Saturday 9 July 2016

ವೃತ್ತಿಯೇ ಪ್ರವೃತ್ತಿಯಾಗಬೇಕು


(ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ)

                                       ನಾನು ಒಂದು ಚಪ್ಪಲಿ ಅಂಗಡಿಗೆ ಹೋದಾಗ ಅಂಗಡಿಯಲ್ಲಿನ ವ್ಯಕ್ತಿ
ನನ್ನನ್ನು ಅತ್ಯಂತ ಗೌರವವಾಗಿ ಒಳಗೆ ಆಹ್ವಾನಿಸಿದ.

ಕುಳಿತು ಕೊಳ್ಳಲು ಹೇಳಿ
ವಿವಿಧ ರೀತಿಯ ಚಪ್ಪಲಿಗಳನ್ನು ತೋರಿಸತೊಡಗಿದ.

ಪ್ರತಿಯೊಂದು ಚಪ್ಪಲಿಯನ್ನು ಆತನೇ ಸ್ವತಃ ನನ್ನ ಕಾಲುಗಳಿಗೆ ತೊಡಿಸುತ್ತಿದ್ದ.

ನನಗೆ ಯಾಕೋ ಹೀಗೆ ಮಾಡುವುದು ಸರಿ ಅನಿಸಲಿಲ್ಲ.

" ನೀವು ಹಾಗೆ ನನ್ನ ಕಾಲುಗಳನ್ನು ಮುಟ್ಟಿ ಚಪ್ಪಲಿ ತೊಡಿಸುವುದು ನನಗೆ ತುಂಬಾ ಮುಜುಗರವಾಗುತ್ತಿದೆ. ನೀವು ಕೊಡಿ ನಾನೇ ಹಾಕಿಕೊಳ್ಳುತ್ತೇನೆ"
ಎಂದು ಹೇಳಿದೆ.

ಅದಕ್ಕೆ ಆತ
"ಪರವಾಗಿಲ್ಲ ಬಿಡಿ ಸರ್!
ನಿಮಗೆ ಇಷ್ಟವಾದ ಚಪ್ಪಲಿಯನ್ನು ಹಾಕಿಕೊಂಡು ನೋಡಿ.
ನಿಮಗೆ ನಮ್ಮ ಅಂಗಡಿಯ ಚಪ್ಪಲಿ ಇಷ್ಟವಾದರೆ ಸಾಕು" ಎಂದು ಹೇಳಿದ.

" ನೀವೂ ಮನುಷ್ಯರೆ.....
ನಾವು ಮನುಷ್ಯರೇ.
ನೀವು ಹೀಗೆ ನಮ್ಮ ಕಾಲು ಹಿಡಿದು ಚಪ್ಪಲಿ ತೊಡಿಸುತ್ತಿರುವುದು ನನ್ನ ಮನಸ್ಸಿಗೆ ನೋವಾಗುತ್ತಿದೆ."
ಎಂದು ಹೇಳಿದೆ.

ಅದಕ್ಕೆ ಅವರು ಹೇಳಿದ ಮಾತು ಕೇಳಿ ನಿಜಕ್ಕೂ ತುಂಬಾ ಆಶ್ಚರ್ಯವಾಯಿತು.
"ಈ ಅಂಗಡಿಯಲ್ಲಿ ಅದು ನನ್ನ ಕರ್ತವ್ಯ..
ಅಂಗಡಿಯ ಹೊರಗೆ ನೀವು ಕೋಟಿ ರೂಪಾಯಿ ಕೊಟ್ಟರೂ ನಿಮ್ಮ ಕಾಲು ಮುಟ್ಟುವುದಿಲ್ಲ.

ಅಂಗಡಿಯಲ್ಲಿ ನೀವು ಕೋಟಿ ರೂ. ಕೊಟ್ಟರೂ ನಿಮ್ಮ ಕಾಲು ಮುಟ್ಟದೇ ಇರಲಾರೆ." ಎಂದು ಹೇಳಿದ ಆ ವ್ಯಕ್ತಿ.

ಇದರಿಂದ ಆತನಿಗೆ ತಾನು ಮಾಡುವ ಕೆಲಸದ ಬಗ್ಗೆ ಇರುವ ಭಕ್ತಿ, ಗೌರವ ಗೊತ್ತಾಗುತ್ತದೆ.

ಪ್ರತಿಯೊಬ್ಬರೂ ತಾವು ಮಾಡುವ ಕೆಲಸ ಚಿಕ್ಕದಾದರೂ, ದೊಡ್ಡದಾದರೂ ಇಂತಹ ಭಾವನೆಯನ್ನು ಹೊಂದಿದ್ದರೆ ಅವರು ಖಂಡಿತಾ ತಾವು ಅಂದುಕೊಂಡಿರುವುದು ಸಾಧಿಸಬಲ್ಲರು.

ಸ್ನೇಹಿತರೆ,
ಇದುವರೆಗೆ ಕೆಲಸ ಯಾರ ಗೌರವವನ್ನೂ ತಗ್ಗಿಸಿಲ್ಲ.!!
ವಿಪಯಾ೯ಸವೆಂದರೆ,
ಹಲವರು  ಕೆಲಸದ ಗೌರವವನ್ನೇ ತಗ್ಗಿಸಿದ್ದಾರೆ.

ಸೆರೆನಾ ವಿಲಿಯಮ್ಸ್


👉🏻ವಿಶ್ವ ಶ್ರೇಷ್ಠ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಏಳನೇ ಬಾರಿಗೆ ವಿಂಬಲ್ಡನ್‌ ಟ್ರೋಫಿಗೆ ಮುತ್ತಿಕ್ಕಿದ್ದಾರೆ.

👉🏻ವಿಂಬಲ್ಡನ್‌ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅವರನ್ನು 7–5, 6–3 ಸೆಟ್‌ಗಳಿಂದ ಮಣಿಸುವ ಮೂಲಕ ಗೆಲುವಿನ ನಗೆ ಬೀರಿದರು.

👉🏻ಸೆರೆನಾ ಅವರು ಈ ಗೆಲುವಿನ ಮೂಲಕ
(22ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ) ಜರ್ಮನಿಯ ಸ್ಟೆಫಿ ಗ್ರಾಫ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.