Thursday 30 April 2015

ನೇಪಾಳ

ನೇಪಾಳ
☀☀☀☀☀☀☀
ನೇಪಾಳವು ದಕ್ಷಿಣ ಏಷ್ಯಾದ ಒಂದು ರಾಷ್ಟ್ರ.
ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. *ನೇಪಾಳದ ಉತ್ತರಕ್ಕೆಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತವಿದೆ. 
*ಎವರೆಸ್ಟ್ ಸೇರಿದಂತೆ ವಿಶ್ವದ ಅತಿ ಉನ್ನತ 10 ಪರ್ವತ ಶಿಖರಗಳ ಪೈಕಿ 8 ನೇಪಾಳದಲ್ಲಿಯೇ ಇವೆ. *ನೇಪಾಳದ ವಿಸ್ತೀರ್ಣ 141,700 ಚ.ಕಿ.ಮೀ.
*ನೇಪಾಳ ರಾಷ್ಟ್ರದ ರಾಜಧಾನಿ ಕಾಠ್ಮಂಡು.
🌍🌎gkmani2u🌎🌎

ಇತಿಹಾಸ

*ಕ್ರಿ.ಪೂ.6ಮತ್ತು 5ನೇಯ ಶತಮಾನದಲ್ಲಿ ಈ ಪ್ರದೇಶವು "ಶಾಕ್ಯ" ಆಡಳಿತಕ್ಕೊಳಪಟ್ಟಿತ್ಥು.

*ಶಾಕ್ಯ ರಾಜಕುಮಾರರಲ್ಲೊಬ್ಬನಾದ 
ಸಿದ್ಧಾರ್ಥ ಗೌತಮನು ಐಹಿಕ ಪ್ರಾಪಂಚಿಕ ವ್ಯಾಮೋಹಗಳನ್ನು ತೊರೆದು ದಿವ್ಯ ಜ್ಞಾನವನ್ನು ಹೊಂದಿ ಮುಂದೆ ಬುದ್ಧನೆನಿಸಿಕೊಂಡನು.

*ಸುಮಾರು ಕ್ರಿ.ಪೂ. 250ರ ಸಮಯಕ್ಕೆ ಈ ಪ್ರದೇಶವು ಉತ್ತರ ಭಾರತದ ಮೌರ್ಯ ಸಾಮ್ರಾಜ್ಯದ ಅಂಗವಾಗಿತ್ತು. ತರುವಾಯ ಗುಪ್ತ ಸಾಮ್ರಾಟರು , ಲಿಚ್ಛವಿ ಸಾಮ್ರಾಟರು ಹಾಗೂ ಚಾಲುಕ್ಯರು ಈ ಪ್ರದೇಶದ ಮೇಲೆ ಹತೋಟಿ ಸಾಧಿಸಿದ್ದರು. ನಂತರ ಈ ಪ್ರದೇಶವು ಹಲವು ಸಣ್ಣ ಅರಸೊತ್ತಿಗೆಗಳಾಗಿ ಹಂಚಿಹೋಯಿತು.
*1765ರಲ್ಲಿ ಪೃಥ್ವಿನಾರಾಯಣ ಶಹ ಎಂಬ ಗೂರ್ಖಾ ಅರಸನು ನೇಪಾಳವನ್ನು ಒಂದುಗೂಡಿಸಿದನು. *ಭಾರತವು ಬ್ರಿಟಿಷ್ ಆಡಳಿತಕ್ಕೆ ಒಳಗಾದಾಗ ನೇಪಾಳವು ತನ್ನಸ್ವಾಯತ್ತತೆಯನ್ನು 
ಉಳಿಸಿಕೊಂಡಿತ್ತು. ಆಂಗ್ಲರೊಡನೆ ನಡೆದ ಒಂದು ಯುದ್ಧದಲ್ಲಿ ನೇಪಾಳವು ಸೋಲನುಭವಿಸಿತಾದರೂ, ತನ್ನ ಸ್ವಾತಂತ್ರ್ಯವನ್ನುಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಂಡಿತು.
ಇದರ ಪ್ರಕಾರ ನೇಪಾಳವು ಅಂದು ತನ್ನ ಪ್ರದೇಶಗಳಾಗಿದ್ದ ಉತ್ತರಾಖಂಡ ,
 ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಭಾಗಗಳನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿತು.
ಅಲ್ಲಿಂದ ಮುಂದೆ ಇತ್ತೀಚಿನವರೆವಿಗೂ ನೇಪಾಳವುಅರಸೊತ್ತಿಗೆಯಾಗಿಯೇ ಉಳಿದಿತ್ತು. ಈಚಿನ ದಿನಗಳಲ್ಲಿ ಪ್ರಜಾಸತ್ತೆಗಾಗಿ ಹೋರಾಟವು ತೀವ್ರಗೊಂಡು ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆಯನ್ನುಸ್ಥಾಪಿಸಲಾಯಿತು. ಅರಸರ ಅಧಿಕಾರಗಳನ್ನು ಬಹುಮಟ್ಟಿಗೆ ಮೊಟಕುಗೊಳಿಸಲಾಯಿತು. *1991ರಲ್ಲಿ ಪ್ರಪ್ರಥಮ ಬಹುಪಕ್ಷೀಯ ಹಾಗೂ ಮುಕ್ತ ಚುನಾವಣೆಗಳುನಡೆದವು.
🌍🌍gkmani2u🌎🌎

ಭೌಗೋಳಿಕ ಲಕ್ಷಣ

*ನೇಪಾಳವು ಸುಮಾರು 800 ಕಿ.ಮೀ. ಉದ್ದ ಹಾಗೂ 200ಕಿ.ಮೀ. ಅಗಲದ ಪಟ್ಟಿಯಂತೆ ಕಾಣುವುದು. *ಭೌಗೋಳಿಕವಾಗಿ ದೇಶವನ್ನು ಉನ್ನತ ಪರ್ವತ ಪ್ರದೇಶ, ಬೆಟ್ಟಗುಡ್ಡಗಳ ಪ್ರದೇಶ ಹಾಗೂ ತರಾಯ್ ಪ್ರದೇಶಗಳೆಂದು ವಿಂಗಡಿಸಬಹುದು.
*ಭಾರತದ ಗಡಿಗೆ ಹೊಂದಿಕೊಂಡಿರುವ ಪ್ರದೇಶವು ಗಂಗಾ ಬಯಲಿನ ಒಂದು ಭಾಗವಾಗಿದೆ.
*ಈ ಭಾಗಕ್ಕೆ ಕೋಸಿ,  ನಾರಾಯಣಿ (ಗಂಡಕಿ)
ಮತ್ತು ಕರ್ನಾಲಿ ನದಿಗಳು ನೀರುಣಿಸುತ್ತವೆ.
*ಬೆಟ್ಟಗುಡ್ಡಗಳ ಪ್ರದೇಶವು ಕಾಠ್ಮಂಡು ಕಣಿವೆಯನ್ನು ಒಳಗೊಂಡಿದೆ. ದೇಶದ ಹೆಚ್ಚಿನ ಜನವಸತಿ ಇಲ್ಲಿಯೇ ಕಂಡುಬರುವುದು. ಈ ಪ್ರದೇಶದಲ್ಲಿ ಮಹಾಭಾರತ ಲೇಖ್ ಮತ್ತು ಶಿವಾಲಿಕ ಪರ್ವತಶ್ರೇಣಿಗಳುಇವೆ.
ಈ ಶ್ರೇಣಿಗಳು ಮಧ್ಯಮ ಮಟ್ಟದವಾಗಿದ್ದು ಸರಾಸರಿ 1000ದಿಂದ 4000ಮೀ. ವರೆಗೆ ಎತ್ತರವುಳ್ಳವಾಗಿವೆ.
*ಹಿಮಾಲಯದ ಉನ್ನತ ಪರ್ವತ ಪ್ರದೇಶವು ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಎತ್ತರದ ಪ್ರದೇಶವಾಗಿದೆ.ಎವರೆಸ್ಟ್ , 
ಕಾಂಚನ್ ಜುಂಗಾ, 
ಅನ್ನಪೂರ್ಣಾ , ಮಕಾಲು ,ಧವಳಗಿರಿ ಸೇರಿದಂತೆ ವಿಶ್ವದ ಹಲವು ಅತ್ಯುನ್ನತ ಶಿಖರಗಳು ಈ ವಿಭಾಗದಲ್ಲಿ ಇವೆ. 
🌍🌍Roshan 8497078528🌎

ಅರ್ಥವ್ಯವಸ್ಥೆ

*ನೇಪಾಳವು ಕೃಷಿಪ್ರಧಾನ ದೇಶ. ದೇಶದ ೭೬% ಜನರು ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. 
*ಬತ್ತ,ಗೋಧಿ, ಕಬ್ಬು ಮತ್ತು ಸೆಣಬು ಮುಖ್ಯ ಬೆಳೆಗಳು. ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವುದಕ್ಕೇ ಸೀಮಿತ. 
*ಪ್ರವಾಸೋದ್ಯಮವು ದೇಶದ ಪ್ರಮುಖ ಆರ್ಥಿಕ ಚಟುವಟಿಕೆ.
🌍🌎gkmani2u🌍🌍

*ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರ.
*ದೇಶದ ಅಧಿಕೃತ ಭಾಷೆ ನೇಪಾಲಿ. ಉಳಿದಂತೆ ಮೈಥಿಲಿ,
ಭೋಜಪುರಿ ಮತ್ತು ಅವಧಿ 
ಭಾಷೆಗಳು ನುಡಿಯಲ್ಪಡುತ್ತವೆ.
* ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ.
*ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ ಹಿಂದೂ ಸಂಸ್ಕೃತಿಯ ಗಾಢ ಛಾಯೆ ಇದೆ.
*ನೇಪಾಳವು ಭಾರತವನ್ನು ಬಹಳವಾಗಿ ಅವಲಂಬಿಸಿದೆ. ಆರ್ಥಿಕ ಸಹಾಯ , ತಂತ್ರಜ್ಞಾನ, ರಕ್ಷಣೆ ಇವುಗಳೆಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದಲೇ ನೇಪಾಳಕ್ಕೆ ಒದಗಿದೆ.

No comments:

Post a Comment

Comment