Thursday 30 April 2015

ನೇಪಾಳ

ನೇಪಾಳ
☀☀☀☀☀☀☀
ನೇಪಾಳವು ದಕ್ಷಿಣ ಏಷ್ಯಾದ ಒಂದು ರಾಷ್ಟ್ರ.
ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. *ನೇಪಾಳದ ಉತ್ತರಕ್ಕೆಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತವಿದೆ. 
*ಎವರೆಸ್ಟ್ ಸೇರಿದಂತೆ ವಿಶ್ವದ ಅತಿ ಉನ್ನತ 10 ಪರ್ವತ ಶಿಖರಗಳ ಪೈಕಿ 8 ನೇಪಾಳದಲ್ಲಿಯೇ ಇವೆ. *ನೇಪಾಳದ ವಿಸ್ತೀರ್ಣ 141,700 ಚ.ಕಿ.ಮೀ.
*ನೇಪಾಳ ರಾಷ್ಟ್ರದ ರಾಜಧಾನಿ ಕಾಠ್ಮಂಡು.
🌍🌎gkmani2u🌎🌎

ಇತಿಹಾಸ

*ಕ್ರಿ.ಪೂ.6ಮತ್ತು 5ನೇಯ ಶತಮಾನದಲ್ಲಿ ಈ ಪ್ರದೇಶವು "ಶಾಕ್ಯ" ಆಡಳಿತಕ್ಕೊಳಪಟ್ಟಿತ್ಥು.

*ಶಾಕ್ಯ ರಾಜಕುಮಾರರಲ್ಲೊಬ್ಬನಾದ 
ಸಿದ್ಧಾರ್ಥ ಗೌತಮನು ಐಹಿಕ ಪ್ರಾಪಂಚಿಕ ವ್ಯಾಮೋಹಗಳನ್ನು ತೊರೆದು ದಿವ್ಯ ಜ್ಞಾನವನ್ನು ಹೊಂದಿ ಮುಂದೆ ಬುದ್ಧನೆನಿಸಿಕೊಂಡನು.

*ಸುಮಾರು ಕ್ರಿ.ಪೂ. 250ರ ಸಮಯಕ್ಕೆ ಈ ಪ್ರದೇಶವು ಉತ್ತರ ಭಾರತದ ಮೌರ್ಯ ಸಾಮ್ರಾಜ್ಯದ ಅಂಗವಾಗಿತ್ತು. ತರುವಾಯ ಗುಪ್ತ ಸಾಮ್ರಾಟರು , ಲಿಚ್ಛವಿ ಸಾಮ್ರಾಟರು ಹಾಗೂ ಚಾಲುಕ್ಯರು ಈ ಪ್ರದೇಶದ ಮೇಲೆ ಹತೋಟಿ ಸಾಧಿಸಿದ್ದರು. ನಂತರ ಈ ಪ್ರದೇಶವು ಹಲವು ಸಣ್ಣ ಅರಸೊತ್ತಿಗೆಗಳಾಗಿ ಹಂಚಿಹೋಯಿತು.
*1765ರಲ್ಲಿ ಪೃಥ್ವಿನಾರಾಯಣ ಶಹ ಎಂಬ ಗೂರ್ಖಾ ಅರಸನು ನೇಪಾಳವನ್ನು ಒಂದುಗೂಡಿಸಿದನು. *ಭಾರತವು ಬ್ರಿಟಿಷ್ ಆಡಳಿತಕ್ಕೆ ಒಳಗಾದಾಗ ನೇಪಾಳವು ತನ್ನಸ್ವಾಯತ್ತತೆಯನ್ನು 
ಉಳಿಸಿಕೊಂಡಿತ್ತು. ಆಂಗ್ಲರೊಡನೆ ನಡೆದ ಒಂದು ಯುದ್ಧದಲ್ಲಿ ನೇಪಾಳವು ಸೋಲನುಭವಿಸಿತಾದರೂ, ತನ್ನ ಸ್ವಾತಂತ್ರ್ಯವನ್ನುಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಂಡಿತು.
ಇದರ ಪ್ರಕಾರ ನೇಪಾಳವು ಅಂದು ತನ್ನ ಪ್ರದೇಶಗಳಾಗಿದ್ದ ಉತ್ತರಾಖಂಡ ,
 ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಭಾಗಗಳನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿತು.
ಅಲ್ಲಿಂದ ಮುಂದೆ ಇತ್ತೀಚಿನವರೆವಿಗೂ ನೇಪಾಳವುಅರಸೊತ್ತಿಗೆಯಾಗಿಯೇ ಉಳಿದಿತ್ತು. ಈಚಿನ ದಿನಗಳಲ್ಲಿ ಪ್ರಜಾಸತ್ತೆಗಾಗಿ ಹೋರಾಟವು ತೀವ್ರಗೊಂಡು ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆಯನ್ನುಸ್ಥಾಪಿಸಲಾಯಿತು. ಅರಸರ ಅಧಿಕಾರಗಳನ್ನು ಬಹುಮಟ್ಟಿಗೆ ಮೊಟಕುಗೊಳಿಸಲಾಯಿತು. *1991ರಲ್ಲಿ ಪ್ರಪ್ರಥಮ ಬಹುಪಕ್ಷೀಯ ಹಾಗೂ ಮುಕ್ತ ಚುನಾವಣೆಗಳುನಡೆದವು.
🌍🌍gkmani2u🌎🌎

ಭೌಗೋಳಿಕ ಲಕ್ಷಣ

*ನೇಪಾಳವು ಸುಮಾರು 800 ಕಿ.ಮೀ. ಉದ್ದ ಹಾಗೂ 200ಕಿ.ಮೀ. ಅಗಲದ ಪಟ್ಟಿಯಂತೆ ಕಾಣುವುದು. *ಭೌಗೋಳಿಕವಾಗಿ ದೇಶವನ್ನು ಉನ್ನತ ಪರ್ವತ ಪ್ರದೇಶ, ಬೆಟ್ಟಗುಡ್ಡಗಳ ಪ್ರದೇಶ ಹಾಗೂ ತರಾಯ್ ಪ್ರದೇಶಗಳೆಂದು ವಿಂಗಡಿಸಬಹುದು.
*ಭಾರತದ ಗಡಿಗೆ ಹೊಂದಿಕೊಂಡಿರುವ ಪ್ರದೇಶವು ಗಂಗಾ ಬಯಲಿನ ಒಂದು ಭಾಗವಾಗಿದೆ.
*ಈ ಭಾಗಕ್ಕೆ ಕೋಸಿ,  ನಾರಾಯಣಿ (ಗಂಡಕಿ)
ಮತ್ತು ಕರ್ನಾಲಿ ನದಿಗಳು ನೀರುಣಿಸುತ್ತವೆ.
*ಬೆಟ್ಟಗುಡ್ಡಗಳ ಪ್ರದೇಶವು ಕಾಠ್ಮಂಡು ಕಣಿವೆಯನ್ನು ಒಳಗೊಂಡಿದೆ. ದೇಶದ ಹೆಚ್ಚಿನ ಜನವಸತಿ ಇಲ್ಲಿಯೇ ಕಂಡುಬರುವುದು. ಈ ಪ್ರದೇಶದಲ್ಲಿ ಮಹಾಭಾರತ ಲೇಖ್ ಮತ್ತು ಶಿವಾಲಿಕ ಪರ್ವತಶ್ರೇಣಿಗಳುಇವೆ.
ಈ ಶ್ರೇಣಿಗಳು ಮಧ್ಯಮ ಮಟ್ಟದವಾಗಿದ್ದು ಸರಾಸರಿ 1000ದಿಂದ 4000ಮೀ. ವರೆಗೆ ಎತ್ತರವುಳ್ಳವಾಗಿವೆ.
*ಹಿಮಾಲಯದ ಉನ್ನತ ಪರ್ವತ ಪ್ರದೇಶವು ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಎತ್ತರದ ಪ್ರದೇಶವಾಗಿದೆ.ಎವರೆಸ್ಟ್ , 
ಕಾಂಚನ್ ಜುಂಗಾ, 
ಅನ್ನಪೂರ್ಣಾ , ಮಕಾಲು ,ಧವಳಗಿರಿ ಸೇರಿದಂತೆ ವಿಶ್ವದ ಹಲವು ಅತ್ಯುನ್ನತ ಶಿಖರಗಳು ಈ ವಿಭಾಗದಲ್ಲಿ ಇವೆ. 
🌍🌍Roshan 8497078528🌎

ಅರ್ಥವ್ಯವಸ್ಥೆ

*ನೇಪಾಳವು ಕೃಷಿಪ್ರಧಾನ ದೇಶ. ದೇಶದ ೭೬% ಜನರು ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. 
*ಬತ್ತ,ಗೋಧಿ, ಕಬ್ಬು ಮತ್ತು ಸೆಣಬು ಮುಖ್ಯ ಬೆಳೆಗಳು. ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವುದಕ್ಕೇ ಸೀಮಿತ. 
*ಪ್ರವಾಸೋದ್ಯಮವು ದೇಶದ ಪ್ರಮುಖ ಆರ್ಥಿಕ ಚಟುವಟಿಕೆ.
🌍🌎gkmani2u🌍🌍

*ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರ.
*ದೇಶದ ಅಧಿಕೃತ ಭಾಷೆ ನೇಪಾಲಿ. ಉಳಿದಂತೆ ಮೈಥಿಲಿ,
ಭೋಜಪುರಿ ಮತ್ತು ಅವಧಿ 
ಭಾಷೆಗಳು ನುಡಿಯಲ್ಪಡುತ್ತವೆ.
* ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ.
*ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ ಹಿಂದೂ ಸಂಸ್ಕೃತಿಯ ಗಾಢ ಛಾಯೆ ಇದೆ.
*ನೇಪಾಳವು ಭಾರತವನ್ನು ಬಹಳವಾಗಿ ಅವಲಂಬಿಸಿದೆ. ಆರ್ಥಿಕ ಸಹಾಯ , ತಂತ್ರಜ್ಞಾನ, ರಕ್ಷಣೆ ಇವುಗಳೆಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದಲೇ ನೇಪಾಳಕ್ಕೆ ಒದಗಿದೆ.

Wednesday 29 April 2015

ಮಲೇರಿಯಾ ಮಾಹಿತಿ

 ಏಪ್ರಿಲ್ 25 ರ ವಿಶ್ವ ಮಲೇರಿಯಾ ದಿನ:: ಅದರ ಒಂದಿಷ್ಟು ಮಾಹಿತಿ


* ಪ್ರಪಂಚದಾದ್ಯಂತ ಪ್ರತಿ ದಿನ ಮಲೇರಿಯಾಕ್ಕೆ 1200ಕ್ಕೂ ಹೆಚ್ಚು ಮಕ್ಕಳು ಬಲಿಯಾಗುತ್ತಿದ್ದಾರೆ.
* ಪ್ರತಿ ಗಂಟೆಗೆ 50 ಮಕ್ಕಳು ಮಲೇರಿಯಾಗೆ ತುತ್ತಾಗುತ್ತಿದ್ದಾರೆ.
* ಪ್ರತಿ ವರ್ಷ 10.000 ಗರ್ಭಿಣಿ ಮಹಿಳೆಯರು ಮಲೇರಿಯಾದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
* 2 ಲಕ್ಷ ಶಿಶುಗಳು ಬಲಿಯಾಗುತ್ತಿವೆ, ಕಳೆದ 15ವರ್ಷಗಳಿಂದ ಶೇ.40ರಷ್ಟು ಮಕ್ಕಳು ಮಲೇರಿಯಾ ರೋಗದಿಂದ ಸಾಯುತ್ತಿದ್ದಾರೆ ಎಂದು ಯುನಿಸೆಫ್ ಹೇಳಿದೆ

*ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಮಲೇರಿಯಾದಿಂದ ಮರಣ ಹೊಂದುವವರ ಪ್ರಮಾಣವು  ವಿಶ್ವದಾದ್ಯಂತ ಶೇ.47ರಷ್ಟು ತಗ್ಗಿದೆ.
ಆಪ್ರಿಕಾದಲ್ಲೇ ಶೇ. 54ರಷ್ಟು ಪ್ರಮಾಣ ಕಡಿಮೆಯಾಗಿದೆ.  2001ರಿಂದ 4ದಶಲಕ್ಷಕ್ಕೂ ಹೆಚ್ಚಿನ ಸಾವುಗಳು ಮಲೇರಿಯಾ ಕಾರಣಗಳಿಂದ ಸಂಭವಿಸಿವೆ.
ಮಲೇರಿಯಾ ಕಾರಣಗಳಿಂದ ಅಸುನೀಗಿದ ಮಕ್ಕಳಲ್ಲಿ ಶೇ.97ರಷ್ಟು 5 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.
*2012ರಲ್ಲಿ 6,27,000 ಸಾವುಗಳು ಮಲೇರಿಯಾದಿಂದ ಸಂಭವಿಸಿವೆ.
*2013ರಲ್ಲಿ ಜಗತಿನಾದ್ಯಂತ 5,84,000 ಮಂದಿ ಮಲೇರಿಯಾದಿಂದ ಸತ್ತಿದ್ದಾರೆ. ಇದರಲ್ಲಿ ಶೆ90ರಷ್ಟು ಪ್ರಕರಣ ಆಪ್ರಿಕಾದಲ್ಲಿ ಘಟಿಸಿದೆ.
*2001-13ರ ನಡುವೆ 4.3 ದಶಲಕ್ಷ ಮಂದಿಯನ್ನು ಮಲೇರಿಯಾದಿಂದ ರಕ್ಷಿಸಲಾಗಿದೆ. ಇದರಲ್ಲಿ ಶೇ.92ರಷ್ಟು (3.9ದಶಲಕ್ಷ) 5 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಉಪ ಸಹರಾ ಆಪ್ರಿಕಾದಲ್ಲಿ ರಕ್ಷಿಸಲಾಗಿದೆ.
* ಪ್ರತಿ ವರ್ಷ ಏ.25ನ್ನು ವಿಶ್ವ ಮಲೇರಿಯಾ ದಿನ ಎಂದು ಆಚರಿಸಲಾಗುತ್ತದೆ. 106ದೇಶಗಳಲ್ಲಿ 3.3 ದಶಲಕ್ಷ ಮಂದಿ ಮಲೇರಿಯಾ ರೋಗಕ್ಕೆ ಒಳಗಾಗಿದ್ದಾರೆ.


(ಮಾಹಿತಿ ರೋಷನ್ ಜಗಳೂರು 8497078528)

ಮಲೇರಿಯಾ: ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಪ್ಲಾಸ್ಮೋಡಿಯಂ ಎಂಬ ಆದಿಜೀವಿ ಹಾಗೂ ಪರೋಪ ಜೀವಿ ಜಾತಿಗೆ ಸೇರಿದ ಐದು ಪ್ರಭೇದಗಳಾದ
"ಪ್ಲಾಸ್ಮೋಡಿಯಂ ವೈವಾಕ್ಸ್"
"ಪ್ಲಾಸ್ಮೋಡಿಯಂ ಓವಲೆ"
"ಪ್ಲಾಸ್ಮೋಡಿಯಂ ಮಲೇರಿಯಾ"
"ಪ್ಲಾಸ್ಮೋಡಿಯಂ ಫಾಲ್ಸಿಪಾರಮ್"
"ಪ್ಲಾಸ್ಮೋಡಿಯಂ ನ್ಯೋಲೆಸಿ"
ಎಂಬ ಆದಿಜೀವಿಗಳಿಂದ ಹರಡುತ್ತದೆ.


* ಪ್ಲಾಸ್ಮೋಡಿಯಂ ಫಾಲ್ಸಿಪಾರಮ್ ಎಂಬ ಪ್ರಭೇದವು ಅತ್ಯಂತ ಅಪಾಯಕಾರಿಯಾದಂತಹ ಆದಿ ಜೀವಿಯಾಗಿದೆ.
* ಮಲೇರಿಯಾವನ್ನು "ಅನಾಫಿಲಿಸ್" ಜಾತಿಯ ಹೆಣ್ಣು ಸೊಳ್ಳೆಯು ಹರಡುತ್ತದೆ.

* ಸರ್ ರೋನಾಲ್ಡ್ ರೋಸ್ ಎಂಬ ಬ್ರಿಟೀಷ್ ವೈದ್ಯನು ಅನಾಫಿಲಿಸ್ ಸೊಳ್ಳೆಯಲ್ಲಿ ಮಲೇರಿಯಾದ ಪರವಾಲಂಭಿಗಳು ಇರುವುದನ್ನು ಸಂಶೋಧಿಸಿ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯು ಮಲೇರಿಯಾ ರೋಗ ಹಡರಲು ಮುಖ್ಯ ಕಾರಣವೆಂದು ಕಂಡು  ಹಿಡಿದನು. ಅದಕ್ಕಾಗಿ ಅವರಿಗೆ 1902ರಲ್ಲಿ ವೈದ್ಯಕೀಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ನೀಡಲಾಯಿತು.

*ಮಲೇರಿಯಾದ ಲಕ್ಷಣವೆಂದರೆ ಗಡುವಿನ ಜ್ವರ (24ಘಂಟೆ ಅಥವಾ 48ಗಂಟೆಗಳಿಗೊಮ್ಮೆ ಕಾಣಿಸುವ ಜ್ವರ), ವಿಪರೀತ ಚಳಿ, ನಡುಕ, ರಕ್ತಹೀನತೆ, ಗುಲ್ಮಾ ದೊಡ್ಡದಾಗುತ್ತದೆ.
* ಇದರಿಂದ ಕೆಂಪು ರಕ್ಷ ಕಣಗಳು ನಾಶಗೊಂಡು ಪರಾವಲಂಭೀಗಳು ರಕ್ತದ ಪ್ರವಾಹದಲ್ಲಿ ಬಿದ್ದಾಗ ಜ್ವರ, ತಲೆನೋವು ಮತ್ತು ಚಳಿ, ಕೀಲು ನೋವು ಬರುತ್ತದೆ.
* ಈ ರೋಗವನ್ನು ರಕ್ತ ಪರೀಕ್ಷೆಯ ಮೂಲಕ ಪತ್ತೆ ಹಚ್ಚಬಹುದು.
* ರಾಷ್ಟ್ರೀಯ ಮಲೇರಿಯಾ ನಿಯಂತ್ರಣದಡಿಯಲ್ಲಿ ಕ್ಲೋರೋ ಕ್ವಿನೈನ್, ಪ್ರೈಮಿಧಾಅಮೈನ್, ಪ್ರೈಮಾಕ್ವೈನ್, ಅಟೋವಾಕ್ವಯೋನ್, ಸಲ್ಪೋಡಾಕ್ಸಿನ್ ಮತ್ತು ಪ್ರೈಮ್ಯಾಕ್ಸಿನ್ ಎಂಬ ಔಷಧಿಯಿಂದ ಗುಣಪಡಿಸಲಾಗುವುದು.
* ಮಲೇರಿಯಾವನ್ನು ಹರಡುವ ಸೊಳ್ಳೆಗಳನ್ನು ತಡೆಯಲು ಕೀಟ ನಾಶಕವಾದ ಡಿ.ಡಿ.ಟಿಯನ್ನು  ಬಳಸಲಾಗುತ್ತಿದೆ.
* ಕ್ವಿನೈನ್ ಎಂಬ ಔಷದವನ್ನು ಮಲೇರಿಯಾ ರೋಗ ನಿವಾರಣಗೆ ಬಳಸಲಾಗುತ್ತಿದೆ.  ಇದನ್ನು 'ಸಿಂಕೋನ ಮರ'ದ ತೊಗಟೆಯಿಂದ ತೆಗೆಯಲಾಗುತ್ತದೆ.

(ಕೀಟಗಳಿಗೆ ಬಂಜೆತನ ವಿಧಾನ- ಸ್ಟೆರೈಲ್ ಇನ್ಸ್ ಕ್ಟೆ ತಂತ್ರಜ್ಞಾನದ ಮೂಲಕ ಹೆಣ್ಣು ಸೊಳ್ಳೆಗೆ ಬಂಜೆತನ ಉಂಟು ಮಾಡಿ ಅದರ ವಂಶಾಭಿವೃದ್ಧಿಯಾಗದಂತೆ ಮಾಡುವುದಾಗಿದೆ.)

ವಿಶ್ವಸಂಸ್ಥೆಯ ಒಂದಿಷ್ಟು ಮಾಹಿತಿ

ವಿಶ್ವ ಸಂಸ್ಥೆ


ಮೂರನೇ ಮಹಾಯುದ್ದ ನಡೆಯಬಾರದೆಂದೂ ವಿಶ್ವದ ಪ್ರಮುಖ ವ್ಯಕ್ತಿಗಳು ಚರ್ಚಿಸಿದರ ಫಲವಾಗಿ 1945 ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಸ್ಥಾಪನೆಯಾಯಿತು.
ಅಕ್ಟೋಬರ್ 24ನ್ನು ವಿಶ್ವಸಂಸ್ಥೆಯ ದಿನಾಚರಣೆಯಾಗಿ ಆಚರಿಸುತ್ತಾರೆ
ವಿಶ್ವಸಂಸ್ಥೆಯ ಸ್ಥಾಪನೆಗೆ ಕಾರಣರಾದ ವ್ಯಕ್ತಿಗಳು
1) ಅಮೇರಿಕಾದ ಅಧ್ಯಕ್ಷ ಪ್ರಾಂಕ್ಲಿನ್ ಡಿ ರೂಸವೆಲ್ಟ್
2) ಇಂಗ್ಲೇಂಡ್ ನ ಚರ್ಚಿಲ್
3) ರಷ್ಯಾದ ಜೋಸೆಪ್ ಸ್ಟಾಲಿನ್

ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು
1) ಅಮೇರಿಕಾ ಅದರ ರಾಜಧಾನಿ ವಾಷಿಂಗಟನ್ ಡಿಸಿ ಕರೆನ್ಸಿ ಡಾಲರ್
2) ರಷ್ಯಾ ಅದರ ರಾಜಧಾನಿ ಮಾಸ್ಕೋ ಕರೆನ್ಸಿ ರೋಬಾಲ್
3) ಚೀನಾ ರಾಜಧಾನಿ ಬೀಜಿಂಗ್ ಕರೆನ್ಸಿ ಯೆಯನ್
4) ಪ್ರಾನ್ಸ್ ರಾಜಧಾನಿ ಪ್ಯಾರಿಸ್ ಕರೆನ್ಸಿ ಪ್ರಾಂಕ್ (ಯುರೋ)
5) ಇಂಗ್ಲೇಂಡ್ ಅದರ ರಾಜಧಾನಿ ಲಂಡನ್ ಕರೆನ್ಸಿ ಪೌಲ್

ವಿಶ್ವಸಂಸ್ಥೆಯ ಧ್ವಜ:
ಆಲೀವ್ ರೆಂಬೆಗಳ ಮಧ್ಯದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಾವುಟವಿರುವ ವಿಶ್ವದ ನಕಾಶೆ. ಇದನ್ನು 1945 ಅಕ್ಟೋಬರ್ 20 ರಂದು ಅಂಗೀಕರಿಸಲಾಯಿತು


*ವಿಶ್ವಸಂಸ್ಥೆ ಕಟ್ಟಲು ಸ್ಥಳ ಕೊಟ್ಟ ವ್ಯಕ್ತಿ: ಅಮೇರಿಕಾದ ಶ್ರೀಮಂತ ರಾಂಕ್ ಪಿಲ್ಲರ್
* ವಿಶ್ವಸಂಸ್ಥೆ ಎಂದು ಮೊದಲ ಬಾರಿಗೆ ಕರೆದಂತಹ ವ್ಯಕ್ತಿ: ಪ್ರಾಂಕ್ಲಿನ್ ಡಿ ರೂಸವೆಲ್ಟ್
ವಿಶ್ವಸಂಸ್ಥೆಯ ಗುರಿ ಮತ್ತು ಉದ್ಧೇಶಗಳು
* ರಾಷ್ಟ್ರ ರಾಷ್ಟ್ರಗಳ ಮಧ್ಯೆ ಬಾತೃತ್ವ ಭಾವನೆ ಮೂಡಿಸುತ್ತದೆ
* ಭಯೋತ್ಪಾದನೆ ನಿಗ್ರಹಿಸಲು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡುತ್ತದೆ
* ಮಾರಕ ರೋಗಗಳ ವಿರುದ್ದ ಜಾಗೃತಿ ಮೂಡಿಸುತ್ತದೆ
* ವಿಶ್ವದ ಸ್ತ್ರೀಯರ, ಮಕ್ಕಳ, ಕಾರ್ಮಿಕರ ಕಲ್ಯಾಣ ಸಾಧಿಸುತ್ತದೆ
* ಹವಮಾನ ವೈಪರಿತ್ಯವನ್ನು ತಡೆಯಲು ತನ್ನದೇ ಆದ ಸಲಹೆ ನೀಡುತ್ತದೆ
* ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಣೆ ಮಾಡುತ್ತದೆ
* ವಿಶ್ವದ ಸಾಮಾಜಿಕ ಮತ್ತು ಆರ್ಥಿಕ ಸಮನ್ವಯ ಸಾಧಿಸುತ್ತದೆ

ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು
1) ಸಾಮಾನ್ಯ ಸಭೆ
2) ಭಧ್ರತಾ ಮಂಡಳಿ
3) ಸಾಮಾಜಿಕ ಮತ್ತು ಆರ್ಥಿಕ ಮಂಡಳಿ
4) ಅಂತರಾಷ್ಟ್ರೀಯ ನ್ಯಾಯಲಯ
5) ಧರ್ಮದರ್ಶಿ ಮಂಡಳಿ
6) ಸಚಿವಾಲಯ

ವಿಶ್ವಸಂಸ್ಥೆಯ ವಿಶೇಷ ಅಂಶಗಳು
* ಅಂತರಾಷ್ಟ್ರೀಯ ನ್ಯಾಯಲಯವೊಂದನ್ನು ಹೊರತು ಪಡಿಸಿ ಉಳಿದ ಐದೂ ಅಂಗ ಸಂಸ್ಥೆಗಳ ಕೇಂದ್ರ ಕಛೇರಿ ನ್ಯೂಯಾರ್ಕ್
* ವಿಶ್ವಸಂಸ್ಥೆ ಸಂಪೂರ್ಣವಾಗಿ ನಿವಾರಿಸಿದ ರೋಗ ಸಿಡುಬು
* ವಿಶ್ವಸಂಸ್ಥೆಯಲ್ಲಿ ಮೊದಲು ಚರ್ಚಿಸಲ್ಪಟ್ಟ ವಿಷಯ ರೋಗ ಏಡ್ಸ್
* ವಿಶ್ವಸಂಸ್ಥೆಗೆ ಸವಾಲಾಗಬಹುದಾದ ಪ್ರಸ್ತುತ ರೋಗ ಎಬೋಲಾ
* ವಿಶ್ವಸಂಸ್ಥೆಯ ಪರಿಸರ ರಾಯಭಾರಿಯಾಗಿ ಸೇವೆ ಸಲ್ಲಿಸದ ಭಾರತೀಯ ವ್ಯಕ್ತಿ ಎಪಿಜೆ ಅಬ್ದುಲ್ ಕಲಾಂ
* ವಿಶ್ವಸಂಸ್ಥೆಯ ಶಿಕ್ಷಣದ ಮಾರ್ಗದರ್ಶಕರಾಗಿ ಸೇವೆ ಭಾರತದ ವ್ಯಕ್ತಿ ಡಾ: ರಾಧಕೃಷ್ಣನ್
* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಬಾರತದ ಮಹಿಳೆ ಕಿರಣ್ ಬೇಡಿ
* ವಿಶ್ವಸಂಸ್ಥೆಯ ಏಡ್ಸ್ ರಾಯಭಾರಿಯಾಗಿ ನೇಮಕವಾದ ಭಾರತದ ಮಹಿಳೆ ಐಶ್ವರ್ಯಾ ರೈ
* ವಿಶ್ವಸಂಸ್ಥೆಯ ಮಕ್ಕಳ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಭಾರತೀಯ ವ್ಯಕ್ತಿ ರವಿಶಾಸ್ತ್ರೀ
* ವಿಶ್ವಸಂಸ್ಥೆಯ ಹವಮಾನ ವೈಪರಿತ್ಯದ ಕುರಿತು ಭಾಷಣ ಮಾಡಿದ ಭಾರತದ ಬಾಲಕಿ ಯುಗರತ್ನ ಶ್ರೀವಾಸ್ತವ
* ವಿಶ್ವಸಂಸ್ಥೆಯ ವಿಶೇಷ ಪ್ರಶಸ್ತಿ ಪಡೆದ ಮಹಿಳೆಯರು (ಇತ್ತೀಚೆಗೆ) ಕರ್ನಾಟಕದ ಅಶ್ವಿನಿ ಅಂಗಡಿ ಉತ್ತರ ಪ್ರದೇಶದ ರಜಿಯಾ

ಸಾಮಾನ್ಯ ಜ್ಞಾನ

***************************************************************************************

       ವಿಶೇಷ ಸೂಚನೆ:: "*" ಈ ಸಿಂಬಲ್ ಸರಿ ಉತ್ತರವನ್ನು ಸೂಚಿಸುತ್ತದೆ

***************************************************************************************
1. ಗೋವಾದ ಅರ್ವಾಲೆಂ ಪರ್ವತ ಶ್ರೇಣಿಯಲ್ಲಿ ಗುಹಾಂತರ ದೇವಾಲಯವೊಂದನ್ನು ನಿರ್ಮಿಸಿದವರು?
ಅ. ಕದಂಬರು****
ಬ. ಗಂಗರು
ಸಿ. ಚೋಳರು
ಡಿ. ರಾಷ್ಟ್ರಕೂಟರು

2. ಕೆರೆಯೊಂದರ ದಡದ ಮೇಲೆ ಯಮನು ಪಂಚ ಪಾಂಡವರಿಗೆ ಯಕ್ಷ ಪ್ರಶ್ನೆಗಳನ್ನು ಹಾಕಿದ್ದನಂತೆ, ಆ ಕೆರೆಯ ದಡದಲ್ಲಿಯೇ ನಾಲ್ವರು ಪಾಂಡವರೂ ಮೂರ್ಛೆ ಹೋಗಿದ್ದು, ಯುಧೀಷ್ಠಿರ ತನ್ನ ಧೀರ ಉತ್ತರಗಳಿಂದ ತನ್ನ ಸಹೋದರರ ಪ್ರಾಣ ಉಳಿಸಿದ್ದು ಸಹ ಆ ಕೆರೆಯ ದಡದಲ್ಲಿಯೇ ಹಾಗಾದರೆ ಆ ಕೆರೆಯ ಹೆಸರೇನು?
ಅ. ಶಾಂತಿ ಕೆರೆ (ಕರ್ನಾಟಕ)
ಬ. ಪುಷ್ಕರ ಕೆರೆ (ರಾಜಸ್ಥಾನ)
ಸಿ. ಕೇತಾಸ್ ಕೆರೆ (ಪಾಕಿಸ್ಥಾನ)***
ಡಿ. ವುಲಾರ್ ಸರೋವರ (ಕಾಶ್ಮೀರ)

3. 1800ರಲ್ಲಿ ಥಾಮಸ್ ಮನ್ರೋ ಯಾವ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ?
ಅ. ಕಾರವಾರ
ಬಿ. ಮೈಸೂರು
ಸಿ. ಬೆಂಗಳೂರು
ಡಿ. ಬಳ್ಳಾರಿ***

4. ನಾರ್ವೆ, ಸ್ವೀಡನ್ ಮತ್ತು ಡೆನ್ಮಾರ್ಕ್ ರಾಷ್ಟ್ರಗಳನ್ನು ಸೇರಿಕೊಂಡಿರುವ ಪ್ರದೇಶವನ್ನು ಸ್ಕ್ಯಾಂಡಿನೆವಿಯ ಎನ್ನುತ್ತಾರೆ. ಹೀಗೆಂದು ಮೊತ್ತ ಮೊದಲು ಕರೆದವರು?
ಅ. ಆಗಸ್ಟ್ ಕಾಮ್ಟೆ
ಬ. ರೋಮನ್ ಬರಹಗಾರ ಪ್ಲೀನಿ***
ಸಿ. ಸಾಕ್ರಟೀಸ್
ಡಿ. ರೋಷನ್ ಜಗಳೂರು

5. ಪ್ರಾರ್ಥನ ಸಮಾಜದ ಸದಸ್ಯರಾಗಿದ್ದ ಎನ್.ಜಿ.ಚಂದಾವರಕರ್ ಮೂಲತ: ಯಾವ ಜಿಲ್ಲೆಯವರು?
ಅ. ಉತ್ತರ ಕನ್ನಡ***
ಬ. ಬೀದರ್
ಸಿ. ದಾವಣಗೆರೆ
ಡಿ. ಗುಲ್ಬರ್ಗಾ

6. ರಾಬರ್ಟ್ ಕ್ಲೈವ್ ಸತ್ತಿದ್ದು ಹೇಗೆ?
ಅ. ಯುದ್ದವೊಂದರಲ್ಲಿ ಹೋರಾಡುತ್ತಾ ಸತ್ತ
ಬ. ಆತ್ಮಹತ್ಯೆ ಮಾಡಿಕೊಂಡು***
ಸಿ. ಭ್ರಷ್ಟಚಾರ ಆರೋಪದಡಿ ನೇಣಿಗೆ ಹಾಕಲಾಯಿತು
ಡಿ. ಸಹಜ ಸಾವು

7. ನಮ್ಮ ರಾಜ್ಯದಲ್ಲಿ ಥಿಯೋಸಾಫಿಕಲ್ ಸೊಸೈಟಿ 1886ರಲ್ಲಿ ಬೆಂಗಳೂರಿನಲ್ಲಿ ತನ್ನ ಮೊದಲ ಕೇಂದ್ರವನ್ನು ಸ್ಥಾಪಿಸಿದರೆ ಬ್ರಹ್ಮಸಮಾಜವು 1870ರಲ್ಲಿ ತನ್ನ ಮೊದಲ ಶಾಖೆಯನ್ನು ಎಲ್ಲಿ ಸ್ಥಾಪಿಸಿತು?
ಅ. ಬೆಂಗಳೂರು
ಬ. ಮಂಗಳೂರು***
ಸಿ. ಮೈಸರೂ
ಡಿ. ಚಿಕ್ಕಬಳ್ಳಾಪುರ

8. ಬ್ಲಡ್ ಹೌಂಡ್ ಎಂಬ ನಾಯಿ ತಳಿಯು ಏಕೆ ಪ್ರಸಿದ್ದ?
ಅ. ಕಳ್ಳತನ ಮಾಡಲು ಬಳಸುವರು
ಬ. ಅಲಸ್ಕಾದಲ್ಲಿ ವಾಹನಗಳನ್ನು ಎಳೆಯಲು ಬಳಸುವರು
ಸಿ. ಅಪರಾಧಿಗಳನ್ನು ಪತ್ತೆ ಹಚ್ಚಲು ಬಳಸುತ್ತಾರೆ***
ಡಿ. ಸಾಕಾಣಿಕೆಗಾಗಿ ಬಳಸುತ್ತಾರ

9. ಕರ್ನಾಟಕದ ವಿಧಾನ ಪರಿಷತ್ತಿನ ಇರುವ ಸದಸ್ಯರ ಸಂಖ್ಯೆ ಎಷ್ಟು?
ಅ. 77
ಬ. 224
ಸಿ. 225
ಡಿ. 75****

10. ಪ್ರೌನ್ ಹೋಪರ್ (fraun hofer line) ರೇಖೆಗಳು ಎಲ್ಲಿ ಕಾಣ ಸಿಗುತ್ತವೆ?
ಅ. ಚಂದ್ರನ ಪರ್ವತಗಳಲ್ಲಿ
ಬ. ಸೂರ್ಯನ ಕರೋನದಲ್ಲಿ***
ಸಿ. ಭೂಮಿಯ ಧ್ರುವ ಪ್ರದೇಶದಲ್ಲಿ
ಡಿ. ಗುರುಗ್ರಹದ ಬಳೆಗಳಲ್ಲಿ

11. ಮ್ಯಾಗ್ನೆಟ್ ಮೊದಲು ಪತ್ತೆ ಹಚ್ಚಿದವರು ಯಾರು?
ಅ. ಹ್ಯಾರಿಸ್ ಎಂಬ ದನಗಾಹಿ
ಬ. ಡೈಮೇನೆಟ್ ಎಂಬ ಕೋಳಿ ಸಾಕುವವ
ಸಿ. ಮ್ಯಾಗ್ನಸ್ ಎಂಬ ಕುರಿ ಕಾಯುವವ***
ಡಿ. ಜೋಸೆಪ್ ಎಂಬ ಪಾದ್ರಿ

12. ಈ ಕೆಳಗಿನವುಗಳಲ್ಲಿ ಪ್ಯಾರಕಾಂತೀಯ ಅಲೋಹ ಯಾವುದು?
ಅ. ಪ್ಲಾಟಿನಮ್
ಬ. ಮೆಗ್ನೇಷಿಯಂ
ಸಿ. ಅಲ್ಯುಮಿನಿಯಂ
ಡಿ. ಆಕ್ಸಿಜನ್***

13. ಅಂಟಾರ್ಕ್ಟಿಕಾದಲ್ಲಿರುವ ಪರ್ವತವೊಂದಕ್ಕೆ ಭಾರತೀಯ ಮೂಲದವರೊಬ್ಬರ ಹೆಸರನ್ನು ಇಡಲಾಗಿದೆ. ಅವರ ಹೆಸರೇನು?
ಅ. ರಾಜೇಂದ್ರ ಪಚೋರಿ
ಬ. ಅಖೋರಿ ಸಿನ್ಹ***
ಸಿ. ಅಮಾರ್ತ್ಯ ಸೇನ್
ಡಿ. ಮೇಲಿನ ಯಾರು ಅಲ್ಲ

14. ಬೌದ್ಧ ಧರ್ಮದ ಮೊದಲ ಸಂನ್ಯಾಸಿನಿ ಯಾರು?
ಅ. ಸುಜಾತ
ಬ. ಮಾಯಾದೇವಿ
ಸಿ. ಗೌತಮಿ***
ಡಿ. ಅವಲೋಕಿತೇಶ್ವರಿ

15. ಮೊದಲ ಮೂರು ಕನ್ನಡ ಸಾಹಿತ್ಯ ಸಮ್ಮೇಲನದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?
ಅ. ಬಿ.ಎಂ.ಶ್ರೀ
ಬ. ಕುವೆಂಪು
ಸಿ. ಆಲೂರು ವೆಂಕಟರಾಯ
ಡಿ. ಹೆಚ್.ವಿ.ನಂಜುಂಡಯ್ಯ***

16. ತೀಜ್ ಎಂಬ ಹಬ್ಬವನ್ನು ಯಾರು ಆಚರಿಸುತ್ತಾರೆ?
ಅ. ಗ್ಯಾರೋ ಜನಾಂಗ
ಬ. ಲಂಬಾಣಿ ಜನಾಂಗ***
ಸಿ. ಖಾಸಿ
ಡಿ. ಮುಂಡಾ

17. ರೆಡಾರ್ ಸಂಶೋದಕ ಯಾರು?
ಅ. ವ್ಯಾಟ್ಸನ್ ಮತ್ತು ಕ್ರಿಕ್
ಬಿ. ರಾಬಿನ್ ಸನ್ ರಾಬಿನ್ ಹುಡ್
ಸಿ. ರಾಬರ್ಟ್ ಎ ವ್ಯಾಟ್ಸನ್ ವಟ್***
ಡಿ. ಮೇಲಿನ ಎಲ್ಲರೂ

18. ನೈಸರ್ಗಿಕ ಯುರೇನಿಯಂ ಬಳಸಿ ವಿದ್ಯುತ್ ಉತ್ಪಾದಿಸಿದ ಮೊದಲ ಅಣು ಸ್ಥಾವರ ಯಾವುದು?
ಎ. ಕೈಗಾ
ಬಿ. ನರೋರ
ಸಿ. ಕಲ್ಪಾಕಮ್***
ಡಿ. ರಟ್ಟನಹಳ್ಳಿ

19. ಭಾರತದ ಮೊದಲ ನ್ಯೂಕ್ಲಿಯರ್ ರೀಸರ್ಚ್ ರಿಯಾಕ್ಟರ್ ಯಾವುದು?
ಎ. ರಂಬೆ
ಬಿ. ಅಪ್ಸರಾ****
ಸಿ. ಕಾಮಿನಿ
ಡಿ. ಊರ್ವಸಿ
**********************************************************************
(gkmani2u Roshan Jagalur
ಜಿಕೆಮಣಿ ರೋಷನ್ ಜಗಳೂರು)
****************************************************************
*******

ಸಾಮಾನ್ಯ ಜ್ಞಾನ

***************************************************************************************
       ವಿಶೇಷ ಸೂಚನೆ:: "*" ಈ ಸಿಂಬಲ್ ಸರಿ ಉತ್ತರವನ್ನು ಸೂಚಿಸುತ್ತದೆ
***************************************************************************************
1. ಗೋವಾದ ಅರ್ವಾಲೆಂ ಪರ್ವತ ಶ್ರೇಣಿಯಲ್ಲಿ ಗುಹಾಂತರ ದೇವಾಲಯವೊಂದನ್ನು ನಿರ್ಮಿಸಿದವರು?
ಅ. ಕದಂಬರು****
ಬ. ಗಂಗರು
ಸಿ. ಚೋಳರು
ಡಿ. ರಾಷ್ಟ್ರಕೂಟರು

2. ಕೆರೆಯೊಂದರ ದಡದ ಮೇಲೆ ಯಮನು ಪಂಚ ಪಾಂಡವರಿಗೆ ಯಕ್ಷ ಪ್ರಶ್ನೆಗಳನ್ನು ಹಾಕಿದ್ದನಂತೆ, ಆ ಕೆರೆಯ ದಡದಲ್ಲಿಯೇ ನಾಲ್ವರು ಪಾಂಡವರೂ ಮೂರ್ಛೆ ಹೋಗಿದ್ದು, ಯುಧೀಷ್ಠಿರ ತನ್ನ ಧೀರ ಉತ್ತರಗಳಿಂದ ತನ್ನ ಸಹೋದರರ ಪ್ರಾಣ ಉಳಿಸಿದ್ದು ಸಹ ಆ ಕೆರೆಯ ದಡದಲ್ಲಿಯೇ ಹಾಗಾದರೆ ಆ ಕೆರೆಯ ಹೆಸರೇನು?
ಅ. ಶಾಂತಿ ಕೆರೆ (ಕರ್ನಾಟಕ)
ಬ. ಪುಷ್ಕರ ಕೆರೆ (ರಾಜಸ್ಥಾನ)
ಸಿ. ಕೇತಾಸ್ ಕೆರೆ (ಪಾಕಿಸ್ಥಾನ)***
ಡಿ. ವುಲಾರ್ ಸರೋವರ (ಕಾಶ್ಮೀರ)

3. 1800ರಲ್ಲಿ ಥಾಮಸ್ ಮನ್ರೋ ಯಾವ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ?
ಅ. ಕಾರವಾರ
ಬಿ. ಮೈಸೂರು
ಸಿ. ಬೆಂಗಳೂರು
ಡಿ. ಬಳ್ಳಾರಿ***

4. ನಾರ್ವೆ, ಸ್ವೀಡನ್ ಮತ್ತು ಡೆನ್ಮಾರ್ಕ್ ರಾಷ್ಟ್ರಗಳನ್ನು ಸೇರಿಕೊಂಡಿರುವ ಪ್ರದೇಶವನ್ನು ಸ್ಕ್ಯಾಂಡಿನೆವಿಯ ಎನ್ನುತ್ತಾರೆ. ಹೀಗೆಂದು ಮೊತ್ತ ಮೊದಲು ಕರೆದವರು?
ಅ. ಆಗಸ್ಟ್ ಕಾಮ್ಟೆ
ಬ. ರೋಮನ್ ಬರಹಗಾರ ಪ್ಲೀನಿ***
ಸಿ. ಸಾಕ್ರಟೀಸ್
ಡಿ. ರೋಷನ್ ಜಗಳೂರು

5. ಪ್ರಾರ್ಥನ ಸಮಾಜದ ಸದಸ್ಯರಾಗಿದ್ದ ಎನ್.ಜಿ.ಚಂದಾವರಕರ್ ಮೂಲತ: ಯಾವ ಜಿಲ್ಲೆಯವರು?
ಅ. ಉತ್ತರ ಕನ್ನಡ***
ಬ. ಬೀದರ್
ಸಿ. ದಾವಣಗೆರೆ
ಡಿ. ಗುಲ್ಬರ್ಗಾ

6. ರಾಬರ್ಟ್ ಕ್ಲೈವ್ ಸತ್ತಿದ್ದು ಹೇಗೆ?
ಅ. ಯುದ್ದವೊಂದರಲ್ಲಿ ಹೋರಾಡುತ್ತಾ ಸತ್ತ
ಬ. ಆತ್ಮಹತ್ಯೆ ಮಾಡಿಕೊಂಡು***
ಸಿ. ಭ್ರಷ್ಟಚಾರ ಆರೋಪದಡಿ ನೇಣಿಗೆ ಹಾಕಲಾಯಿತು
ಡಿ. ಸಹಜ ಸಾವು

7. ನಮ್ಮ ರಾಜ್ಯದಲ್ಲಿ ಥಿಯೋಸಾಫಿಕಲ್ ಸೊಸೈಟಿ 1886ರಲ್ಲಿ ಬೆಂಗಳೂರಿನಲ್ಲಿ ತನ್ನ ಮೊದಲ ಕೇಂದ್ರವನ್ನು ಸ್ಥಾಪಿಸಿದರೆ ಬ್ರಹ್ಮಸಮಾಜವು 1870ರಲ್ಲಿ ತನ್ನ ಮೊದಲ ಶಾಖೆಯನ್ನು ಎಲ್ಲಿ ಸ್ಥಾಪಿಸಿತು?
ಅ. ಬೆಂಗಳೂರು
ಬ. ಮಂಗಳೂರು***
ಸಿ. ಮೈಸರೂ
ಡಿ. ಚಿಕ್ಕಬಳ್ಳಾಪುರ

8. ಬ್ಲಡ್ ಹೌಂಡ್ ಎಂಬ ನಾಯಿ ತಳಿಯು ಏಕೆ ಪ್ರಸಿದ್ದ?
ಅ. ಕಳ್ಳತನ ಮಾಡಲು ಬಳಸುವರು
ಬ. ಅಲಸ್ಕಾದಲ್ಲಿ ವಾಹನಗಳನ್ನು ಎಳೆಯಲು ಬಳಸುವರು
ಸಿ. ಅಪರಾಧಿಗಳನ್ನು ಪತ್ತೆ ಹಚ್ಚಲು ಬಳಸುತ್ತಾರೆ***
ಡಿ. ಸಾಕಾಣಿಕೆಗಾಗಿ ಬಳಸುತ್ತಾರ

9. ಕರ್ನಾಟಕದ ವಿಧಾನ ಪರಿಷತ್ತಿನ ಇರುವ ಸದಸ್ಯರ ಸಂಖ್ಯೆ ಎಷ್ಟು?
ಅ. 77
ಬ. 224
ಸಿ. 225
ಡಿ. 75****

10. ಪ್ರೌನ್ ಹೋಪರ್ (fraun hofer line) ರೇಖೆಗಳು ಎಲ್ಲಿ ಕಾಣ ಸಿಗುತ್ತವೆ?
ಅ. ಚಂದ್ರನ ಪರ್ವತಗಳಲ್ಲಿ
ಬ. ಸೂರ್ಯನ ಕರೋನದಲ್ಲಿ***
ಸಿ. ಭೂಮಿಯ ಧ್ರುವ ಪ್ರದೇಶದಲ್ಲಿ
ಡಿ. ಗುರುಗ್ರಹದ ಬಳೆಗಳಲ್ಲಿ

11. ಮ್ಯಾಗ್ನೆಟ್ ಮೊದಲು ಪತ್ತೆ ಹಚ್ಚಿದವರು ಯಾರು?
ಅ. ಹ್ಯಾರಿಸ್ ಎಂಬ ದನಗಾಹಿ
ಬ. ಡೈಮೇನೆಟ್ ಎಂಬ ಕೋಳಿ ಸಾಕುವವ
ಸಿ. ಮ್ಯಾಗ್ನಸ್ ಎಂಬ ಕುರಿ ಕಾಯುವವ***
ಡಿ. ಜೋಸೆಪ್ ಎಂಬ ಪಾದ್ರಿ

12. ಈ ಕೆಳಗಿನವುಗಳಲ್ಲಿ ಪ್ಯಾರಕಾಂತೀಯ ಅಲೋಹ ಯಾವುದು?
ಅ. ಪ್ಲಾಟಿನಮ್
ಬ. ಮೆಗ್ನೇಷಿಯಂ
ಸಿ. ಅಲ್ಯುಮಿನಿಯಂ
ಡಿ. ಆಕ್ಸಿಜನ್***

13. ಅಂಟಾರ್ಕ್ಟಿಕಾದಲ್ಲಿರುವ ಪರ್ವತವೊಂದಕ್ಕೆ ಭಾರತೀಯ ಮೂಲದವರೊಬ್ಬರ ಹೆಸರನ್ನು ಇಡಲಾಗಿದೆ. ಅವರ ಹೆಸರೇನು?
ಅ. ರಾಜೇಂದ್ರ ಪಚೋರಿ
ಬ. ಅಖೋರಿ ಸಿನ್ಹ***
ಸಿ. ಅಮಾರ್ತ್ಯ ಸೇನ್
ಡಿ. ಮೇಲಿನ ಯಾರು ಅಲ್ಲ

14. ಬೌದ್ಧ ಧರ್ಮದ ಮೊದಲ ಸಂನ್ಯಾಸಿನಿ ಯಾರು?
ಅ. ಸುಜಾತ
ಬ. ಮಾಯಾದೇವಿ
ಸಿ. ಗೌತಮಿ***
ಡಿ. ಅವಲೋಕಿತೇಶ್ವರಿ

15. ಮೊದಲ ಮೂರು ಕನ್ನಡ ಸಾಹಿತ್ಯ ಸಮ್ಮೇಲನದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?
ಅ. ಬಿ.ಎಂ.ಶ್ರೀ
ಬ. ಕುವೆಂಪು
ಸಿ. ಆಲೂರು ವೆಂಕಟರಾಯ
ಡಿ. ಹೆಚ್.ವಿ.ನಂಜುಂಡಯ್ಯ***

16. ತೀಜ್ ಎಂಬ ಹಬ್ಬವನ್ನು ಯಾರು ಆಚರಿಸುತ್ತಾರೆ?
ಅ. ಗ್ಯಾರೋ ಜನಾಂಗ
ಬ. ಲಂಬಾಣಿ ಜನಾಂಗ***
ಸಿ. ಖಾಸಿ
ಡಿ. ಮುಂಡಾ

17. ರೆಡಾರ್ ಸಂಶೋದಕ ಯಾರು?
ಅ. ವ್ಯಾಟ್ಸನ್ ಮತ್ತು ಕ್ರಿಕ್
ಬಿ. ರಾಬಿನ್ ಸನ್ ರಾಬಿನ್ ಹುಡ್
ಸಿ. ರಾಬರ್ಟ್ ಎ ವ್ಯಾಟ್ಸನ್ ವಟ್***
ಡಿ. ಮೇಲಿನ ಎಲ್ಲರೂ

18. ನೈಸರ್ಗಿಕ ಯುರೇನಿಯಂ ಬಳಸಿ ವಿದ್ಯುತ್ ಉತ್ಪಾದಿಸಿದ ಮೊದಲ ಅಣು ಸ್ಥಾವರ ಯಾವುದು?
ಎ. ಕೈಗಾ
ಬಿ. ನರೋರ
ಸಿ. ಕಲ್ಪಾಕಮ್***
ಡಿ. ರಟ್ಟನಹಳ್ಳಿ

19. ಭಾರತದ ಮೊದಲ ನ್ಯೂಕ್ಲಿಯರ್ ರೀಸರ್ಚ್ ರಿಯಾಕ್ಟರ್ ಯಾವುದು?
ಎ. ರಂಬೆ
ಬಿ. ಅಪ್ಸರಾ****
ಸಿ. ಕಾಮಿನಿ
ಡಿ. ಊರ್ವಸಿ
**********************************************************************
(gkmani2u Roshan Jagalur
ಜಿಕೆಮಣಿ ರೋಷನ್ ಜಗಳೂರು)
***********************************************************************