿ ನಿಮಗಾಗಿ.
(ರೋಷನ್ ಜಗಳೂರು gkmani2u)
*ಬ್ರಿಕ್ಸ್‌ನ 7ನೇ ಸಮಾವೇಶ ರಷ್ಯಾದ ಉಫದಲ್ಲಿ ಜುಲೈ 8, 9ರಂದು ನಡೆಯುತ್ತಿದೆ
*15 ಜುಲೈ 2014ರಂದು ರಚಿಸಲ್ಪಟ್ಟ ಬ್ರಿಕ್ಸ್ ಬ್ಯಾಂಕ್‌ನ ಅಧಿಕೃತ ಹೆಸರು
"ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ (ಎನ್ ಡಿ ಬಿ)
ಇದರ ಕೇಂದ್ರ ಕಚೇರಿ
🏠 ಚೀನಾದ ಶಾಂಘೈನಲ್ಲಿದೆ.
ಕರ್ನಾಟಕ ಮೂಲದ
👳ಕೆ ವಿ ಕಾಮತ್ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ
🇮🇳BRICS ರಾಷ್ಟ್ರಗಳು:
🍂ಬ್ರೆಜಿಲ್ (ಅಧ್ಯಕ್ಷ ಡಿಲ್ಮಾ ರೂಸೆಫ್)
🍂 ರಷ್ಯಾ (ವ್ಲಾಡಿಮರ್ ಪುಟಿನ್)
🍂ಭಾರತ (ಮೋದಿ)
🍂ಚೀನಾ (ಕ್ಸಿ ಜಿನ್ ಪಿಂಗ್)
🍂ದಕ್ಷಿಣಾ ಆಪ್ರಿಕಾ (ಜೇಕಬ್ ಝುಮಾ)
👀ಮೊದಲ ಬ್ರಿಕ್ಸ್ ಸಮಾವೇಶ ನಡೆದದ್ದು ಯೆಕಟೆರಿನ್ ಬರ್ಗ್ (ರಷ್ಯಾ ಜೂ16 2009)
👀ಬ್ರಿಕ್ಸ್ ನ 6ನೇ ಸಮಾವೇಶ ನಡೆದದ್ದು ಬ್ರೆಜಿಲ್‌ನ ಪೋರ್ಟಾಲೆಜದಲ್ಲಿ (2014ರ ಜು 15,17)
🔮ಯೋಗಸೆಂಟರ್ ಹಾಗೂ
ಬಿಶ್ ಕೆಕ್ ನ ಆಸ್ಪತ್ರೆ ಹಾಗೂ ಭಾರತದ ಆಸ್ಪತ್ರೆಗಳ ಜತೆಗಿನ ವರ್ಚುವಲ್ ಲಿಂಕ್ಅನ್ನು ಕಿರ್ಗಿಸ್ತಾನದಲ್ಲಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
🍂🍂gkmani2u🍂🍂
👥ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಸ್ವಚ್ಚ ಭಾರತ ಅಭಿಯಾನದಡಿ ಅತಿ ಹೆಚ್ಚು ಸಮುದಾಯಿಕ ಹಾಗೂ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸುವ ರಾಜ್ಯಗಳ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿದೆ.
(ಈ ಯೋಜನೆಯಡಿ 1680 ಶೌಚಗೃಹ ನಿರ್ಮಿಸಿದೆ)
🌇ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದ ಕಾರ್ಬನ್ ಹೊರ ಸೂಸುವ ದೇಶ: ಚೀನಾ
😹ಹಾಲಿವುಡ್ ನ "ಓಷನ್ಸ್" "ಕರಾಟೆ ಕಿಡ್ "ಚಿತ್ರಗಳ ನಿರ್ಮಾಪಕ ಜೆರ‍್ರಿ ವೇನ್‌ಂತ್ರಾಬ್ ನಿಧನ
🎓ಚೈಲ್ಡ್ ರೈಟ್ಸ್ ಅಂಡ್ ಯು (ಸಿ ಆರ್ ಐ) ಸಂಸ್ಥೇ ಕರ್ನಾಟಕದಲ್ಲಿ ಇತ್ತೀಚೆಗೆ ನಡೆಸಿರುವ ಸಮೀಕ್ಷೆ ಪ್ರಕಾರ ಯಾವ ಜಿಲ್ಲೆ ಬಾಲ ಕಾರ್ಮಿಕರಿಂದ ಮುಕ್ತವಾಗಿದೆ ಎಂದು ವರದಿ ಹೇಳಿದೆ?
ಉತ್ತರ: ದಕ್ಷಿಣ ಕನ್ನಡ
(ಅತಿ ಹೆಚ್ಚು ಬಾಲ ಕಾರ್ಮಿಕರಿರುವ ಜಿಲ್ಲೆ ಬೆಂಗಳೂರು)
😰ಇತ್ತೀಚೆಗೆ ನಿಧನರಾದ ಉರ್ದು ಕಾದಂಬರಿಕಾರ ಅಬ್ದುಲ್ ಹುಸೇನ್.ಯಾವ ದೇಶದವರು?
ಪಾಕಿಸ್ತಾನ
www.gkmani2u.blogspot.com
gkmani2u ROSHAN
ಭಾರತಕ್ಕೆ 143ನೇ ಸ್ಥಾನ
🌗🌗PRAJAVANI🌗🌗
* ಜಾಗತಿಕ ಶಾಂತಿ ಸೂಚ್ಯಂಕ
ಪಟ್ಟಿಯಲ್ಲಿ ಭಾರತಕ್ಕೆ 143ನೇ ಸ್ಥಾನ ದೊರೆತಿದೆ.
* ಅಗ್ರಸ್ಥಾನ ಪಡೆದಿರುವ ಐಸ್‌ಲೆಂಡ್ ‘ಜಗತ್ತಿನ ಶಾಂತಿಯುತ ರಾಷ್ಟ್ರ’
ಎಂಬ ಗೌರವ ತನ್ನದಾಗಿಸಿಕೊಂಡಿದೆ.
*ಆರ್ಥಿಕತೆ ಮತ್ತು ಶಾಂತಿಗೆ ಸಂಬಂಧಿಸಿದ ಸಂಸ್ಥೆಯೊಂದು ತನ್ನ 2015ರ ಸಾಲಿನ ಶಾಂತಿ ಸೂಚ್ಯಂಕವನ್ನು ಪ್ರಕಟಿಸಿದೆ.
*ಪಟ್ಟಿಯಲ್ಲಿ ಒಟ್ಟು 162 ರಾಷ್ಟ್ರಗಳಿಗೆ ವಿವಿಧ ಕ್ರಮಾಂಕಗಳನ್ನು ನೀಡಿದೆ.
*ಒಂದು ದೇಶದಲ್ಲಿ ಅಪರಾಧ ಪ್ರಕರಣ, ಹಿಂಸೆ, ಸಂಘರ್ಷ ಮತ್ತು ಸೈನಿಕ ಕಾರ್ಯಾಚರಣೆ ಎಷ್ಟರಮಟ್ಟಿಗೆ ನಡೆಯುತ್ತದೆ ಎಂಬುದನ್ನು ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.
*ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಪುಟ್ಟ ರಾಷ್ಟ್ರ ಐಸ್‌ಲೆಂಡ್‌ನಲ್ಲಿ ಹೋದ ಒಂದು ವರ್ಷದ ಅವಧಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಿಂಸಾಕೃತ್ಯ ನಡೆದಿದೆ. ಆದ್ದರಿಂದ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ.
*ಭಾರತವು ಭೂತಾನ್, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಗಿಂತ ಕೆಳಗಿನ ಸ್ಥಾನದಲ್ಲಿದೆ.
*‘ಆಂತರಿಕ ಸಂಘರ್ಷದಿಂದಾಗಿ ಹಲವರು ಬಲಿಯಾಗಿದ್ದಾರೆ. ನಕ್ಸಲರ ಸಮಸ್ಯೆ ಕೂಡಾ ಇದೆ. ಇದರಿಂದ ಭಾರತ ಕೆಳಗಿನ ಸ್ಥಾನದಲ್ಲಿ ಕಾಣಿಸಿಕೊಂಡಿದೆ’ ಎಂದು ಸಂಸ್ಥೆಯ ವರದಿ ತಿಳಿಸಿದೆ.
*ಪಟ್ಟಿಯಲ್ಲಿ ಅಗ್ರ ಹತ್ತರಲ್ಲಿ ಯೂರೋಪ್‌ನ 6 ರಾಷ್ಟ್ರಗಳು ಸ್ಥಾನ ಪಡೆದಿವೆ.
*ಡೆನ್ಮಾರ್ಕ್ ಮತ್ತು ಆಸ್ಟ್ರಿಯಾ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ.
*‘ಯೂರೋಪ್ ಖಂಡ ವಿಶ್ವದ ಅತ್ಯಂತ ಶಾಂತಿಯುತ ವಲಯ ಎಂಬ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ’ ಎಂದು ವರದಿ ಹೇಳಿದೆ.
*ಪಾಕಿಸ್ತಾನಕ್ಕೆ 154ನೇ ಸ್ಥಾನ ದೊರೆತಿದೆ.
ಭೂತಾನ್ (18), ನೇಪಾಳ (62), ಬಾಂಗ್ಲಾದೇಶ (84) ಮತ್ತು ಶ್ರೀಲಂಕಾ (114) ದೇಶಗಳು ಭಾರತಕ್ಕಿಂತ ಮುಂದಿವೆ.
*ಅಮೆರಿಕಕ್ಕೆ 94ನೇ ಕ್ರಮಾಂಕ ನೀಡಲಾಗಿದೆ.
* ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ದೇಶ ಅಫ್ಘಾನಿಸ್ತಾನ (160).
ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿಯಿಂದ ನಲುಗಿರುವ ಸಿರಿಯಾ, ಇರಾಕ್ ಕೊನೆಯ ಸ್ಥಾನಗಳಲ್ಲಿವೆ.