Tuesday 30 June 2015

ಶಾಂತಿ ಸೂಚ್ಯಕದಲ್ಲಿ ಭಾರತ 143ನೇ ಸ್ಥಾನದಲ್ಲಿದೆ

gkmani2u ROSHAN

ಭಾರತಕ್ಕೆ 143ನೇ ಸ್ಥಾನ
🌗🌗PRAJAVANI🌗🌗

* ಜಾಗತಿಕ ಶಾಂತಿ ಸೂಚ್ಯಂಕ
ಪಟ್ಟಿಯಲ್ಲಿ ಭಾರತಕ್ಕೆ 143ನೇ ಸ್ಥಾನ ದೊರೆತಿದೆ.

* ಅಗ್ರಸ್ಥಾನ ಪಡೆದಿರುವ ಐಸ್‌ಲೆಂಡ್‌ ‘ಜಗತ್ತಿನ ಶಾಂತಿಯುತ ರಾಷ್ಟ್ರ’
ಎಂಬ ಗೌರವ ತನ್ನದಾಗಿಸಿಕೊಂಡಿದೆ.

*ಆರ್ಥಿಕತೆ ಮತ್ತು ಶಾಂತಿಗೆ ಸಂಬಂಧಿಸಿದ ಸಂಸ್ಥೆಯೊಂದು ತನ್ನ 2015ರ ಸಾಲಿನ ಶಾಂತಿ ಸೂಚ್ಯಂಕವನ್ನು ಪ್ರಕಟಿಸಿದೆ.

*ಪಟ್ಟಿಯಲ್ಲಿ ಒಟ್ಟು 162 ರಾಷ್ಟ್ರಗಳಿಗೆ ವಿವಿಧ ಕ್ರಮಾಂಕಗಳನ್ನು ನೀಡಿದೆ.

*ಒಂದು ದೇಶದಲ್ಲಿ ಅಪರಾಧ ಪ್ರಕರಣ, ಹಿಂಸೆ, ಸಂಘರ್ಷ ಮತ್ತು ಸೈನಿಕ ಕಾರ್ಯಾಚರಣೆ ಎಷ್ಟರಮಟ್ಟಿಗೆ ನಡೆಯುತ್ತದೆ ಎಂಬುದನ್ನು ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.

*ಉತ್ತರ ಅಟ್ಲಾಂಟಿಕ್‌ ಸಾಗರದಲ್ಲಿರುವ ಪುಟ್ಟ ರಾಷ್ಟ್ರ ಐಸ್‌ಲೆಂಡ್‌ನಲ್ಲಿ ಹೋದ ಒಂದು ವರ್ಷದ ಅವಧಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಿಂಸಾಕೃತ್ಯ ನಡೆದಿದೆ. ಆದ್ದರಿಂದ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ.

*ಭಾರತವು ಭೂತಾನ್‌, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಗಿಂತ  ಕೆಳಗಿನ ಸ್ಥಾನದಲ್ಲಿದೆ.

*‘ಆಂತರಿಕ ಸಂಘರ್ಷದಿಂದಾಗಿ ಹಲವರು ಬಲಿಯಾಗಿದ್ದಾರೆ. ನಕ್ಸಲರ ಸಮಸ್ಯೆ ಕೂಡಾ ಇದೆ. ಇದರಿಂದ ಭಾರತ ಕೆಳಗಿನ ಸ್ಥಾನದಲ್ಲಿ ಕಾಣಿಸಿಕೊಂಡಿದೆ’ ಎಂದು ಸಂಸ್ಥೆಯ ವರದಿ ತಿಳಿಸಿದೆ.

*ಪಟ್ಟಿಯಲ್ಲಿ ಅಗ್ರ ಹತ್ತರಲ್ಲಿ ಯೂರೋಪ್‌ನ 6 ರಾಷ್ಟ್ರಗಳು ಸ್ಥಾನ ಪಡೆದಿವೆ.

*ಡೆನ್ಮಾರ್ಕ್‌ ಮತ್ತು ಆಸ್ಟ್ರಿಯಾ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ.

*‘ಯೂರೋಪ್‌ ಖಂಡ ವಿಶ್ವದ ಅತ್ಯಂತ ಶಾಂತಿಯುತ ವಲಯ ಎಂಬ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ’ ಎಂದು ವರದಿ ಹೇಳಿದೆ.

*ಪಾಕಿಸ್ತಾನಕ್ಕೆ 154ನೇ ಸ್ಥಾನ ದೊರೆತಿದೆ. 
ಭೂತಾನ್‌ (18), ನೇಪಾಳ (62), ಬಾಂಗ್ಲಾದೇಶ (84) ಮತ್ತು ಶ್ರೀಲಂಕಾ (114) ದೇಶಗಳು ಭಾರತಕ್ಕಿಂತ ಮುಂದಿವೆ.

*ಅಮೆರಿಕಕ್ಕೆ 94ನೇ ಕ್ರಮಾಂಕ ನೀಡಲಾಗಿದೆ.

* ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ದೇಶ ಅಫ್ಘಾನಿಸ್ತಾನ (160).
ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ದಾಳಿಯಿಂದ ನಲುಗಿರುವ ಸಿರಿಯಾ, ಇರಾಕ್‌ ಕೊನೆಯ ಸ್ಥಾನಗಳಲ್ಲಿವೆ.

ಜುಲೈ 01:: ರಾಷ್ಟ್ರೀಯ ವೈದ್ಯರ ದಿನಾಚರಣೆ

ಇಂದು ಜುಲೈ 1:
ರಾಷ್ಟ್ರೀಯ ವೈದ್ಯರ ದಿನ

(ಬಿಧಾನ್ ಚಂದ್ರರಾಯ್ ಅವರ ಹುಟ್ಟಿನ ದಿನವಾದ ಜುಲೈ 1ರಂದು ರಾ‍ಷ್ಟ್ರೀಯ ವೈದ್ಯರ ದಿನ ಆ‍ಚರಿಸಲಾಗುತ್ತಿದೆ.. ಬಿದಾನ್ ಚಂದ್ರರಾಯ್ ಅವರ ಒಂದಿಷ್ಟು ಮಾಹಿತಿ ಇಲ್ಲಿದೆ)

(ರೋಷನ್ ಜಗಳೂರು)
🌗🌗ಜಿಕೆಮಣಿ2ಯು🌗🌗

ಭಾರತ ರತ್ನ  ಪುರಸ್ಕೃತ 
ಬಿಧಾನ್‌ ಚಂದ್ರ ರಾಯ್‌
(೧ ಜುಲೈ ೧೮೮೨- ೧ ಜುಲೈ ೧೯೬೨) 

*ಇವರು ಭಾರತದಲ್ಲಿನಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ.
ಇವರು ಈ ಹುದ್ದೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರತಿನಿಧಿಯಾಗಿ ಹದಿನಾಲ್ಕು ವರ್ಷಗಳ ಕಾಲ
೧೯೪೮ ರಿಂದ ೧೯೬೨ರಲ್ಲಿನ ಮರಣದವರೆಗೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಅತ್ಯಂತ ಗೌರವಾನ್ವಿತ ವೈದ್ಯರಾಗಿದ್ದರು ಮತ್ತು ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

*ಇವರನ್ನು ಪಶ್ಚಿಮ ಬಂಗಾಳದ ಶ್ರೇಷ್ಟ ಶಿಲ್ಪಿಯೆಂದು ಕರೆಯಲಾಗಿದ್ದು

*ಇವರು ಕಲ್ಯಾಣಿ ಮತ್ತು ಬಿಧಾನ್‌ ನಗರ ಎಂಬ ಎರಡು ದೊಡ್ಡ ನಗರಗಳ ಹುಟ್ಟಿಗೆ ಕಾರಣರಾಗಿದ್ದಾರೆ. ಇವರು ಕಲ್ಕತ್ತಾ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಹಳೆಯ ವಿಧ್ಯಾರ್ಥಿಯಾಗಿದ್ದಾರೆ.

* F.R.C.S. ಮತ್ತು M.R.C.P ಯನ್ನು ಜೊತೆಜೊತೆಯಾಗಿ ಎರಡು ವರ್ಷ ಮೂರು ತಿಂಗಳಲ್ಲಿ ಪೂರೈಸಿದ ಭಾರತದಲ್ಲಿನ ಅತೀ ವಿರಳ ಜನರಲ್ಲಿ ಇವರೂ ಒಬ್ಬರಾಗಿದ್ದಾರೆ.

* ಇವರ ಹುಟ್ಟಿದ (ಮತ್ತು ಮರಣಿಸಿದ) ದಿನವಾದ ಜುಲೈ ೧ನ್ನು ಪ್ರತೀ ವರ್ಷ "ರಾಷ್ಟ್ರೀಯ ವೈದ್ಯರ ದಿನ" ವೆಂದು ಆಚರಿಸಲಾಗುತ್ತದೆ.

*ಡಾ.ಬಿಧಾನ್‌ ಚಂದ್ರ ರಾಯ್‌ ಅವರು ಪಾಟ್ನಾದಲ್ಲಿರುವ ತಮ್ಮ ಆಸ್ತಿಯನ್ನು ಆಧಾರಿಸಿ ಒಂದು ಸಂಸ್ಥೆಯನ್ನು(trust) ತಮ್ಮ ಸಾಮಾಜಿಕ ಕೆಲಸಕಾರ್ಯಗಳಿಗಾಗಿ ನಿರ್ಮಿಸಿದ್ದಾರೆ ಈ ಸಂಸ್ಥೆಗೆ ಶ್ರೇಷ್ಠ ರಾಜನೀತಿಜ್ಞರಾದ ಗಂಗಾ ಶರಮ್‌ ಸಿಂಗ್‌(ಸಿನ್ಹಾ) ಅವರನ್ನು ನೇಮಿಸಿದ್ದಾರೆ.

*ಇವರು ಭಾರತದ ಅತ್ಯಂತ ಶ್ರೇಷ್ಠ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ೪ ಫೇಬ್ರುವರಿ ೧೯೬೧ರಲ್ಲಿ ಪಡೆದರು.

*ಅವರು ಬ್ರಮ್ಹೋ ಸಮಾಜದ ಓರ್ವ ಸದಸ್ಯರೂ ಆಗಿದ್ದಾರೆ.
*******gkmani2u*****

🌗ಬಾಲ್ಯಜೀವನ🌗

*ಬಿಧಾನ್‌ ಚಂದ್ರರಾಯ್‌ ಅವರು ಜುಲೈ ೧, ೧೮೮೨ರಂದು
ಬಿಹಾರದ ಪಾಟ್ನಾದಲ್ಲಿನ ಬಿ.ಎಮ್‌.ದಾಸ್‌ ರಸ್ತೆ, ಬಂಕಿಪುರದಲ್ಲಿ ಜನಿಸಿದರು.

*ಅವರ ತಂದೆಯವರಾದ ಪ್ರಕಾಶಚಂದ್ರ ಅವರು ಓರ್ವ ಸುಂಕಾಧಿಕಾರಿಯಾಗಿದ್ದರು.
* ಇವರು ಇವರ ತಂದೆಯವರ ಐದು ಮಕ್ಕಳಲ್ಲಿ ಕಿರಿಯವರಾಗಿದ್ದು, ತನ್ನ ಪಾಲಕರ ಸರಳತೆ, ಶಿಸ್ತು ಮತ್ತು ಕಾರುಣ್ಯತೆಯಿಂದ ಪ್ರಭಾವಿತರಾಗಿದ್ದರು. ಇವರ ಪಾಲಕರು ಇವರಲ್ಲಿ ತನ್ನ ಸಂಬಂಧಿಕರಲ್ಲಿ ಮಾತ್ರ ಕರುಣೆ ಮತ್ತು ವಾತ್ಸಲ್ಯವನ್ನು ಹೊಂದದೇ ಎಲ್ಲ ಜನರಲ್ಲೂ ದಯಾಪರನಾಗಿರುವ ಬುದ್ದಿ ಮೂಡುವಂತೆ ಪ್ರೆರೇಪಣೆ ನೀಡಿದರು. ಇವರು ತಮ್ಮ ಹದಿನಾಲ್ಕನೇ ವರ್ಷದಲ್ಲಿರುವಾಗ ಅವರ ತಾಯಿಯವರನ್ನು ಕಳೆದುಕೊಂಡರು. ಇವರ ತಂದೆಯವರು ಅವರ ಐದು ಮಕ್ಕಳಿಗೆ ತಾಯಿಯಾಗಿ, ತಂದೆಯಾಗಿ ಕರ್ತವ್ಯ ನಿರ್ವಹಿಸಿದರು. ಅವರು ಯಾರಿಗೂ ಕೆಲಸ ಮಾಡುವಂತೆ ಒತ್ತಾಯಿಸಲಿಲ್ಲ ಆದರೆ ಗುರಿಯನ್ನು ಸಾಧಿಸಲು ದಾರಿಯನ್ನು ಮಾತ್ರ ತೋರಿಸಿಕೊಟ್ಟರು. ಎಲ್ಲ ಐದು ಮಕ್ಕಳೂ ತಮ್ಮ ತಮ್ಮ ಮನೆಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗಿತ್ತು. ಅವು ಬಿಧಾನ್‌ ಅವರ ಕಾಲೇಜು ದಿನಗಳಲ್ಲಿ ಅವರಿಗೆ ತುಂಬ ಸಹಾಯಕವಾದ ಅಂಶಗಳಾದವು.

*ಬಿಧಾನ್‌ ಅವರು ತಮ್ಮ I.A.ಯನ್ನು ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮತ್ತು ಬಿ.ಎ ಪದವಿಯನ್ನು ಪಾಟ್ನಾ ಕಾಲೇಜಿನಲ್ಲಿ ಗಣಿತದಲ್ಲಿ ಅಗ್ರಗಣ್ಯರಾಗಿ ಪುರೈಸಿದರು. ನಂತರ ಪ್ರವೇಶಕ್ಕಾಗಿ ಬೆಂಗಾಲ್‌ ಇಂಜಿನಿಯರಿಂಗ್‌ ಕಾಲೇಜ್‌ ಮತ್ತು ಕಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಿದರು. ಎರಡೂ ಕಡೆಯಲ್ಲಿಯೂ ಅವಕಾಶಗಳು ದೊರೆಯಾಗಿಯೂ ಅವರು ವೈದ್ಯಕೀಯ ಕಾಲೇಜಿಗೆ ಹೋಗುವ ಆಯ್ಕೆಯನ್ನೇ ಆಯ್ಕೆ ಮಾಡಿಕೊಂಡರು.

* ಬಿಧಾನ್‌ ಅವರು ೧೯೦೧ ಜೂನ್‌ರಲ್ಲಿ ಕಲ್ಕತ್ತಾಗೆ ಆಗಮಿಸಿದರು. ಅವರು ಅಲ್ಲಿ ಬರೆದ "Whatever thy hands findeth to do, do it with thy might." ಎಂಬ ವಾಕ್ಯದಿಂದ ತುಂಬ ಪ್ರಭಾವಿತರಾದರು. ಮತ್ತು ಈ ವಾಕ್ಯವು ಅವರ ಜೀವನದ ಪಥದ ಪರಿವರ್ತನೆಗೆ ಮತ್ತು ಜಿವನದುದ್ದಕ್ಕೂ ಅವರು ನಡೆದ ದಾರಿಗೆ ಕಾರಣವಾದ ಮುಖ್ಯ ಅಂಶವಾಯಿತು.

*ಬಿಧಾನ್‌ ಅವರ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವಾಗಿನ ಜೀವನವು ಅತ್ಯಂತ ಪರಿಶ್ರಮದಯಕವಾಗಿತ್ತು. ಮೊದಲ ವರ್ಷದಲ್ಲಿಯೇ ತಂದೆಯವರು ಉಪ ಜಿಲ್ಲಾಧಿಕಾರಿಯಾಗಿ ನಿವೃತ್ತಿಯನ್ನು ಪಡೆದರು. ಆದ್ದರಿಂದ ಅವರು ಬಿಧಾನ್‌ ಅವರಿಗೆ ಬಹಳ ದಿನಗಳ ಕಾಲ ಹಣವನ್ನು ಕಳುಹಿಸಿಕೊಡಲು ಅಶಕ್ತರಾದರು. ಬಿಧಾನ್‌ ಅವರು ಸ್ಕಾಲರ್‌ಶಿಫ್‌ಗಳನ್ನು ಪಡೆಯುತ್ತಿದ್ದರು ಮತ್ತು ತಮ್ಮ ಖರ್ಚುವೆಚ್ಚಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುತ್ತಿದ್ದರು. ತಮ್ಮ ಪುಸ್ತಕಳನ್ನು ಸಹ ಖರೀದಿಸದೇ ಗ್ರಂಥಾಲಯಗಳಿಂದ ಪಡೆಯುವುದು ಮತ್ತು ಕಲಿಸುತ್ತಿರುವಾಗ ಬರೆದುಕೊಳ್ಳುವುದರ ಮೂಲಕ ಉಳಿಸುತ್ತಿದ್ದರು.

*ಬಿಧಾನ್‌ ಅವರು ಕಾಲೇಜಿನಲ್ಲಿರುವಾಗಲೇ ಬಂಗಾಳವಿಭಜನೆಯನ್ನು ಘೋಷಿಸಲಾಯಿತು. ಬಂಗಾಳ ವಿಭಜನೆಯ ವಿರುದ್ಧ ರಾಷ್ಟ್ರೀಯ ನಾಯಕರಾದ ಲಾಲಾ ಲಜಪತ್‌ರಾಯ್‌, ಅರವಿಂದ ಘೋಷ್‌, ತಿಲಕ ಮತ್ತು ಬಿಪಿನ್‌ ಚಂದ್ರಪಾಲ್‌ ಇವರ ಮುಂದಾಳತ್ವದಲ್ಲಿ ಹೋರಾಟಗಳು ಪ್ರಾರಂಭವಾದವು. ಬಿಧಾನ್‌ ಅವರು ಪೂರ್ಣ ಪ್ರಮಾಣದಲ್ಲಿ ಈ ಚಳುವಳಿಯಲ್ಲಿ ಪಾಲ್ಗೊಳ್ಳಲು ಮನಸ್ಸು ಮಾಡಿದರೂ ತಮ್ಮ ಆವೇಶವನ್ನು ಹಿಡಿತದಲ್ಲಿಟ್ಟುಕೊಂಡು ತಾನು ಕಲಿತು ತನ್ನ ಉದ್ಯೋಗದ ಮೂಲಕ ತನ್ನ ದೇಶವನ್ನು ಇನ್ನು ಹೆಚ್ಚು ಒಳ್ಳೆಯ ರೀತಿಯಲ್ಲಿ ಸೇವೆ ಮಾಡುವ ಮನಸ್ಸು ಮಾಡಿ ತಮ್ಮ ಅಭ್ಯಾಸದಲ್ಲಿ ಮನಸ್ಸನ್ನು ಕೆಂದ್ರೀಕರಿಸಿದರು.
** **** **** *** **
ವೃತ್ತಿಜೀವನ::

*ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಕೂಡಲೇ, ಬಿ.ಸಿ. ರಾಯ್‌ ಅವರು ಪ್ರಾಂತೀಯ ಆರೋಗ್ಯ ಸೇವಾ ಕೇಂದ್ರವನ್ನು ಸೇರಿಕೊಂಡರು.
ಇವರು ಅಲ್ಲಿ ಪರಿಶ್ರಮದಿಂದ ಮತ್ತು ಅಗಾಧವಾಗಿ ಕೆಲಸಮಾಡಿದರು. ಇವರು ಅಲ್ಲಿ ಔಷಧಗಳನ್ನು ಶಿಫಾರಸು ಮಾಡುವುದನ್ನು ಕಲಿತರು ಕೆಲವು ವೇಳೆ ದಾದಿಯರಂತೆ ಅವಶ್ಯಕತೆ ಇದ್ದಾಗ ಸೇವೆ ಸಲ್ಲಿಸಲು ಹೋಗುತ್ತಿದ್ದರು. ಅವರು ತಮ್ಮ ಬಿಡುವಿನ ವೇಳೆಯಲ್ಲಿ ತಾವು ಸ್ವತಂತ್ರವಾಗಿ ಸೇವೆ ಸಲ್ಲಿಸುತ್ತಿದ್ದರು.ಮತ್ತು ಇದಕ್ಕೆ ಪ್ರತಿಯಾಗಿ ರೂ.೨ ಮಾತ್ರ ಚಿಕಿತ್ಸಾ ಶುಲ್ಕವೆಂದು ತೆಗೆದುಕೊಳ್ಳುತ್ತಿದ್ದರು.

*ಬಿಧಾನ್‌ ಅವರು ಕೇವಲ ರೂ.೧,೨೦೦ನ್ನು ಮಾತ್ರ ತೆಗೆದುಕೊಂಡು ಫೇಬ್ರುವರಿ ೧೯೦೯ರಲ್ಲಿ ಸೆಂಟ್‌ ಬಾರ್ಥೊಲೊಮೆವ್ಸ್‌ ಆಸ್ಪತ್ರೆಗೆ ಮುಂದಿನ ಶಿಕ್ಷಣಕ್ಕಾಗಿ ತನ್ನ ಹೆಸರನ್ನು ನೊಂದಾಯಿಸಲು ತೆರಳಿದರು. ಅಲ್ಲಿನ ಮುಖ್ಯಸ್ಥರು ಏಷ್ಯಾದಿಂದ ಅವರನ್ನು ವಿಧ್ಯಾರ್ಥಿಯಾಗಿ ಆಯ್ಕೆ ಮಾಡುವ ನಿರ್ಧಾರನ್ನು ಕೈಬಿಡುವ ಮೂಲಕ ಬಿಧಾನ್‌ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಡಾ.ರಾಯ್‌ ಅವರು ಧೃತಿಗೆಡಲಿಲ್ಲ. ಅವರು ಮೇಲಿಂದ ಮೇಲೆ ಮೂವತ್ತು ಬಾರಿ ಅರ್ಜಿಯನ್ನು ಸಲ್ಲಿಸಿದ ನಂತರ ಮುಖ್ಯಾಧಿಕಾರಿಗೆ ಬಿಧಾನ್‌ ಅವರನ್ನು ಕಾಲೇಜಿಗೆ ವಿಧ್ಯಾರ್ಥಿಯಾಗಿ ತೆಗೆದುಕೊಳ್ಳಲೇ ಬೇಕಾಯಿತು. ಕೇವಲ ಎರಡು ವರ್ಷ ಮೂರು ತಿಂಗಳ ಅವಧಿಯಲ್ಲಿ M.R.C.P. ಮತ್ತು F.R.C.S. ನ್ನು ಪೂರೈಸಿ ಇಂಗ್ಲೆಂಡ್‌ನಿಂದ ೧೯೧೧ರಲ್ಲಿ ಸ್ವದೇಶಕ್ಕೆ ವಾಪಸಾದರು. ಸ್ವದೇಶಕ್ಕೆ ವಾಪಸಾದ ನಂತರ ಕಲ್ಕತ್ತಾ ಮೆಡಿಕಲ್‌ ಕಾಲೇಜಿನಲ್ಲಿ ಮತ್ತು ಕ್ಯಾಂಪ್‌ಬೆಲ್‌ ಮೆಡಿಕಲ್‌ ಸ್ಕೂಲ್‌ ಮತ್ತು ನಂತರ ಕಾರ್ಮಿಕಲ್‌ ಮೆಡಿಕಲ್‌ ಕಾಲೇಜಿನಲ್ಲಿ ಕಲಿಸುವ ವೃತ್ತಿಯನ್ನು ಪ್ರಾರಂಭಿಸಿದರು.

*ಡಾ.ರಾಯ್‌ ಸ್ವರಾಜ್ಯ ಕಲ್ಪನೆಯು ಸಾಕಾರವಾಗಲು ಪ್ರಜೆಗಳಲ್ಲಿ ಮಾನಸಿಕವಾದ ಮತ್ತು ದೈಹಿಕ ದೃಢತೆಯನ್ನು ತುಂಬುವುದುದರ ವಿನಹ ಸಾಧ್ಯವಾಗುವುದಿಲ್ಲ ಎಂದು ನಂಬಿದ್ದರು. ಅವರು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಈ ನಿಟ್ಟಿನಲ್ಲಿ ತಮ್ಮ ಕೊಡುಗೆಯನ್ನು ನೀಡಿದರು. ಅವರು ಈ ನಿಟ್ಟಿನಲ್ಲಿ ಜಾದವಪುರ ಟಿ.ಬಿ ಆಸ್ಪತ್ರೆ, ಚಿತ್ತರಂಜನ್‌ ಸೇವಾ ಸದನ್‌, ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು. ಕಮಲಾ ನೆಹರು ಆಸ್ಪತ್ರೆ, ವಿಕ್ಟೊರಿಯಾ ಸಂಸ್ಥೆ, ಮತ್ತು ಚಿತ್ತರಂಜನ್‌ ಕ್ಯಾನ್ಸರ್‌ ಆಸ್ಪತ್ರೆಗಳನ್ನು ಕಟ್ಟಿಸಿದರು.

* ಚಿತ್ತರಂಜನ್‌ ಸೇವಾ ಸದನ್‌ ಇದು ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ೧೯೨೬ರಲ್ಲಿ ಪ್ರಾರಂಭವಾಯಿತು. ಹೆಂಗಸರು ಮೊದಮೊದಲು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದರು. ಆದರೆ ಡಾ. ರಾಯ್‌ ಮತ್ತು ಅವರ ತಂಡದವರಿಗೆ ಧನ್ಯವಾದಗಳನ್ನು ಅರ್ಪಿಸಬೇಕು ಏಕೆಂದರೆ ಅವರ ಪ್ರಯತ್ನದಿಂದ ಎಲ್ಲ ವರ್ಗಗಳ ಮತ್ತು ಜನಾಂಗದ ಮಹಿಳೆಯರು ಆಸ್ಟತ್ರೆಗೆ ಬರತೊಡಗಿದರು. ಅವರು ಮಹಿಳೆಯರಿಗಾಗಿ ನರ್ಸಿಂಗ್‌ ಮತ್ತು ಸಾಮಾಜಿಕ ಸೇವೆಗಳಿಗಾಗಿನ ಕೇಂದ್ರವನ್ನು ಸ್ಥಾಪಿಸಿದರು.

*೧೯೪೨ರಲ್ಲಿ ರಂಗೂನ್‌ ಜಪಾನಿಯರ ಬಾಂಬ್‌ ದಾಳಿಗೆ ತುತ್ತಾಯಿತು ಮತ್ತು ಕಲ್ಕತ್ತಾವು ಜಪಾನಿಯ ದಂಗೆಯಿಂದ ಸಂಪೂರ್ಣ ನಿರ್ನಾಮವಾಗಬಹುದೆಂಬ ಭಯಕ್ಕೆ ಒಳಗಾಯಿತು. ಆ ಸಂದರ್ಭದಲ್ಲಿ ಡಾ.ರಾಯ್‌ ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ವಿಶ್ವವಿದ್ಯಾಲಯದಲ್ಲಿ ಕಲಿಸಲು ಮತ್ತು ಕಲಿಯಲು ತೊಂದರೆಯಾಗದಂತೆ ಮಾಡುವ ಉದ್ದೇಶದಿಂದ ವೈಮಾನಿಕ ದಾಳಿಗಳಿಂದ ರಕ್ಷಿಸಿಕೊಳ್ಳಬಲ್ಲ ಮೇಲ್ಚಾವಣಿಗಳನ್ನು ರೂಪಿಸುವಂತೆ ಯೋಜನೆಯನ್ನು ಹಾಕಿಕೊಟ್ಟರು. ಇಂತಹ ಮಹತ್ತರವಾದ ಸಾಧನೆಯನ್ನು ಗುರುತಿಸಿ ೧೯೪೪ರಲ್ಲಿ ಡಾಕ್ಟರೇಟ್‌ ಆಪ್‌ ಸೈನ್ಸ್‌ ಪದವಿಯನ್ನು ನೀಡಿ ಪುರಸ್ಕರಿಸಲಾಯಿತು.

*ಡಾ.ರಾಯ್‌ ಯುವಕರೇ ದೇಶವನ್ನು ರೂಪಿಸಬಲ್ಲವರಾಗಿದ್ದಾರೆ ಎಂಬುದನ್ನು ನಂಬಿದ್ದರು. ಯುವಕರು ಹಿಂದಿನದನ್ನು ಅನುಸರಿಸುತ್ತಾ ಕುಳ್ಳದೇ ಮತ್ತು ದೊಂಬಿ ಗಲಾಟೆಗಳಲ್ಲಿ ಪಾಲ್ಗೊಳ್ಳದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತಾಗಬೇಕೆಂದು ಆಶಿಸುತ್ತಿದ್ದರು.

*ಡಿಸೆಂಬರ್‌ ೧೫, ೧೯೫೬ರಲ್ಲಿ ಲಕ್ನೋ ವಿಶ್ವವಿದ್ಯಾಲಯದಲ್ಲಿ ಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು "ನನ್ನ ಯುವ ಮಿತ್ರರೇ, ನೀವು ಸ್ವತಂತ್ರ- ಹೋರಾಟದ ಸೈನಿಕರಾಗಿದ್ದೀರಿ. ಹೋರಾಟವು ಬೇಡಿಕೆಗಾಗಿ, ಹೆದರಿಗೆ, ಕೀಳರಿಮೆ ಮತ್ತು ಹತಾಶೆಗಳನ್ನು ಹೋಗಲಾಡಿಸುವುದಕ್ಕಾಗಿದೆ. ಪರಿಶ್ರವಿಲ್ಲದೇ ಫಲವಿಲ್ಲ, ದೇಶಕ್ಕಾಗಿ ಸ್ವಾರ್ಥವನ್ನು ತ್ಯಜಿಸಿ ಹೋರಾಡೊಣ, ನೀವು ದೃಢವಾದ ವಿಶ್ವಾಸ ಮತ್ತು ದೈರ್ಯದಿಂದ ಮುನ್ನುಗ್ಗುತ್ತಿರೆಂದು ನಂಬಿದ್ದೇನೆ..." ಎಂದು ಹೇಳಿದ್ದಾರೆ.

*ಡಾ.ರಾಯ್‌ ಗಾಂಧೀಜಿಯವರ ಮಿತ್ರರೂ ಮತ್ತು ವೈದ್ಯರೂ ಆಗಿದ್ದರು. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯವರು ೧೯೩೩ರಲ್ಲಿ ಪೂನಾದಲ್ಲಿ ಪರ್ಣಕುಟಿವಿನ್‌ನಲ್ಲಿ ಚಿಕಿತ್ಸೆಗೊಳಗಾಗುತ್ತಿದ್ದಾಗ ಡಾ. ರಾಯ್‌ ಅವರೇ ಅವರನ್ನು ಆರೈಕೆ ಮಾಡುತ್ತಿದ್ದರು. ಆದರೆ ಗಾಂಧೀಜಿಯವರು ಆ ಔಷಧಗಳು ವಿದೇಶದಲ್ಲಿ ತಯಾರಾದವುಗಳಾಗಿದ್ದರಿಂದ ತೆಗೆದುಕೊಳ್ಳಲು ನಿರಾಕರಿಸಿದರು. ಗಾಂಧೀಜಿಯವರು ಡಾ.ರಾಯ್‌ ಅವರನ್ನುದ್ದೇಶಿಸಿ
" ಡಾ.ರಾಯ್‌ ಅವರೇ ನಾನೇಕೆ ನಿಮ್ಮ ಸೇವೆಯನ್ನು ಸ್ವೀಕರಿಸಬೇಕು?
ನನ್ನ ದೇಶವಾಸಿಗಳಾದ ನಾಲ್ಕು ದಶಲಕ್ಷ ಜನರಿಗೆ ನಿಮ್ಮಿಂದ ಉಚಿತವಾಗಿ ಸೇವೆ ನೀಡಲು ಸಾಧ್ಯವೇ?" ಎಂದು ಕೇಳಿದರು. ಅದಕ್ಕೆ ಡಾ. ರಾಯ್‌ ಅವರು ಉತ್ತರಿಸುತ್ತಾ"
ಇಲ್ಲ ಗಾಂಧೀಜಿಯವರೇ ನಾನು ಮೋಹನದಾಸ ಕರಮಚಂದ ಗಾಂಧಿಯನ್ನು ಉಪಚರಿಸಲು ಬರಲಿಲ್ಲ. ಮತ್ತು ನನ್ನಿಂದ ನಾಲ್ಕು ದಶಲಕ್ಷ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಸಾಧ್ಯವೂ ಇಲ್ಲ. ಆದರೆ ನಾನು ಬಂದಿರುವುದು ನಾಲ್ಕು ದಶಲಕ್ಷ ಜನರ ಮುಖಂಡನನ್ನು ಉಪಚರಿಸಲು ಬಂದಿದ್ದೇನಷ್ಟೇ" ಎಂದು ನುಡಿದರು. ಗಾಂಧೀಜಿ ಮರುಮಾತಾಡದೇ ಔಷಧವನ್ನು ತೆಗೆದುಕೊಳ್ಳಲೇಬೇಕಾಯಿತು.

*ಡಾ.ರಾಯ್‌ ಅವರು ೧೯೨೫ರಲ್ಲಿ ರಾಜಕೀಯವನ್ನು ಪ್ರವೇಶಿಸಿದರು. ಬಂಗಾಳದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಾರಕ್‌ಪುರ ಕ್ಷೇತ್ರದಲ್ಲಿ ಅಲೆದಾಡಿದರು ಮತ್ತು ನಡೆದ ಚುನಾವಣೆಯಲ್ಲಿ ಬಂಗಾಳದ ಅತ್ಯಂತ ಹಿರಿಯ "ಗ್ರ್ಯಾಂಡ್ ಓಲ್ಡ್ ಮ್ಯಾನ್ ಆಫ್ ಬೆಂಗಾಲ್," ಎಂಬ ಖ್ಯಾತಿಯ ಸುರೇಂದ್ರನಾಥ ಬ್ಯಾನರ್ಜಿ ಅವರನ್ನು ಸೋಲಿಸಿದರು.

* ಪಕ್ಷೇತರವಾಗಿ ನಿಂತಿದ್ದರೂ ಕೂಡ ಸ್ವರಾಜ್‌ ಪಾರ್ಟಿ
(ಕಾಂಗ್ರೆಸ್‌ ನ ಒಂದು ಅಂಗಪಕ್ಷ)ದಿಂದ ಬೆಂಬಲಿಸಲ್ಪಟ್ಟವರಾಗಿದ್ದರು.

* ೧೯೨೫ನಂತರ  ರಾಯ್‌ ಅವರು ಹೂಗ್ಲಿ ನದಿಯಲ್ಲಿ ನಡೆಯುತ್ತಿರುವ ಮಾಲಿನ್ಯಗಳು ಮತ್ತು ಮುಂದಿನ ದಿನಗಳಲ್ಲಿ ಅದನ್ನು ತಡೆಗಟ್ಟುವ ವಿಧಾನಗಳನ್ನು ಮಂಡಿಸಿದರು.

*ಡಾ.ರಾಯ್‌ ಅವರು ಆಲ್‌ ಇಂಡಿಯಾ ಕಾಂಗ್ರೆಸ್‌ ಕಮಿಟಿಗೆ ೧೯೨೮ರಲ್ಲಿ ಆಯ್ಕೆಯಾದರು. ಅವರು ಮೇಲ್ದರ್ಜೆಗೆ ಹೋಗಬೇಕೆಂಬ ಪ್ರಯತ್ನ ಅಥವಾ ವಿವಾದಗಳಿಂದ ದೂರವೇ ಉಳಿದರು.

*೧೯೨೯ರಲ್ಲಿ ಡಾ.ರಾಯ್‌ ಅವರು ಬಂಗಾಳದಲ್ಲಿ ಸಾಮಾಜಿಕ ಕ್ರಾಂತಿಯೊಂದನ್ನು ಮಾಡಿದರು ಮತ್ತು ೧೯೩೦ರಲ್ಲಿ ಪಂಡಿತ್‌ ಮೊತಿಲಾನ್‌ ನೆಹರುರವರು (CWC) ಕಾರ್ಯಕಾರಿ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿದರು. ಸಿ.ಡಬ್ಲೂ.ಸಿ.ಯು ವಿಧಾನಮಂಡಳವನ್ನು ಕಾನೂನು ಬಾಹಿರವೆಂದು ಜರಿಯಿತು ಮತ್ತು ಇತರ ಸದಸ್ಯರ ಜೊತೆಯಲ್ಲಿಯೇ ಡಾ.ರಾಯ್‌ ಅವರು ೨೬ ಅಗಸ್ಟ್‌ ೧೯೩೦ರಂದು ಬಂದನಕ್ಕೊಳಗಾಗಿ ಸೆಂಟ್ರಲ್‌ ಅಲಿಪುರ್‌ ಕಾರಾಗೃಹಕ್ಕೆ ತಳ್ಳಲ್ಪಟ್ಟರು.

*೧೯೩೧ರಲ್ಲಿ ನಡೆದ ದಂಡಿ ಸತ್ಯಾಗ್ರಹದಲ್ಲಿ ಕಲ್ಕತ್ತಾ ಸಂಘಟನೆಯ ಹಲವಾರು ಕಾರ್ಯಕರ್ತರು ಜೈಲು ಸೇರಿದರು. ಕಾಂಗ್ರೆಸ್‌ ಡಾ.ರಾಯ್‌ ಅವರನ್ನು ಜೈಲಿಗೆ ಹೋಗದೇ ಹೊರಗುಳಿದು ಸಂಘದ ಕಾರ್ಯಗಳನ್ನು ನೋಡಿಕೊಳ್ಳುವಂತೆ ಸೂಚಿಸಿತು. ಅವರು ೧೯೩೦–೩೧ರಲ್ಲಿ ಊರ ಪ್ರಮುಖರಾಗಿ ಕಾರ್ಯ ನಿರ್ವಹಿಸಿದರು ಮತ್ತು ೧೯೩೩ರಲ್ಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರು. ಇವರ ಆಳ್ವಿಕೆಯಲ್ಲಿ ಸಂಘಟನೆಯು ಉಚಿತ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ತೆ, ಉತ್ತಮ ರಸ್ತೆ ಸೌಲಭ್ಯ, ವಿದ್ಯುತ್‌ ವ್ಯವಸ್ತೆ, ಮತ್ತು ನೀರು ಸರಬರಾಜುಗಳನ್ನು ಉತ್ತಮಗೊಳಿಸಿತು. ಅವರು ಆಸ್ಪತ್ರೆಗಳಿಗೆ ಮತ್ತು ಉಳಿದ ಸೇವಾ ಉದ್ದೇಶಗಳಿಗೆ ಮಾಡಬೇಕಾದ ಹಣದ ಹಂಚಿಕೆಯ ಯೋಜನೆಗಳನ್ನು ರೂಪಿಸುತ್ತಿದ್ದರು ಮತ್ತು ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
**** **** **** **** **
ಸ್ವಾತಂತ್ರ್ಯ್ಯದ ನಂತರ

*ಕಾಂಗ್ರೆಸ್‌ ಪಾರ್ಟಿಯು ಡಾ.ರಾಯ್‌ ಅವರ ಹೆಸರನ್ನು ಬಂಗಾಳದ ಮುಖ್ಯಮಂತ್ರಿ ಹುದ್ದೆಗೆ ಶಿಫಾರಸು ಮಾಡಿತು. ಡಾ.ರಾಯ್‌ ಅವರು ತಮ್ಮ ವೃತ್ತಿಯಲ್ಲೇ ಮುಂದುವರಿಯಲು ಆಶಿಸುತ್ತಿದ್ದರು. ಆದರೆ ಗಾಂಧೀಜಿಯವರ ಸಲಹೆಯ ಮೇರೆಗೆ ಜನವರಿ ೨೩, ೧೯೪೮ರಂದು ಅವರು ತಮ್ಮ ಹುದ್ದೆಯನ್ನಲಂಕರಿಸಿದರು. ಬಂಗಾಳದಲ್ಲಿ ಆ ಸಂದರ್ಭದಲ್ಲಿ ಕೋಮುಗಲಭೆಗಳು, ಆಹಾರ ಕೊರತೆ, ನಿರುದ್ಯೋಗ, ಮತ್ತು ಪೂರ್ವ ಪಾಕಿಸ್ತಾನದಿಂದ ವಲಸೆ ಬರುತ್ತಿರುವ ನಿರಾಶ್ರಿತರ ಸಮಸ್ಯೆಗಳಿಂದ ತುಂಬಿ ಹೋಗಿತ್ತು. ಡಾ.ರಾಯ್‌ ಅವರು ತಮ್ಮ ಪಕ್ಷದಲ್ಲಿ ಏಕತೆ ಮತ್ತು ಶಿಸ್ತನ್ನು ತಂದರು. ನಂತರ ಶಿಸ್ತಿನಿಂದ ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸುತ್ತಾ ಸಾಗಿದರು. ಕೇವಲ ಮೂರೇ ವರ್ಷದಲ್ಲಿ ಕಾನೂನು ಮತ್ತು ಶಿಸ್ತುಗಳು ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದೇ ಅವರ ಆಳ್ವಿಕೆಯಲ್ಲಿ ಜನರು ಸಕ್ರಿಯವಾಗಿ ಮತ್ತು ಸಂಯಮದಿಂದ ವರ್ತಿಸುವಂತೆ ಮಾಡುತ್ತೇನೆ ಎಂದು ಜನರಿಗೆ ಭರವಸೆ ನೀಡಿದರು.

*ದೇಶವು ಅವರನ್ನು ಫೆಬ್ರುವರಿ ೪, ೧೯೬೧ರಲ್ಲಿ ಭಾರತ ರತ್ನ ಎಂದು ಪುರಸ್ಕರಿಸಿತು.
*ಜುಲೈ ೧, ೧೯೬೨ ರಂದು ಬೆಳಿಗ್ಗೆ ತಮ್ಮ ರೋಗಿಗಳನ್ನು ಶುಶ್ರುಷೆ ಮಾಡಿದ ನಂತರ ರಾಜ್ಯದ ಎಲ್ಲ ಜವಾಬ್ದಾರಿಗಳನ್ನು ಕಳಚಿಕೊಂಡು "ಬ್ರಹ್ಮೋ ಗೀತ್‌"ದ ಪ್ರತಿಯನ್ನು ಓದುತ್ತಾ ಅದರಲ್ಲಿರುವ ಶಾಂತಿ ಸಂದೇಶವನ್ನು ಪಠಿಸತೊಡಗಿದರು. ಅದಾದ ಹನ್ನೊಂದು ಗಂಟೆಯಲ್ಲಿ ಡಾ.ರಾಯ್‌ ಅವರು ಇಹಲೋಕವನ್ನು ತ್ಯಜಿಸಿದರು. ಅವರು ಅವರ ಸಂಸಾರಕ್ಕಾಗಿ ತನ್ನ ತಾಯಿಯ ಹೆಸರಾದ ಅಘೋರಕಾಮಿನಿ ದೇವಿ ಹೆಸರಿನ ಆಸ್ಪತ್ರೆಯನ್ನು ಬಿಟ್ಟು ಹೋಗಿದ್ದಾರೆ.
*೧೯೭೬ರಲ್ಲಿ ವೈದ್ಯಕೀಯ, ರಾಜಕೀಯ, ವಿಜ್ಞಾನ, ಮನಶಾಸ್ತ್ರ, ಸಾಹಿತ್ಯ, ಮತ್ತು ಕಲೆಗಳಲ್ಲಿ ಸಾಧನೆ ತೋರಿದವರಿಗಾಗಿ ಬಿ.ಸಿ.ರಾಯ್‌ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಕಟಿಸಲಾಯಿತು.
*೧೯೬೭ರಲ್ಲಿ ನವದೆಹಲಿಯಲ್ಲಿ ಡಾ.ಬಿ.ಸಿ.ರಾಯ್‌ ಮೆಮೊರಿಯಲ್‌ ಲೈಬ್ರರಿ ಮತ್ತು ಚಿಕ್ಕ ಮಕ್ಕಳಿಗಾಗಿನ ಓದುವ ಕೊಟಡಿಯನ್ನು ಚಿಲ್ಡ್ರನ್ಸ್‌ ಬುಕ್‌ ಟ್ರಸ್ಟ್‌ನಡಿಯಲ್ಲಿ ಪ್ರಾರಂಭಮಾಡಲಾಯಿತು.
🌗🌗gkmani2u🌗🌗

ಮಹಿಳಾ ಮಣಿಗಳು

ಮಹಿಳಾ ಮಣಿಗಳ ಬಗ್ಗೆ ಒಂದಷ್ಟು ಮಾಹಿತಿ
🌗🌗🌗🌗🌗🌗
(ರೋಷನ್ ಜಗಳೂರು)
        gkmani2u
🙋👰🙎🙋👰👰

**ಇಂದಿರಾ ಗಾಂಧಿ**
ಇಂದಿರಾ ಪ್ರಿಯದರ್ಶಿನಿ ಗಾಂಧಿ. ಭಾರತದ ಮೊಟ್ಟ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನ ಮಂತ್ರಿ. ಹೆಣ್ಣು ಮಕ್ಕಳಿಗೆ ರಾಜಕೀಯದ ಗೊಡವೆ ಬೇಡ ಎನ್ನುವ ಕಾಲಘಟ್ಟದಲ್ಲಿ ನಾಲ್ಕು ಸಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ್ದು ಇವರ ಹೆಗ್ಗಳಿಕೆ. ಕಾಶ್ಮೀರಿ ಪಂಡಿತ್ ಕುಟುಂಬದ ಸುಕೋಮಲ ಹೆಣ್ಣುಮಗಳೊಬ್ಬಳ ವೈಯಕ್ತಿಕ ಮತ್ತು ರಾಜಕೀಯ ನಿಲುವಿಗೆ ಸಂಬಂಧಪಟ್ಟ ದಿಟ್ಟ ನಡೆ ಚಾರಿತ್ರಿಕ ಸಾಧನೆ. ಸಾವು ದುರಂತವಾದರೂ ಬದುಕಿದ ರೀತಿ ಇತಿಹಾಸ.
-- -- -- --
*ಆನಂದಿ ಬಾಯಿ ಜೋಷಿ*
ಪಾರಂಪರಿಕ ನೆಲೆಗಟ್ಟನ್ನು ಮೀರಿ ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳಾ ವೈದ್ಯೆ. ಅಲ್ಲದೇ, ಪಾಶ್ಟಾತ್ಯ ವೈದ್ಯಕೀಯ ಪದವಿ ಪಡೆದ ಮತ್ತು ಅಮೆರಿಕಾದ ನೆಲದ ಮೇಲೆ ನಡೆದ ಮೊಟ್ಟಮೊದಲ ಹಿಂದೂ ಮಹಿಳೆ. ಪುಣೆಯ ಸಾಂಪ್ರದಾಯಿಕ ಕುಟುಂಬದಲ್ಲಿ ಜನನ, 9ನೇ ವಯಸ್ಸಿನಲ್ಲಿ ಮದುವೆ. ಹದಿನಾಲ್ಕನೇ ವಯಸ್ಸಿನಲ್ಲಿ ಜನ್ಮ ನೀಡಿದ ಮಗು ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗದ ಕಾರಣ ಮೃತಪಟ್ಟಿದ್ದೆ ಇವರಲ್ಲಿ ವೈದ್ಯರಾಗುವ ಛಲ ಮೂಡಿಸಿದ್ದು.

*ಹಮೈ ವ್ಯಾರವಾಲ*
ಕಪ್ಪು ಬಿಳುಪಿನ ಚಿತ್ರಗಳಲ್ಲಿ ಸ್ವತಂತ್ರ ಭಾರತದ ಇತಿಹಾಸವನ್ನು ಹಿಡಿದಿಟ್ಟ ಹೆಗ್ಗಳಿಕೆ ಹಮೈ ವ್ಯಾರವಾಲ ಅವರದ್ದು. ಸಂಗಾತಿ ಮಾಣೆಕ್‌ಶಾ ಸಾಂಗತ್ಯ ಬಯಸಿ ಕ್ಯಾಮೆರಾ ಕೈಗೆತ್ತಿಕೊಂಡಾಗ ಆಕೆಗಿನ್ನೂ 13ರ ಹರೆಯ. ಹುಟ್ಟಿದ್ದು ಗುಜರಾತಿನ ನವ್ಸಾರಿ, ಶಿಕ್ಷಣ ಬಾಂಬೆಯಲ್ಲಿ, ದಿಲ್ಲಿ ಅವರ ಕರ್ಮಭೂಮಿ. ಸಮಾಜದ ಎಲ್ಲ ಎಲ್ಲೆಕಟ್ಟುಗಳನ್ನೂ ಮೀರಿ ವೃತ್ತಿಪರ ಛಾಯಾಗ್ರಹಣವನ್ನು ಕೈಗೆತ್ತಿಕೊಂಡ ಅವರು, ಬ್ರಿಟಿಷ್ ಇನ್‌ಫರ್ಮೇಷನ್ ಸರ್ವೀಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು. ಸೈಕಲ್ ಏರಿ, ಕ್ಯಾಮರಾ ಹಿಡಿದು ಹೊರಟರೆಂದರೆ ಚಿತ್ರದ ಬೇಟೆ ಶತಃಸಿದ್ಧ. ಒಂದೊಳ್ಳೆ ಆಂಗಲ್‌ಗಾಗಿ ಏರದ ಎತ್ತರ, ಕಾಯದ ಕ್ಷಣವಿಲ್ಲ. ಭಾರತದ ಕಡೆಯ ವೈಸರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರ ನಿಷ್ಕ್ರಮಣ, ಕೆಂಪುಕೋಟೆಯ ಮೇಲೆ ಸ್ವತಂತ್ರ ಭಾರತದ ಧ್ವಜ ಹಾರಾಡಿದ ಮೊದಲ ಕ್ಷಣ, ಮಹಾತ್ಮನ ಅಂತಿಮ ಯಾತ್ರೆ, ಹೀಗೆ ಎಷ್ಟೋ ಅಪರೂಪದ ಕ್ಷಣಗಳು ಇವರ ಕ್ಯಾಮರಾದಲ್ಲಿ ಕೈದಾಗಿವೆ. ನೆಹರು ಇವರ ಅಚ್ಚುಮೆಚ್ಚಿನ ವಸ್ತು. ನೆಹರು ಸಿಗಾರ್ ಹೊತ್ತಿಸುವ ದೃಶ್ಯ ವಿಶ್ವದ ಗಮನ ಸೆಳೆಯಿತು. ಸಂಗಾತಿ ಅಗಲಿದ ನಂತರ ಛಾಯಾಗ್ರಹಣ ನಿಲ್ಲಿಸಿದ ಅವರು, ಕಡೆಯ ದಿನಗಳವರೆಗೂ ಸ್ವತಂತ್ರವಾಗಿ ಘನತೆಯಿಂದ ಬದುಕಿದರು.

📙📙gkmani2u📙📙

**ಮೀರಾ ಸಾಹಿ್ ಫಾತಿಮಾ ಬೀವಿ**
1989ರಲ್ಲಿ ಸುಪ್ರೀಂ ಕೋರ್ಟಿಗೆ ನೇಮಕಗೊಂಡ ಮೊದಲ ಭಾರತದ ಮತ್ತು ಏಷ್ಯಾ ಖಂಡದ ಮೊದಲ ಮಹಿಳಾ ನ್ಯಾಯಾಧೀಶೆ. ರಾಷ್ಟ್ರವೊಂದರ ನ್ಯಾಯಾಂಗ ವಿಭಾಗದಲ್ಲಿ ಉನ್ನತ ಹುದ್ದೆಗೆ ಏರಿದ ಮೊಟ್ಟ ಮೊದಲ ಮುಸ್ಲಿಂ ಮಹಿಳೆ. ಮುಸ್ಲಿಂ ಮಹಿಳೆಯರ ವಿಚ್ಛೇದನ ಹಕ್ಕುಗಳ ರಕ್ಷಣೆ ಕುರಿತು ಇವರು ಮಾಡಿದ ಕೆಲಸ ಅಪಾರ. ಇದರ ಜತೆಯಲ್ಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಕಾರ್ಯ, ನಿವೃತ್ತಿ ನಂತರ ತಮಿಳುನಾಡಿನ ರಾಜ್ಯಪಾಲರಾಗಿ ಕೆಲಸ ನಿರ್ವಹಿಸಿದ್ದರು.

*ನೀರಜಾ ಭಾನೋಟ್*
1985ರಲ್ಲಿ ಅಮೆರಿಕದ 'ಪ್ಯಾನ್ ಅಮೆರಿಕನ್ ವಿಮಾನದ ಫ್ಲೈಟ್ ಅಟೆಂಡೆಂಟ್' ಪದವಿಗೆ ಅರ್ಜಿ ಸಲ್ಲಿಸಿದ ಚಂಡೀಘಡ್ ಮೂಲದ ಚೆಲುವೆ. ಸುಮಾರು 10 ಸಾವಿರ ಅಭ್ಯರ್ಥಿಗಳ ಪೈಕಿ ಆಯ್ಕೆಯಾದ 80 ಜನರಲ್ಲಿದ್ದ ಏಕೈಕ ಭಾರತೀಯಳು. ನಂತರ ಪ್ಯಾನ್ ಅಮೆರಿಕನ್ ಕ್ಲಿಪ್ಪರ್-73 ವಿಮಾನದ ಗಗನ ಸಖಿಯರ ಮುಖ್ಯಸ್ಥೆಯಾಗಿ ಕೆಲಸ. ಭಯೋತ್ಪಾದಕರಿಂದ ಅಪಹರಣಗೊಂಡ ವಿಮಾನದ 300ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಲು ತಮ್ಮ ಪ್ರಾಣವನ್ನು ನೀಡಿ, ವಿಮಾನಯಾನದ ಇತಿಹಾಸದಲ್ಲಿ ಮರೆಯದ ಹೆಸರು.

*ರೀನಾ ಕೌಶಲ್ ಧರ್ಮಶಕ್ತು*
ಪ್ರಪಂಚದಲ್ಲೇ ಅತ್ಯಂತ ಶೀತ ಪ್ರದೇಶವಾದ ದಕ್ಷಿಣ ಧ್ರುವದ ತುದಿ ಮುಟ್ಟಿದ ಮೊದಲ ಭಾರತೀಯಳು ಎಂಬ ಗೌರವಕ್ಕೆ ಭಾಜನಳಾದ ಮಹಿಳೆ. ದೆಹಲಿ ಮೂಲಕ 38 ದಿನಗಳ ಕಾಲ ಸ್ಕೀಯಿಂಗ್ ಮಾಡುತ್ತ 915 ಕೀ.ಮೀ. ದೂರವನ್ನು ಮಂಜುಗಡ್ಡೆಯ ದಾರಿಯಲ್ಲಿ ಪಯಣಿಸಿ ಗುರಿ ತಲುಪಿದ ಸಾಹಸಿ.

👩ಮೇರಿ ಕೋಮ್
ಭಾರತೀಯ ಮಹಿಳಾ ಬಾಕ್ಸಿಂಗ್ ಪಟು. ಮಣಿಪುರದ ಕೋಮ್ ಬುಡಕಟ್ಟು ಸಮುದಾಯಕ್ಕೆ ಸೇರಿದ ಈಕೆ, 5 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್. ಅಲ್ಲದೇ ಆಡಿದ ಆರು ಚಾಂಪಿಯನ್‌ಶಿಪ್‌ಗಳಲ್ಲೂ ಪದಕ ಗೆದ್ದ ಏಕೈಕ ಮಹಿಳೆ. 2012ರ ಬೇಸಿಗೆ ಒಲಿಂಪಿಕ್ಸ್‌ಗೆ ಆಯ್ಕೆಯಾದ ಏಕೈಕ ಬಾರತೀಯ ಮಹಿಳಾ ಬಾಕ್ಸಿಂಗ್ ಪಟು. ಮತ್ತು 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ವಿಜೇತೆ. ಭಾರತದ ಅತ್ಯಂತ ಹೆಚ್ಚಿನ ಪ್ರಸಿದ್ಧಿ ಮತ್ತು ಗೌರವ ಪಡೆದ ಕ್ರೀಡಾ ತಾರೆ.

👩ಇರೋಮ್ ಶರ್ಮಿಳಾ ಛಾನು (42)
ಮಣಿಪುರದ ಉಕ್ಕಿನ ಮಹಿಳೆ,ನಾಗರಿಕ ಹಕ್ಕುಗಳ ಕಾರ‌್ಯಕರ್ತೆ, ಕವಯಿತ್ರಿ ಇರೋಮ್ ಶರ್ಮಿಳಾ ಛಾನು. ಇಂಫಾಲ ಅವರ ಹುಟ್ಟೂರು.

ಸಶಸ್ತ್ರಪಡೆಯ (ವಿಶೇಷ ಅಧಿಕಾರ) ಕಾಯಿದೆ 1958ಅನ್ನು ವಾಪಸ್ ಪಡೆಯಲು ಆಗ್ರಹಿಸಿ 2000 ಇಸವಿಯ ನ.3ರಿಂದ ನಿರಶನ ಆರಂಭಿಸಿದ್ದು, 15ನೇ ವರ್ಷದಲ್ಲೂ ಮುಂದುವರಿಸಿದ ಗಟ್ಟಿಗಿತ್ತಿ. ರಾಜ್ಯದಲ್ಲಿ ಸಶಸ್ತ್ರಪಡೆಯು ವಿಶೇಷಾಧಿಕಾರ ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ, ಅಮಾಯಕರ ಹತ್ಯೆಯಲ್ಲಿ ತೊಡಗಿರುವುದರ ವಿರುದ್ಧ ಸಿಡಿದೆದ್ದು ಏಕಾಂಗಿಯಾಗಿ ಅಹಿಂಸಾತ್ಮಕ ಪ್ರತಿಭಟನೆ ಮುಂದುವರಿಸಿರುವ ದಿಟ್ಟೆ.

*ಎಂ.ಎಸ್.ಸುಬ್ಬಲಕ್ಷ್ಮಿ
ಸಂಗೀತವೇ ಜಗವಾಳೋ ಮಂದಹಾಸ ಎನ್ನುವುದಕ್ಕೆ ಜೀವಂತ ಪ್ರತಿಮೆ ಎಂ.ಎಸ್.ಸುಬ್ಬಲಕ್ಷ್ಮಿ. ವಿನಯ, ಸಜ್ಜನಿಕೆ, ಗಾಂಭೀರ್ಯ ಎಲ್ಲವೂ ಮೇಳೈಸಿದ ಅವರದ್ದು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಜರಾಮರ ಹೆಸರು. ಪ್ರಪ್ರಥಮವಾಗಿ ಮೀರಾ ಭಜನ್ ಅನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿದವರು. ದೇಶದ ಎಲ್ಲಾ ಭಾಷೆಯಲ್ಲೂ ಹಾಡಿರುವ ಹೆಗ್ಗಳಿಕೆ ಇವರದು. 1966ರಲ್ಲಿ ವಿಶ್ವಸಂಸ್ಥೆಯ ಕೋರಿಕೆಯಂತೆ ವಿಶ್ವಸಂಸ್ಥೆ ದಿನಾಚರಣೆ ಸಮಾರಂಭದಲ್ಲಿ ಕಛೇರಿ ನಡೆಸಲು ವಿಶೇಷ ಆಹ್ವಾನ ಪಡೆದು, ಹಾಡಿದ ಮೊಟ್ಟ ಮೊದಲ ಭಾರತೀಯ ಮಹಿಳೆ.

👩ಅಮೃತಾ ದೇವಿ
ಪರಿಸರ ಸಂರಕ್ಷಣೆಯಲ್ಲಿ ಈ ಶತಮಾನದ ಆರಂಭದಿಂದಲೂ ಅನೇಕ ಹೆಸರುಗಳು ಕೇಳಿ ಬರುತ್ತವೆ. ಆದರೆ 17ನೇ ಶತಮಾನದಲ್ಲಿ ರಾಜ ಆಜ್ಞೆಯಂತೆ ಮರ ಕಡಿಯಲು ಬಂದವರಿಗೆ ಮರಗಳನ್ನು ಕಡಿಯಲು ಬಿಡದೆ ಜೀವ ಕೊಟ್ಟ ಮಹಿಳೆ ಅಮೃತಾ ದೇವಿ. ವಿಷಯ ತಿಳಿದ ರಾಜ ಅವಳ ಸಮುದಾಯದವರು ಇರುವ ಗ್ರಾಮಗಳಲ್ಲಿ ಮರ ಕಡಿಯುವುದನ್ನು, ಬೇಟೆಯಾಡುವುದನ್ನು ನಿಷೇಧಿಸಿ ಕಾನೂನು ಜಾರಿಗೆಯ ತಂದ. ಅದು ಇಂದಿಗೂ ಜಾರಿಯಲ್ಲಿದೆ.

(Join gkmani2u whatsapp group 8497078528)

👩ಕಮಲಾದೇವಿ ಚಟ್ಟೋಪಾಧ್ಯಾಯ
ಹಲವು ಪ್ರಥಮಗಳನ್ನು ಸಾಧಿಸಿದ ಹೆಗ್ಗಳಿಕೆ ಕನ್ನಡತಿ ಕಮಲಾ ಚಟ್ಟೋಪಾಧ್ಯಾಯ ಅವರದ್ದು. ಸಹಕಾರ ಚಳವಳಿಯ ಮೂಲಕ ಭಾರತೀಯ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದವರು. ಸ್ವತಂತ್ರ ಭಾರತದಲ್ಲಿ ಭಾರತೀಯ ಕೈಮಗ್ಗ, ಕರಕುಶಲ, ರಂಗಭೂಮಿಯ ಏಳಿಗೆಯ ಪ್ರವರ್ತಕಿಯಾಗಿ ಗುರುತಿಸಿಕೊಂಡವರು. ಇವರ ದೂರದೃಷ್ಟಿಯ ಫಲವಾಗಿ ರಾಷ್ಟ್ರೀಯ ನಾಟಕ ಶಾಲೆ, ಸಂಗೀತ ನಾಟಕ ಅಕಾಡೆಮಿ, ಭಾರತ ಕರಕುಶಲ ಮಂಡಳಿ, ಸೆಂಟ್ರಲ್ ಕಾಟೇಜ್ ಆಫ್ ಇಂಡಸ್ಟ್ರೀಸ್ ಎಂಪೋರಿಯಂ ರೂಪು ತಾಳಿವೆ. ಅಖಿಲ ಭಾರತ ಕರಕುಶಲ ಮಂಡಳಿಯ ಮೊದಲ ಅಧ್ಯಕ್ಷೆ. 1964ರಲ್ಲಿ ಬೆಂಗಳೂರಿನಲ್ಲಿ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆ್ಯಂಡ್ ಕೊರಿಯೊಗ್ರಫಿ ಆರಂಭಿಸಿದರು.

1926ರಲ್ಲಿ ಮದ್ರಾಸ್ ಪಾವಿನ್ಷಿಯಲ್ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಸ್ಪರ್ಧಿಸುವ ಮೂಲಕ ಅಸೆಂಬ್ಲಿಗೆ ಸ್ಪರ್ಧಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು.

👰ಸುರೇಖಾ ಯಾದವ್
ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸರಕು - ಸಾಗಣೆ ರೈಲಿನಲ್ಲಿ ಸಹಾಯಕ ಚಾಲಕಿಯಾಗಿ ನೇಮಕಗೊಂಡವರು ಮಹಾರಾಷ್ಟ್ರದ ಕಾರಡ್‌ನ ಸುರೇಖಾ ಯಾದವ್. ಸರಕು -ಸಾಗಣೆ ರೈಲುಗಳಲ್ಲಿ ಗಂಟೆಗಟ್ಟಲೆ ಪ್ರಯಾಣಿಸುವ ಸವಾಲನ್ನು ಛಲದಿಂದಲೇ ಸ್ವೀಕರಿಸಿದ ಈಕೆ, ಹತ್ತು ವರ್ಷಗಳ ಕಾಲ ಅಲ್ಲಿ ದುಡಿದರು. ಇಬ್ಬರು ಮಕ್ಕಳ ತಾಯಿಯಾಗಿರುವ ಈಕೆ ಸದ್ಯ ಕಳೆದ ದಶಕದಿಂದೀಚೆಗೆ ಉಪನಗರಗಳ ರೈಲು ಚಾಲಕಿಯಾಗಿದ್ದಾರೆ.

*ಅರುಂಧತಿ ಭಟ್ಟಾಚಾರ‌್ಯ
ದೇಶದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಮಹಿಳಾ ಅಧ್ಯಕ್ಷೆ. ಹುಟ್ಟೂರು ಕೋಲ್ಕೊತಾ. ಜಾಧವ್‌ಪುರ ವಿವಿ, ಕೋಲ್ಕೊತಾದ ಲೇಡಿ ಬ್ರಬುರ್ನೆ ಕಾಲೇಜಿನಲ್ಲಿ ಅಧ್ಯಯನ. ಪೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ 36ನೇ ಪ್ರಭಾವಿ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. ಬ್ಯಾಂಕ್‌ನಲ್ಲಿ ಶೇ 20ರಷ್ಟು ಮಹಿಳೆಯರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕುಟುಂಬಕ್ಕೆ ನಿಕಟವಾಗಿರುವಂತೆ ವರ್ಗಾವಣೆ ಪ್ರಕ್ರಿಯೆ, ಉನ್ನತ ಶಿಕ್ಷಣ, ವಿಶೇಷ ತರಬೇತಿ, ಮಕ್ಕಳ ಆರೈಕೆಗಾಗಿ ಎರಡು ವರ್ಷಗಳ ವಿಶ್ರಾಂತಿ, ಮಹಿಳೆಯರ ಕೆಲಸದ ಅವಧಿಯಲ್ಲಿ ನಮ್ಯತೆ, ತಾತ್ಕಾಲಿಕ ನಿಯೋಜನೆ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಂಡಿದ್ದಾರೆ.

👩ವಿಂಗ್ ಕಮಾಂಡರ್ ಪೂಜಾ ಠಾಕೂರ್
ರಾಜಸ್ಥಾನದಲ್ಲಿ ಹುಟ್ಟಿದ ಇವರು ಗಣರಾಜ್ಯೋತ್ಸವ ಪಥ ಸಂಚಲನವನ್ನು ನಿರ್ವಹಿಸಿದ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದವರು. ಈ ಬಾರಿ ಗಣರಾಜ್ಯೋತ್ಸವಕ್ಕೆ ಪ್ರಮುಖ ಅತಿಥಿಯಾಗಿ ಬಂದಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಸ್ವಾಗತಿಸಿದ ಬೆಟಾಲಿಯನ್‌ನ ನೇತೃತ್ವದ ವಹಿಸಿ ಗೌರವ ವಂದನೆ ಸಲ್ಲಿಸುವ ಮೂಲಕ ದೇಶದ ಗೌರವಕ್ಕೆ ಪಾತ್ರರಾಗಿದ್ದಾರೆ. ಹೈದರಾಬಾದ್ ಏರ್‌ಪೋರ್ಸ್ ಅಕಾಡೆಮಿಯ 2000ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಠಾಕೂರ್ ಪ್ಯಾರಾ ಜಂಪಿಂಗ್ ಮತ್ತು ಸಾಹಸ ಕ್ರೀಡೆಗಳಲ್ಲಿ ಛಾಪು ಮೂಡಿಸಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಹದಿಮೂರುವರೆ ವರ್ಷಗಳಿಂದ ಕಾರ‌್ಯ ನಿರ್ವಹಿಸುತ್ತಿದ್ದಾರೆ. ''ತರಬೇತಿ ಅವಧಿಯಲ್ಲಿ ನಮ್ಮನ್ನು ಪುರುಷ ಅಧಿಕಾರಿಗಳಂತೆ ಕಾಣಲಾಗುತ್ತಿತ್ತು. ಮೊದಲಿಗೆ ನಾವು ಅಧಿಕಾರಿಗಳು, ಬಳಿಕವಷ್ಟೆ ಮಹಿಳೆಯರು. ಇದು ನನ್ನ ಉದ್ಯೋಗವಲ್ಲ , ಜೀವನ ಮಾರ್ಗ,''ಎಂದು ಹೇಳುತ್ತಾರೆ.

👩ರಾಜ್ಯ...: ಯಕ್ಷಗಾನ ಕಲಾವಿದೆ ಲೀಲಾ ಬೈಪಡಿತ್ತಾಯ (68)
ಪುರುಷ ಪಾರಮ್ಯದ ಗಂಡುಮೆಟ್ಟಿನ ಕಲೆ ಯಕ್ಷಗಾನವನ್ನೇ ವೃತ್ತಿಯಾಗಿರಿಸಿಕೊಂಡು ವ್ಯವಸಾಯಿ ಮೇಳಗಳಲ್ಲಿ ತಿರುಗಾಟ ಮಾಡಿದ ಮೊದಲ, ಯಕ್ಷಗಾನ ಕಲಾವಿದೆ ಲೀಲಾ ಬೈಪಡಿತ್ತಾಯ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಇವರು ಏಕಾಂಗಿಯಾಗಿ ಒಂದಿಡೀ ಆಟವನ್ನು ನಡೆಸಿಕೊಡುವ ಏಕೈಕ ವೃತ್ತಿಪರ ಮಹಿಳಾ ಭಾಗವತರು. ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಗುರುಗಳಾಗಿ, ಈಗ ಕಟೀಲು ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬಯಿ, ಚೆನ್ನೈ, ಅಹಮದಾಬಾದ್, ದಿಲ್ಲಿಗಳಲ್ಲೂ ಇವರ ಕಂಠ ಮೊಳಗಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಎದುರು ಯಕ್ಷಗಾನ ಪ್ರದರ್ಶನ ನೀಡಿರುವ ಇವರು ಎರಡು ತುಳು ಚಲನಚಿತ್ರಗಳಿಗೂ ಕಂಠದಾನ ಮಾಡಿದ್ದಾರೆ. ಭಾಗ್ಯದ ಭಾಗೀರಥಿ ಎಂಬ ಸಾಮಾಜಿಕ ಯಕ್ಷಗಾನ ಪ್ರಸಂಗವೊಂದನ್ನು ಬರೆದಿದ್ದಾರೆ. ಕಾಸರಗೋಡಿನ ಮಧೂರು ಇವರ ಹುಟ್ಟೂರು. ಇವರು ಶಾಸ್ತ್ರೀಯ ಸಂಗೀತ ಅಭ್ಯಸಿಸಿ ಹಿಂದಿ ವಿಶಾರದ ಪದವಿ ಪಡೆದಿದ್ದಾರೆ. 2010ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು 2012ರಲ್ಲಿ ಕರ್ನಾಟಕ ಸರಕಾರದ ಹಿರಿಯ ನಾಗರಿಕರ ಸಾಧನಾ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಇನ್ನು, ಕೇಂದ್ರ ರೈಲ್ವೆ ಉಪನಗರಗಳ ಸಂಚಾರಿ ವ್ಯವಸ್ಥೆಯಲ್ಲಿ ಮೊದಲ ಬಾರಿ ಚಾಲಕರ ಸ್ಥಾನದಲ್ಲಿ ರಾರಾಜಿಸಿದ ಮಹಿಳೆ ಮುಮ್ತಾಜ್ ಕಜಿ, ಸಾಂಪ್ರದಾಯಿಕ ಕೌಟುಂಬಿಕ ಹಿನ್ನೆಲೆಯಿಂದ ಬಂದ ಈಕೆ ಧೈರ್ಯ, ಛಲವೊಂದಿದ್ದರೆ ಮಹಿಳೆಯರು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂಬಂತಿದ್ದಾರೆ.
🌗🌗gkmani2u🌗🌗

ಹಲವು ಪ್ರಥಮಗಳು

*ಆರತಿ ಸಾಹ:ಇಂಗ್ಲಿಷ್ ಚಾನೆಲ್ ದಾಟಿದ ಈಜುಗಾರ್ತಿ
*ಅರುಣ್ ಅಸಫ್ ಆಲಿ: ಹೊಸದಿಲ್ಲಿಯ ಮಹಿಳಾ ಮೇಯರ್
*ಬಚೇಂದ್ರ ಪಾಲ್: ಮೌಂಟ್ ಎವೆರೆಸ್ಟ್ ಏರಿದಾಕೆ
*ಹೃಷಿನಿ ಕಂಹೆಕರ್: ಅಗ್ನಿಶಾಮಕ ದಳದಲ್ಲಿ ಸೇವೆ
*ಇಂದಿರಾ ಗಾಂಧಿ: ಪ್ರಧಾನಿ ಹಾಗೂ ಭಾರತ ರತ್ನ ಪುರಸ್ಕೃತೆ
*ಕಾಂಚನ್ ಸಿ. ಭಟ್ಟಾಚಾರ್ಯ: ಡಿಜಿಪಿ
*ಕಾಂಚನ್ ಗೌಡ್: ಟ್ಯಾಕ್ಸಿ ಚಾಲಕಿ
*ಕಿರಣ್ ಬೇಡಿ: ಐಪಿಎಸ್ ಅಧಿಕಾರಿ
*ಲೀಲಾ ಸೇತ್: ಮುಖ್ಯನ್ಯಾಯಮೂರ್ತಿ (ಹೈಕೋಟ್)
*ಮರಿಯಾ ಗೋರ್ತೆ: ರೈಲು ಎಂಜಿನ್ ಚಾಲಕಿ
*ಮೀನಾಕ್ಷಿ: ದಿಲ್ಲಿ ಮೆಟ್ರೋನ ಚಾಲಕಿ
*ಪದ್ಮಾವತಿ: ಏರ್‌ಮಾರ್ಷಲ್
*ಪ್ರತಿಭಾ ಪಾಟೀಲ್: ರಾಷ್ಟ್ರಪತಿ
*ರಾಜಕುಮಾರಿ ಅಮೃತ್‌ಕೌರ್: ಸಂಪುಟ ಸಚಿವೆ
*ರೀತಾ ಫರೀಯಾ: 'ಮಿಸ್ ವರ್ಲ್ಡ್' ಪ್ರಶಸ್ತಿ ಪುರಸ್ಕೃತೆ
*ಸರೋಜಿನಿ ನಾಯ್ಡು: ಉತ್ತರ ಪ್ರದೇಶದ ಮೇಯರ್
*ಸುಚೇತಾ ಕೃಪಾಲನಿ: ಮುಖ್ಯಮಂತ್ರಿ
*ಸುಷ್ಮಿತಾ ಸೇನ್: 'ಮಿಸ್ ಯುನಿವಸ್‌' ಪ್ರಶಸ್ತಿ ಪುರಸ್ಕೃತೆ
*ವಿಜಯಲಕ್ಷ್ಮಿ ಪಂಡಿತ್: ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಅಧ್ಯಕ್ಷೆ
*ಶಾನ್ನೋ ದೇವಿ: ರಾಜ್ಯಸಭೆಯ ಸ್ಪೀಕರ್
*ಸಂತೋಷ್ ಯಾದವ್: ಎರಡು ಬಾರಿ ಮೌಂಟ್ ಎವೆರೆಸ್ಟ್ ಏರಿದಾಕೆ
*ಅನ್ನಿಬೆಸೆಂಟ್: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷೆ
*ಹರೀತ್ ಕೌರ್ ದಯಾಳ್: ಭಾರತೀಯ ವಾಯುಸೇನೆಯ ವಿಮಾನ ಚಾಲಕಿ (ಪೈಲೆಟ್)
*ಕದಂಬಿನಿ ಗಂಗೂಲಿ ಹಾಗೂ ಚಂದ್ರಮುಖಿ ಬಸು: ಪದವೀಧರರು (1883)
*ದುರ್ಬಾ ಬ್ಯಾನರ್ಜಿ: ವಿಮಾನಯಾನದ ಪೈಲೆಟ್
*ಕಾಮಿನಿ ರಾಯ್: ಆನರ್ಸ್ ಗ್ರಾಜ್ಯುಯೇಟ್ (1886)
*ಕರ್ಣಂ ಮಲ್ಲೇಶ್ವರಿ: ಒಲಿಂಪಿಕ್ ಪದಕ ಪುರಸ್ಕೃತೆ (2000)
*ಕಮಲಜೀತ್ ಸಂಧು: ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತೆ
*ಕಾರ್ನಿಲಾ ಸೋರ್ಬಜಿ: ವಕೀಲೆ (ಲಾಯರ್)
*ರೋಜ್ ಮಿಲನ್ ಬೆಥ್ಯೂ: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮೀಷನ್
*ಅನ್ನಾ ಚಾಂಡಿ: ನ್ಯಾಯಾಧೀಶೆ (1937ರಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದರು)
*ಫಾತೀಮಾ ಬೀವಿ: ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಧೀಶೆ
*ಪುನೀತ್ ಅರೋರ: ಲೆಫ್ಟಿನೆಂಟ್ ಜನರಲ್
*ಸುಷ್ಮಾ ಚಾವ್ಲಾ: ಭಾರತೀಯ ವಿಮಾನಯಾನದ ಅಧ್ಯಕ್ಷೆ
*ರಜಿಯಾ ಸುಲ್ತಾನ್: ಭಾರತವನ್ನು ಆಳಿದ ಮೊದಲ ಹಾಗೂ ಕೊನೆಯ ಮುಸ್ಲಿಂ ಮಹಿಳೆ
*ನೀರಜ್ ಭಾನಟ್: ಅಶೋಕ ಚಕ್ರ ಪುರಸ್ಕೃತೆ
*ಆಶಾಪೂರ್ಣ ದೇವಿ: ಜ್ಞಾನಪೀಠ ಪುರಸ್ಕೃತೆ
*ಮದರ್ ತರೇಸಾ: ನೋಬೆಲ್ ಪುರಸ್ಕೃತೆ
*ಪಿ.ಕೆ ತ್ರೆಸಿಯಾ ನಂಗುಲಿ : ಮುಖ್ಯ ಎಂಜನಿಯರ್
*ಲಕ್ಷ್ಮಿ ಎನ್. ಮೆನನ್ : ವಿದೇಶ ಸಚಿವೆ
*ಅಮೃತಾ ಪ್ರೀತಂ : ಸಾಹಿತ್ಯ ಅಕಾಡೆಮಿ ಪುರಸ್ಕೃತೆ
*ಡಾ. ಆಶಾ ಚಟರ್ಜಿ :ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷೆ
*ಸಾನಿಯಾ ಮಿರ್ಜಾ: ಡಬ್ಲ್ಯುಟಿಎ ಟೆನ್ನಿಸ್ ಪಂದ್ಯಾವಳಿ ವಿಜೇತೆ
*ಪ್ರೇಮಾ ಮುಖರ್ಜಿ : ಸರ್ಜನ್
*ದೇವಿಕಾ ರಾಣಿ : ನಟಿ
*ಪ್ರತಿಮಾ ಪುರಿ : ದೂರದರ್ಶನದ ಸುದ್ದಿ ವಾಚಕಿ
*ಆ್ಯನಾ ಜಾಜ್ : ಐಎಎಸ್ ಅಧಿಕಾರಿ
*ಅಂಜು ಸಚ್‌ದೇವ, ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ (ದಿಲ್ಲಿ ವಿವಿ)
🌗🌗gkmani2u🌗🌗

ಆವಿಷ್ಕಾರಗಳು
1. ಕಾಗದದ ಚೀಲ
1868ರಲ್ಲಿ ಅಮೆರಿಕದ ಹತ್ತಿ ಮಿಲ್ ಕಾರ್ಮಿಕಳಾದ ಮಾರ್ಗರೆಟ್ ನೈಟ್ ಕಾಗದದ ಚೀಲ ಮಾಡುವ ಯಂತ್ರವನ್ನು ಕಂಡುಹಿಡಿದಳು. 1871ರಲ್ಲಿ ನೈಟ್ ಅದರ ಪೇಟೆಂಟ್ ಪಡೆದಳು.

2. ಕೆಲ್ವರ್
1966ರಲ್ಲಿ ಹಗುರವಾದ ಹಾಗೂ ಸ್ಟೀಲ್‌ಗಿಂತ ಐದು ಪಟ್ಟು ಶಕ್ತಿಶಾಲಿಯಾದ ಕೆಲ್ವರ್ ಅನ್ನು ಡುಪೋಟ್ ಕೆಮಿಸ್ಟ್ ಸ್ಟೆಫ್ನಿ ಕೌಲೆಂಕ್ ಕಂಡುಹಿಡಿದಳು. ಕಾರಿನ ಟೈರ್‌ಗಾಗಿ ಹಗುರವಾದ ಫೈಬರ್‌ವನ್ನು ಹುಡುಕುವ ಸಮಯದಲ್ಲಿ ಆಕಸ್ಮಿಕವಾಗಿ ಅವಳು ಇದನ್ನು ಕಂಡುಹಿಡಿದಳು.

3. ಭೂಮಾಲೀಕರ ಆಟವನ್ನು ರೂಪಿಸುವ ಮೂಲಕ ಆರ್ಥಿಕ ಸಿದ್ಧಾಂತವನ್ನು ಪಸರಿಸದವಳು ಎಲಿಜಬೆತ್ ಮ್ಯಾಗಿ. ಭೂ ಕಬಳಿಕೆ, ಭೂ ಮೌಲ್ಯದ ತೆರಿಗೆ ಮುಂತಾದವನ್ನು ಮಾಲೀಕರಿಗೆ ತಿಳಿಸುವ ಬೋರ್ಡ್ ಗೇಮನ್ನು 1904ರಲ್ಲಿ ಪೇಟೆಂಟ್ ಪಡೆದು, 1906ರಲ್ಲಿ ಸ್ವತಃ ಪ್ರಕಟಿಸಿದಳು. 30 ವರ್ಷಗಳ ನಂತರ ಚಾರ್ಲ್ಸ್ ಡ್ಯಾರೋ ಎಂಬಾತ ಅದರನ್ನು ಪ್ರತಿರೂಪಿಸಿ, ಅದರ ಸ್ವಾಮ್ಯತೆಯನ್ನು ಪಾರ್ಕರ್ ಬ್ರದರಸ್ ಕಂಪನಿಗೆ ಮಾರಿದ. ಕಂಪನಿಯೂ ಮ್ಯಾಗಿಯ ಮೂಲ ಆಟದ ಪೇಟೆಂಟನ್ನು 500 ಡಾಲರ್‌ಗೆ ಪಡೆಯಿತು.

4. ಗಾಳಿ ತಡೆ ವೈಪರ್ಸ್‌: ಮೇರಿ ಅಂಡರ್‌ಸನ್ ಮಾನವ ಚಾಲಿತ ಗಾಳಿ ತಡೆ ವೈಪರ್ಸ್‌ನ್ನು 1903ರಲ್ಲಿ ಕಂಡುಹಿಡಿದಳು. (1917ರಲ್ಲಿ ಮತ್ತೊಬ್ಬ ಮಹಿಳಾ ಸಂಶೋಧಕಿ ಚಾರ್ಲೆಟ್ ಬ್ರಿಡ್ಜ್‌ವುಡ್ ಅಟೋಮ್ಯಾಟಿಕ್ ಎಲೆಕ್ಟ್ರಿಕ್ ರೋಲರ್‌ನ್ನು ಕಂಡುಹಿಡಿದರೂ ಅದು ಬಳಕೆಯಾಗಲಿಲ್ಲ). ಅಂಡರ್‌ಸನ್‌ಳ ಪೇಟೆಂಡ್ 1920ರಲ್ಲಿ ಮುಗಿಯಿತು. ಕ್ಯಾಡಿಲಾಕ್ ಪ್ರಥಮ ಬಾರಿಗೆ ಕಾರಿನಲ್ಲಿ ಗಾಳಿತಡೆ ವೈಪರ್‌ಗಳನ್ನು ಅಳವಡಿಸಿದ, ನಂತರ ಇತರ ಕಂಪನಿಗಳೂ ಅನುಸರಿಸಿದವು.

5. ಬಳಸಿ ಎಸೆಯುವ ಕೂಸಿನ ಬಟ್ಟೆ: 1951ರಲ್ಲಿ ಮರಿಯಾನ್ ಡೊನೊವಾನ್ ಜಲನಿರೋಧಕ ಬೋಟರ್‌ಗೆ ಪೇಟೆಂಟ್ ಪಡೆದಳು. ಮಕ್ಕಳಿಗಾಗಿ ಬಳಸಿ ಎಸೆಯುವ ಬಟ್ಟೆಗಳ ಪೇಟೆಂಟ್‌ನ್ನು ಕೆಕೊ ಕಾರ್ಪೊರೇಷನ್‌ಗೆ 1ಮಿಲಿಯನ್ ಡಾಲರ್‌ಗೆ ಮಾರಿದಳು. ನಂತರ ಸಂಪೂರ್ಣವಾಗಿ ಬಳಸಿ ಎಸೆಯುವ ಮಾದರಿಯನ್ನು ಮುಂದಿನ 5 ವರ್ಷಗಳಲ್ಲಿ ರೂಪಿಸಿದಳು. 1961ರಲ್ಲಿ ಪ್ಯಾಂಪರಸ್ ರೂಪುಗೊಂಡಿತು.

6. ಪಾತ್ರೆ ತೊಳೆಯುವ ಸಾಧನ: ಜೋಸೆಫ್ ಕೊಕ್ರೇನ್ ಪಾತ್ರೆ ತೊಳೆಯುವ ಸಾಧನವನ್ನು ಕಂಡುಹಿಡಿದು 1886ರಲ್ಲಿ ಅದರ ಪೇಟೆಂಟ್ ಪಡೆದಳು. ಆದರೆ ಅದನ್ನು ಅವಳು ಸ್ವತಃ ಯಾವತ್ತೂ ಬಳಸಲಿಲ್ಲ, ಆದರೆ ಸೇವಕಿಯರಿಗೆ ಅದರ ಉಪಯೋಗ ದೊರೆಯಿತು.

7. ದ್ರವ ಕಾಗದ: ಟೈಪಿಂಗ್ ತಪ್ಪುಗಳನ್ನು ಮುಚ್ಚಿಹಾಕಲು ಬೆಟ್ಟೆ ನೆಸ್‌ಮಿತ್ ಗ್ರಾಹಂ ತನ್ನ ಅಡುಗೆ ಕೋಣೆಯಲ್ಲಿ ಹಲವಾರು ವರುಷಗಳು ನಡೆಸಿದ ಪ್ರಯತ್ನದ ಫಲವಾಗಿ, ಟೈಪಿಂಗ್ ತಪ್ಪುಗಳನ್ನು ಅಳಸಿಹಾಕು ದ್ರವ ಕಾಗದಕ್ಕೆ 1958ರಲ್ಲಿ ಪೇಟೆಂಡ್ ಪಡೆದಳು.

8. ಅಕ್ಷರಾಭ್ಯಾಸ: ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಅನುಕೂಲವಾಗುವ ಅಲ್ಫಾಬೆಟ್ ಬ್ಲಾಕ್‌ಗಳನ್ನು ರೂಪಿಸಿದ ಬರಹಗಾರ್ತಿ ಅಡೇಲೈನ್ ಡಿ.ಟಿ. ವೈಟ್ನಿ 1882ರಲ್ಲಿ ಪೇಟೆಂಟ್ ಪಡೆದಳು

ಸಿಗ್ನಲ್ ಫ್ಲೇರ್ಸ್‌: ಮಾರ್ಥಾ ಕೋಸ್ಟನ್
ದಶಕಗಳ ಹಿಂದೆ ಹಡಗುಗಳ ನಡುವಿನ ಸಂವಹನ ಕೇವಲ ಬಣ್ಣಬಣ್ಣದ ಪತಾಕೆಗಳ ಮೂಲಕವಷ್ಟೇ ಸಾಂಕೇತಿಕವಾಗಿತ್ತು ಅಥವಾ ಜೋರಾಗಿ ಕೂಗಿಕೊಳ್ಳಬೇಕಿತ್ತು. ಆಗ, ಮಾರ್ಥಾ ಕೋಸ್ಟನ್ ಎಂಬಾಕೆ, ಸತ್ತ ತನ್ನ ಗಂಡನ ಡೈರಿಯಲ್ಲಿದ್ದ 'ಸಿಗ್ನಲ್ ಫ್ಲೇರ್ಸ್‌' ಯೋಜನೆಯನ್ನು ಕೈಗೆತ್ತಿಕೊಂಡು ಸತತ 10 ವರ್ಷಗಳ ಕಾಲ ಸಂಶೋಧನೆ ನಡೆಸಿದಳು. ರಸಾಯನಶಾಸ್ತ್ರಜ್ಞರು ಮತ್ತು ಪೈರೊಟೆಕ್ನಿಕ್ ತಜ್ಞರೊಂದಿಗೆ ಪ್ರಾಯೋಗಿಕವಾಗಿ ಅದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಆದರೆ, ಅಂತಿಮವಾಗಿ 1859ರಲ್ಲಿ 'ಆಸ್ತಿಯ ಒಡತಿ' ಎಂದಷ್ಟೇ ಪರಿಗಣಿಸಿ, ಕೋಸ್ಟನ್ ಅವರ ಹೆಸರಿಗೇ ಪೇಟೆಂಟ್ ನೀಡಲಾಯಿತು.

* ದಿ ಸರ್ಕ್ಯುಲರ್ ಸಾ: ತಬಿತಾ ಬಬಿತ್
ತಬಿತಾ ಬಬಿತ್ ಎಂಬ ನೇಕಾರಿಕೆ ಕುಟುಂಬದ ಹೆಣ್ಣು ಮಗಳು ಮೊದಲ ಬಾರಿಗೆ ವೃತ್ತಾಕಾರದ ಗರಗಸದ ಮೂಲಕ ಮರವನ್ನು ಕತ್ತರಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. 1813ರಲ್ಲಿ ಈ ಕುರಿತ ಮಾದರಿಯೊಂದನ್ನು ತಯಾರಿಸಿದ ತಬಿತಾ, ನೂಲುವ ರಾಟೆಗೆ ಅದನ್ನು ಜೋಡಿಸಿದರು. ಬಬಿತಾ ಅವರ ಷಾಕರ್ ಸಮುದಾಯ ಇದರ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದಿದ್ದರೂ, ಈ ಸಂಶೋಧನೆಯ ಸಮಗ್ರ ಪ್ರಯೋಜನವನ್ನು ಪಡೆದುಕೊಳ್ಳಲಾಯಿತು.

* ರಿಟ್ರ್ಯಾಕ್ಟಬಲ್ ಡಾಗ್ ಲೀಶ್: ಮೇರಿ ಎ.ಡೆಲೆನಿ
ನ್ಯೂ ಯಾರ್ಕ್‌ನ ನಾಯಿಯೊಂದರ ಮಾಲೀಕರಾಗಿದ್ದ ಮೇರಿ ಎ.ಡೆಲೆನಿ 1908ರಲ್ಲಿ 'ನಾಯಿಯನ್ನು ನಿಯಂತ್ರಿಸುವ ಹಗ್ಗ ಅಥವಾ ಉಪಕರಣ'ದ ಪೇಟೆಂಟ್ ಪಡೆದಿದ್ದಾರೆ. ಅಚ್ಚರಿ ಎಂದರೆ, ಆರ್.ಸಿ.ಕಾನರ್ ಎಂಬುವವರು 11 ವರ್ಷಗಳ ನಂತರ 'ಮಕ್ಕಳ ತಳ್ಳುವ ಗಾಡಿ'ಗೆ ಪೇಟೆಂಟ್ ಪಡೆದುಕೊಂಡಿದ್ದಾರೆ.

* ಜಲಾಂತರ್ಗಾಮಿ ದೂರದರ್ಶಕ ಮತ್ತು ದೀಪವನ್ನು ಸರಾ ಮಥರ್ ಎಂಬಾಕೆ ಕಂಡುಹಿಡಿದಿದ್ದು, 1845ರಲ್ಲಿ ಇದಕ್ಕೆ ಪೇಟೆಂಟ್ ಪಡೆದಿದ್ದಾರೆ.

* ಫೋಲ್ಡಿಂಗ್ ಕ್ಯಾಬಿನೆಟ್ ಬೆಡ್: ಸರಾ ಇ.ಗೋಡ್ಸ್
ಸರಾ ಇ.ಗೋಡ್ಸ್ ಅವರ ಫೋಲ್ಡಿಂಗ್ ಕ್ಯಾಬಿನೆಟ್ ಸಣ್ಣ ಮನೆಗಳಲ್ಲಿ ಹೆಚ್ಚು ಸಾಮಾನು, ಸರಂಜಾಮುಗಳನ್ನು ಸೇರ್ಪಡೆಗೊಳಿಸಲು ನೆರವಾಯಿತು. ಈ ಉಪಕರಣಕ್ಕಾಗಿ 1885ರಲ್ಲಿ ಪೇಟೆಂಟ್ ಪಡೆದ ಈಕೆ, ಅಮೆರಿಕಾದ ಪೇಟೆಂಟ್ ಪಡೆದ ಮೊದಲ ಆಫ್ರಿಕನ್ - ಅಮೆರಿಕನ್ ಮಹಿಳೆ ಎನಿಸಿಕೊಂಡರು. ಡೆಸ್ಕ್ ಮಾದರಿಯ ಈ ಉಪಕರಣದಲ್ಲಿ ಇಡೀ ದಿನ ನಮಗೆ ಬೇಕಾದ ವಸ್ತುಗಳನ್ನು ಜೋಡಿಸಿಡಬಹುದಾಗಿದ್ದು, ರಾತ್ರಿ ವೇಳೆಗೆ ಮಡಚಿಟ್ಟು ಹಾಸಿಗೆ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಇದಾದ 15 ವರ್ಷಗಳ ನಂತರವಷ್ಟೇ ಮರ್ಫಿ ಬೆಡ್ ಪರಿಕಲ್ಪನೆ ಬೆಳಕಿಗೆ ಬಂದಿತು.

* ಸೌರಶಕ್ತಿಯ ಮನೆ: ಮರಿಯಾ ಟೆಲ್ಕ್ಸ್
ಹಂಗೇರಿಯಾ ಮೂಲದ ಜೀವಭೌತವಿಜ್ಞಾನಿ ಮರಿಯಾ ಟೆಲ್ಕ್ಸ್‌ಮೊದಲ ಸೌರಶಕ್ತಿ ಮನೆ ಕಂಡುಹಿಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೂಪಾದ ರಚನೆಯುಳ್ಳ ಡೊವರ್ ಹೌಸ್‌ಗೆ ಶಾಖವನ್ನು ಒದಗಿಸಲು ವಾಸ್ತುಶಿಲ್ಪಿ ಎಲೀನರ್ ರೇಮಂಡ್‌ರೊಂದಿಗೆ 1947ರಲ್ಲಿ ಉಷ್ಣವಿದ್ಯುತ್ ಜನರೇಟರ್‌ಅನ್ನು ಈಕೆ ಆವಿಷ್ಕರಿಸಿದರು. ಈಕೆ ಛಳಿಗಾಲದ ದಿನಗಳಲ್ಲಿ ಶಾಖ ಉತ್ಪಾದಿಸಲು ಸಲ್ಫ್ಯೂರಿಕ್ ಆಮ್ಲದ ಸೋಡಿಯಂ ಲವಣವನ್ನು ಬಳಸುತ್ತಿದ್ದರು. ಡೊವರ್ ಹೌಸ್ ಎಂಬ ಪರಿಕಲ್ಪನೆ ಮುಂದಿನ ಹಲವು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. (ಮೊದಲ ಸಂಪೂರ್ಣ ಸೌರಮನೆ)

* ಸ್ಕಾಚ್‌ಗಾರ್ಡ್: ಪ್ಯಾಟ್ಸಿ ಶೆರ್ಮನ್
1952ರಲ್ಲಿ ರಸಾಯನಶಾಸ್ತ್ರಜ್ಞ ಪ್ಯಾಟ್ಸಿ ಶೆರ್ಮನ್ ಎಂಬಾತ ತನ್ನ ಪ್ರಯೋಗಾಲಯದಲ್ಲಿ ಸಹಾಯಕನಾಗಿದ್ದವನ ಶೂ ಮೇಲೆ ಫ್ಲೋರೋಕೆಮಿಕಲ್ ರಬ್ಬರ್ ಬಿದ್ದು, ಗಟ್ಟಿಯಾಯಿತು. ಇದರಿಂದ ಗೊಂದಲಕ್ಕೊಳಗಾದ ಶೆರ್ಮನ್ ಶೂನ ಬಣ್ಣ ಹಾಳಾಗದಂತೆ, ಅದರ ಕಲೆಯನ್ನು ನೀರು, ಎಣ್ಣೆ ಮತ್ತಿತರ ದ್ರವಗಳ ಮೂಲಕ ಹೋಗಲಾಡಿಸಿದರು. ಇದನ್ನೇ ಆನಂತರ ಸ್ಕಾಚ್‌ಗಾರ್ಡ್ ಎಂದು ಕರೆಯಲಾಯಿತು.

* ಅದೃಶ್ಯ ಗಾಜು : ಕ್ಯಾಥರಿನ್ ಬ್ಲಾಡ್‌ಗೆಟ್
ಮೊದಲ ಸಾಮಾನ್ಯ ವಿದ್ಯುತ್ ಉಪಕರಣಗಳ ವಿಜ್ಞಾನಿ ಕ್ಯಾಥರಿನ್ ಬ್ಲಾಡ್‌ಗೆಟ್ ತೆಳುವಾದ ಮೋನೊಮಾಲಿಕ್ಯುಲರ್ ಲೇಪನವನ್ನು ಗಾಜು ಮತ್ತು ಲೋಹವಾಗಿಸುವ ಬಗೆಯನ್ನು 1935ರಲ್ಲಿ ಕಂಡುಹಿಡಿದರು. ತೀಕ್ಷ್ಣ ಬೆಳಕು ಮತ್ತು ವಿರೂಪ ಅಥವಾ ಅಸ್ಪಷ್ಟತೆಯನ್ನು ಈ ಗಾಜು ತೊಡೆದುಹಾಕಿತು. ಈ ತಂತ್ರಜ್ಞಾನವು ಮುಂದೆ ಕ್ಯಾಮೆರಾ, ಮೈಕ್ರೊಸ್ಕೋಪ್, ಕನ್ನಡಕಗಳು ಮತ್ತಿತರ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿತು.

* ಕಂಪ್ಯೂಟರ್: ಗ್ರೇಸ್ ಹಾಪರ್
1944ರಲ್ಲಿ ಗ್ರೇಸ್ ಹಾಪರ್ ಮತ್ತು ಹೊವಾರ್ಡ್ ಏಕೆನ್ ಜತೆಗೂಡಿ ಐದು ಟನ್, ಕೊಠಡಿ ಗಾತ್ರದ ಹಾರ್ವರ್ಡ್‌ನ ಮಾರ್ಕ 1 ಕಂಪ್ಯೂಟರ್‌ಅನ್ನು ವಿನ್ಯಾಸಗೊಳಿಸಿದರು. ಬರವಣಿಗೆಯ ಭಾಷೆಯನ್ನು ಕಂಪ್ಯೂಟರ್ ಕೋಡ್ ರೂಪಕ್ಕೆ ರೂಪಾಂತರಿಸುವ ಜೋಡಕವನ್ನು(ಕಂಪೈಲರ್) ಕಂಡುಹಿಡಿದ ಹಾಪರ್, ಬಗ್ ಮತ್ತು ಡಿಬಗ್ಗಿಂಗ್ ಎಂಬ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪರಿಚಯಿಸಿದರು. 1959ರಲ್ಲಿ ಮೊದಲ ಆಧುನಿಕ ಪ್ರೋಗ್ರಾಮಿಂಗ್ ಭಾಷೆಯಾದ ಕೊಬೊಲ್‌ಅನ್ನು ಅಭಿವೃದ್ಧಿಪಡಿಸಿದ ತಂಡದಲ್ಲೊಬ್ಬರಾಗಿಯೂ ಹಾಪರ್ ಕಾರ್ಯನಿರ್ವಹಿಸಿದ್ದರು.

🌗🌗         🌗🌗
www.gkmani2u.blogspot.com

ROSHAN jagalur