Tuesday 25 November 2014

ಲಾಲ್ ಬಹದ್ದೂರ್ ಶಾಸ್ತ್ರಿ




  • ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಮೊದಲು ಪಡೆದಂತಹ ವ್ಯಕ್ತಿ (1966ರಲ್ಲಿ)


  • ಭಾರತದ 2ನೇ ಪ್ರಧಾನ ಮಂತ್ರಿಯಾದ ಇವರು ಉತ್ತರಪ್ರದೇಶದ ಮೊಘಲ್ ಸಾರಾಯ್ ಯಲ್ಲಿ 1904 ಅಕ್ಟೋಬರ್ 2ರಂದು ಜನಿಸಿದರು, ಮರಣ 11 ಜನವರಿ 1966



  • 1952ರಲ್ಲಿ AICC ಯ ಕಾರ್ಯದರ್ಶಿಯಾಗಿ ನೇಮಕಗೊಂಡರು

  • 1955ರಲ್ಲಿ ಅರಿಯಳೂರು ಬಳಿ ಆದ ರೈಲು ದುರಂತದ ತರುವಾಯ ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು

  • 1964ರಲ್ಲಿ  ಜವಹರಲಾಲ್ ನೆಹರುರವರ ಮರಣದ ನಂತರ (ಗುಲ್ಜಾರಿಲಾಲ್ ನಂದಾ ಹಂಗಾಮಿ ಪ್ರಧಾನಿಯ ನಂತರ) ರಾಷ್ಟ್ರದ ಪ್ರಧಾನ ಮಂತ್ರಿಯಾದರು


  • 1965ರಲ್ಲಿ ಭಾರತೀಯ ಉಗ್ರಾಣ ನಿಗಮ ಆರಂಭಿಸಿದರು

  • 1965ರಲ್ಲಿ ದುರ್ಗಾಪುರ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ನಿರ್ಮಿಸಿದರು
  
  •  *ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೊಷಿಸಿದರು

  • 1966ರಲ್ಲಿ ಹಸಿರು ಕ್ರಾಂತಿಯನ್ನು ಆರಂಭಿಸಿದರು

  • 1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ದ ಮಾಡಿ ಆ ರಾಷ್ಟ್ರವನ್ನು ಸಂಪೂರ್ಣವಾಗಿ ಸೋಲಿಸಿದರು. 22 ದಿನ ನಡೆದ ಈ ಯುದ್ದದ ಕೊನೆಗೆ 1966ರಲ್ಲಿ ರಷ್ಯಾ ದೇಶದ ತಾಷ್ಕೆಂಟ್ ನಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು. ಇದಕ್ಕೆ ಸಹಿ ಹಾಕಿದ ಪಾಕಿಸ್ತಾನ ಪ್ರಧಾನಿ ಅಯೂಬ್ ಖಾನ್ . ಈ ಘಟನೆಗೆ ಸಾಕ್ಷಿಯಾದ ರಷ್ಯಾದ ಪ್ರಧಾನಿ ಅಲೆಕ್ಸೈ ನಿಕೊಲಯೆವಿಚ್ ಕೊಸಜಿನ್

  • ಇವರ ಉದ್ಘೋಷ ವಾಕ್ಯ “ಜೈ ಜವಾನ್ ಜೈ ಕಿಸಾನ್”

  • ಮೇಡಂ ಕ್ಯೂರಿ ಬರೆದ ಗ್ರಂಥವನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿದರು. 
  • 1926ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತ್ತು 

Monday 24 November 2014

ಸಾಮಾನ್ಯ ಜ್ಞಾನ 3



  • ಆಧುನಿಕ ಜೀತಪದ್ದತಿ ಕೊನೆಗೊಳಿಸಲು ಶ್ರಮಿಸುತ್ತಿರುವ ಜಾಗತಿಕ ಮಾನವ ಹಕ್ಕುಗಳ ಸಂಘಟನೆ ‘ವಾಕ್ ಪ್ರೀ ಪೌಂಢೇಷನ್’ ವಿಶ್ವದಾದ್ಯಂತ 167 ದೇಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ನಡೆಸಿರುವ 2014ರ ಜಾಗತಿಕ ಜೀತ ಸೂಚ್ಯಾಂಕದ ವರದಿ ಪ್ರಕಾರ  ಭಾರತವು ಜಾಗತಿಕ ಜೀತ ಸೂಚ್ಯಂಕದಲ್ಲಿ 5ನೇ ಸ್ಥಾನದಲ್ಲಿದೆ. ಹಾಗೂ ಜನಸಂಖ್ಯೆ ಲೆಕ್ಕದಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ 1.40ಕೋಟಿಗಳಷ್ಟು ಜನರು ಈ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.



  • ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನ ಪೆಭ್ರವರಿ 1 ರಿಂದ 3 ರ ತನಕ (2015) ಹಾಸನ ಜಿಲ್ಲೆಯ ಶ್ರವಣಬೆಳಗೋಳದಲ್ಲಿ ನಡೆಯಲಿದೆ.  ಈ ಹಿಂದೆ 1967ರಲ್ಲಿ ಶ್ರವಣಬೆಳಗೋಳದಲ್ಲಿ 46ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಖ್ಯಾತ ವಿದ್ವಾಂಸ ಡಾ.ಆ.ನೇ.ಉಪಾದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು.



  • ದೇಶದ ಕರಾವಳಿ ಪ್ರದೇಶದ ಮೇಲೆ ನಿಗಾ ಇಡುವ ನೌಕಾ ಸೇನೆಯ ಮಾಹಿತಿ ನಿರ್ವಹಣೆ ಮತ್ತು ವಿಶ್ಲೇಷಣೆ ಕೇಂದ್ರವನ್ನು (IMAC) ಹರಿಯಾಣದ ಗುರಗಾಂವ್ ನಲ್ಲಿ ಆರಂಭಿಸಲಾಗಿದೆ.  ಕೇಂದ್ರ ರಕ್ಷಣಾ ಸಚಿವ: ಮನೋಹರ್ ಪರಿಕ್ಕರ್



  • ರಷ್ಯಾದ ಸೋಚಿಯಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ ಅವರನ್ನು ಸೋಲಿಸುವುದರ ಮೂಲಕ 6.5 ಪಾಯಿಂಟ್ ಹೊಂದಿ ವಿಶ್ವ ಚೆಸ್ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡು 4.60ಕೋಟಿ ರೂ ಬಹುಮಾನ ಪಡೆದಿದ್ದಾರೆ. ವಿಶ್ವನಾಥ್ ಆನಂದ್ 3.08ಕೋಟಿ ರೂ ಪಡೆಯಲಿದ್ದಾರೆ. (2014)


  • ಅಬುಧಾಬಿಯಲ್ಲಿ ನಡೆದ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮರ್ಸಿಡಿಸ್ ತಂಡದ ಬ್ರಿಟನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಪಟ್ಟ ಜಯಿಸಿದ್ದಾರೆ (2014).

  • ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್ ಸಿ) ನೂತನ ಅಧ್ಯಕ್ಷರು ನಿವೃತ್ತ ಐಎಎಸ್ ಅಧಿಕಾರಿ ದೀಪಕ್ ಗುಪ್ತ
  • ಭಾರತ ದೇಶದಲ್ಲಿ ಮೊದಲ ಎಬೋಲಾ ಪ್ರಕರಣ ಪತ್ತೆಯಾಗಿದ್ದು ದೆಹಲಿ