Wednesday 29 April 2015

ಮಲೇರಿಯಾ ಮಾಹಿತಿ

 ಏಪ್ರಿಲ್ 25 ರ ವಿಶ್ವ ಮಲೇರಿಯಾ ದಿನ:: ಅದರ ಒಂದಿಷ್ಟು ಮಾಹಿತಿ


* ಪ್ರಪಂಚದಾದ್ಯಂತ ಪ್ರತಿ ದಿನ ಮಲೇರಿಯಾಕ್ಕೆ 1200ಕ್ಕೂ ಹೆಚ್ಚು ಮಕ್ಕಳು ಬಲಿಯಾಗುತ್ತಿದ್ದಾರೆ.
* ಪ್ರತಿ ಗಂಟೆಗೆ 50 ಮಕ್ಕಳು ಮಲೇರಿಯಾಗೆ ತುತ್ತಾಗುತ್ತಿದ್ದಾರೆ.
* ಪ್ರತಿ ವರ್ಷ 10.000 ಗರ್ಭಿಣಿ ಮಹಿಳೆಯರು ಮಲೇರಿಯಾದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
* 2 ಲಕ್ಷ ಶಿಶುಗಳು ಬಲಿಯಾಗುತ್ತಿವೆ, ಕಳೆದ 15ವರ್ಷಗಳಿಂದ ಶೇ.40ರಷ್ಟು ಮಕ್ಕಳು ಮಲೇರಿಯಾ ರೋಗದಿಂದ ಸಾಯುತ್ತಿದ್ದಾರೆ ಎಂದು ಯುನಿಸೆಫ್ ಹೇಳಿದೆ

*ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಮಲೇರಿಯಾದಿಂದ ಮರಣ ಹೊಂದುವವರ ಪ್ರಮಾಣವು  ವಿಶ್ವದಾದ್ಯಂತ ಶೇ.47ರಷ್ಟು ತಗ್ಗಿದೆ.
ಆಪ್ರಿಕಾದಲ್ಲೇ ಶೇ. 54ರಷ್ಟು ಪ್ರಮಾಣ ಕಡಿಮೆಯಾಗಿದೆ.  2001ರಿಂದ 4ದಶಲಕ್ಷಕ್ಕೂ ಹೆಚ್ಚಿನ ಸಾವುಗಳು ಮಲೇರಿಯಾ ಕಾರಣಗಳಿಂದ ಸಂಭವಿಸಿವೆ.
ಮಲೇರಿಯಾ ಕಾರಣಗಳಿಂದ ಅಸುನೀಗಿದ ಮಕ್ಕಳಲ್ಲಿ ಶೇ.97ರಷ್ಟು 5 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.
*2012ರಲ್ಲಿ 6,27,000 ಸಾವುಗಳು ಮಲೇರಿಯಾದಿಂದ ಸಂಭವಿಸಿವೆ.
*2013ರಲ್ಲಿ ಜಗತಿನಾದ್ಯಂತ 5,84,000 ಮಂದಿ ಮಲೇರಿಯಾದಿಂದ ಸತ್ತಿದ್ದಾರೆ. ಇದರಲ್ಲಿ ಶೆ90ರಷ್ಟು ಪ್ರಕರಣ ಆಪ್ರಿಕಾದಲ್ಲಿ ಘಟಿಸಿದೆ.
*2001-13ರ ನಡುವೆ 4.3 ದಶಲಕ್ಷ ಮಂದಿಯನ್ನು ಮಲೇರಿಯಾದಿಂದ ರಕ್ಷಿಸಲಾಗಿದೆ. ಇದರಲ್ಲಿ ಶೇ.92ರಷ್ಟು (3.9ದಶಲಕ್ಷ) 5 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಉಪ ಸಹರಾ ಆಪ್ರಿಕಾದಲ್ಲಿ ರಕ್ಷಿಸಲಾಗಿದೆ.
* ಪ್ರತಿ ವರ್ಷ ಏ.25ನ್ನು ವಿಶ್ವ ಮಲೇರಿಯಾ ದಿನ ಎಂದು ಆಚರಿಸಲಾಗುತ್ತದೆ. 106ದೇಶಗಳಲ್ಲಿ 3.3 ದಶಲಕ್ಷ ಮಂದಿ ಮಲೇರಿಯಾ ರೋಗಕ್ಕೆ ಒಳಗಾಗಿದ್ದಾರೆ.


(ಮಾಹಿತಿ ರೋಷನ್ ಜಗಳೂರು 8497078528)

ಮಲೇರಿಯಾ: ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಪ್ಲಾಸ್ಮೋಡಿಯಂ ಎಂಬ ಆದಿಜೀವಿ ಹಾಗೂ ಪರೋಪ ಜೀವಿ ಜಾತಿಗೆ ಸೇರಿದ ಐದು ಪ್ರಭೇದಗಳಾದ
"ಪ್ಲಾಸ್ಮೋಡಿಯಂ ವೈವಾಕ್ಸ್"
"ಪ್ಲಾಸ್ಮೋಡಿಯಂ ಓವಲೆ"
"ಪ್ಲಾಸ್ಮೋಡಿಯಂ ಮಲೇರಿಯಾ"
"ಪ್ಲಾಸ್ಮೋಡಿಯಂ ಫಾಲ್ಸಿಪಾರಮ್"
"ಪ್ಲಾಸ್ಮೋಡಿಯಂ ನ್ಯೋಲೆಸಿ"
ಎಂಬ ಆದಿಜೀವಿಗಳಿಂದ ಹರಡುತ್ತದೆ.


* ಪ್ಲಾಸ್ಮೋಡಿಯಂ ಫಾಲ್ಸಿಪಾರಮ್ ಎಂಬ ಪ್ರಭೇದವು ಅತ್ಯಂತ ಅಪಾಯಕಾರಿಯಾದಂತಹ ಆದಿ ಜೀವಿಯಾಗಿದೆ.
* ಮಲೇರಿಯಾವನ್ನು "ಅನಾಫಿಲಿಸ್" ಜಾತಿಯ ಹೆಣ್ಣು ಸೊಳ್ಳೆಯು ಹರಡುತ್ತದೆ.

* ಸರ್ ರೋನಾಲ್ಡ್ ರೋಸ್ ಎಂಬ ಬ್ರಿಟೀಷ್ ವೈದ್ಯನು ಅನಾಫಿಲಿಸ್ ಸೊಳ್ಳೆಯಲ್ಲಿ ಮಲೇರಿಯಾದ ಪರವಾಲಂಭಿಗಳು ಇರುವುದನ್ನು ಸಂಶೋಧಿಸಿ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯು ಮಲೇರಿಯಾ ರೋಗ ಹಡರಲು ಮುಖ್ಯ ಕಾರಣವೆಂದು ಕಂಡು  ಹಿಡಿದನು. ಅದಕ್ಕಾಗಿ ಅವರಿಗೆ 1902ರಲ್ಲಿ ವೈದ್ಯಕೀಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ನೀಡಲಾಯಿತು.

*ಮಲೇರಿಯಾದ ಲಕ್ಷಣವೆಂದರೆ ಗಡುವಿನ ಜ್ವರ (24ಘಂಟೆ ಅಥವಾ 48ಗಂಟೆಗಳಿಗೊಮ್ಮೆ ಕಾಣಿಸುವ ಜ್ವರ), ವಿಪರೀತ ಚಳಿ, ನಡುಕ, ರಕ್ತಹೀನತೆ, ಗುಲ್ಮಾ ದೊಡ್ಡದಾಗುತ್ತದೆ.
* ಇದರಿಂದ ಕೆಂಪು ರಕ್ಷ ಕಣಗಳು ನಾಶಗೊಂಡು ಪರಾವಲಂಭೀಗಳು ರಕ್ತದ ಪ್ರವಾಹದಲ್ಲಿ ಬಿದ್ದಾಗ ಜ್ವರ, ತಲೆನೋವು ಮತ್ತು ಚಳಿ, ಕೀಲು ನೋವು ಬರುತ್ತದೆ.
* ಈ ರೋಗವನ್ನು ರಕ್ತ ಪರೀಕ್ಷೆಯ ಮೂಲಕ ಪತ್ತೆ ಹಚ್ಚಬಹುದು.
* ರಾಷ್ಟ್ರೀಯ ಮಲೇರಿಯಾ ನಿಯಂತ್ರಣದಡಿಯಲ್ಲಿ ಕ್ಲೋರೋ ಕ್ವಿನೈನ್, ಪ್ರೈಮಿಧಾಅಮೈನ್, ಪ್ರೈಮಾಕ್ವೈನ್, ಅಟೋವಾಕ್ವಯೋನ್, ಸಲ್ಪೋಡಾಕ್ಸಿನ್ ಮತ್ತು ಪ್ರೈಮ್ಯಾಕ್ಸಿನ್ ಎಂಬ ಔಷಧಿಯಿಂದ ಗುಣಪಡಿಸಲಾಗುವುದು.
* ಮಲೇರಿಯಾವನ್ನು ಹರಡುವ ಸೊಳ್ಳೆಗಳನ್ನು ತಡೆಯಲು ಕೀಟ ನಾಶಕವಾದ ಡಿ.ಡಿ.ಟಿಯನ್ನು  ಬಳಸಲಾಗುತ್ತಿದೆ.
* ಕ್ವಿನೈನ್ ಎಂಬ ಔಷದವನ್ನು ಮಲೇರಿಯಾ ರೋಗ ನಿವಾರಣಗೆ ಬಳಸಲಾಗುತ್ತಿದೆ.  ಇದನ್ನು 'ಸಿಂಕೋನ ಮರ'ದ ತೊಗಟೆಯಿಂದ ತೆಗೆಯಲಾಗುತ್ತದೆ.

(ಕೀಟಗಳಿಗೆ ಬಂಜೆತನ ವಿಧಾನ- ಸ್ಟೆರೈಲ್ ಇನ್ಸ್ ಕ್ಟೆ ತಂತ್ರಜ್ಞಾನದ ಮೂಲಕ ಹೆಣ್ಣು ಸೊಳ್ಳೆಗೆ ಬಂಜೆತನ ಉಂಟು ಮಾಡಿ ಅದರ ವಂಶಾಭಿವೃದ್ಧಿಯಾಗದಂತೆ ಮಾಡುವುದಾಗಿದೆ.)

No comments:

Post a Comment

Comment