Tuesday 30 June 2015

ಶಾಂತಿ ಸೂಚ್ಯಕದಲ್ಲಿ ಭಾರತ 143ನೇ ಸ್ಥಾನದಲ್ಲಿದೆ

gkmani2u ROSHAN

ಭಾರತಕ್ಕೆ 143ನೇ ಸ್ಥಾನ
🌗🌗PRAJAVANI🌗🌗

* ಜಾಗತಿಕ ಶಾಂತಿ ಸೂಚ್ಯಂಕ
ಪಟ್ಟಿಯಲ್ಲಿ ಭಾರತಕ್ಕೆ 143ನೇ ಸ್ಥಾನ ದೊರೆತಿದೆ.

* ಅಗ್ರಸ್ಥಾನ ಪಡೆದಿರುವ ಐಸ್‌ಲೆಂಡ್‌ ‘ಜಗತ್ತಿನ ಶಾಂತಿಯುತ ರಾಷ್ಟ್ರ’
ಎಂಬ ಗೌರವ ತನ್ನದಾಗಿಸಿಕೊಂಡಿದೆ.

*ಆರ್ಥಿಕತೆ ಮತ್ತು ಶಾಂತಿಗೆ ಸಂಬಂಧಿಸಿದ ಸಂಸ್ಥೆಯೊಂದು ತನ್ನ 2015ರ ಸಾಲಿನ ಶಾಂತಿ ಸೂಚ್ಯಂಕವನ್ನು ಪ್ರಕಟಿಸಿದೆ.

*ಪಟ್ಟಿಯಲ್ಲಿ ಒಟ್ಟು 162 ರಾಷ್ಟ್ರಗಳಿಗೆ ವಿವಿಧ ಕ್ರಮಾಂಕಗಳನ್ನು ನೀಡಿದೆ.

*ಒಂದು ದೇಶದಲ್ಲಿ ಅಪರಾಧ ಪ್ರಕರಣ, ಹಿಂಸೆ, ಸಂಘರ್ಷ ಮತ್ತು ಸೈನಿಕ ಕಾರ್ಯಾಚರಣೆ ಎಷ್ಟರಮಟ್ಟಿಗೆ ನಡೆಯುತ್ತದೆ ಎಂಬುದನ್ನು ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.

*ಉತ್ತರ ಅಟ್ಲಾಂಟಿಕ್‌ ಸಾಗರದಲ್ಲಿರುವ ಪುಟ್ಟ ರಾಷ್ಟ್ರ ಐಸ್‌ಲೆಂಡ್‌ನಲ್ಲಿ ಹೋದ ಒಂದು ವರ್ಷದ ಅವಧಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಿಂಸಾಕೃತ್ಯ ನಡೆದಿದೆ. ಆದ್ದರಿಂದ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ.

*ಭಾರತವು ಭೂತಾನ್‌, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಗಿಂತ  ಕೆಳಗಿನ ಸ್ಥಾನದಲ್ಲಿದೆ.

*‘ಆಂತರಿಕ ಸಂಘರ್ಷದಿಂದಾಗಿ ಹಲವರು ಬಲಿಯಾಗಿದ್ದಾರೆ. ನಕ್ಸಲರ ಸಮಸ್ಯೆ ಕೂಡಾ ಇದೆ. ಇದರಿಂದ ಭಾರತ ಕೆಳಗಿನ ಸ್ಥಾನದಲ್ಲಿ ಕಾಣಿಸಿಕೊಂಡಿದೆ’ ಎಂದು ಸಂಸ್ಥೆಯ ವರದಿ ತಿಳಿಸಿದೆ.

*ಪಟ್ಟಿಯಲ್ಲಿ ಅಗ್ರ ಹತ್ತರಲ್ಲಿ ಯೂರೋಪ್‌ನ 6 ರಾಷ್ಟ್ರಗಳು ಸ್ಥಾನ ಪಡೆದಿವೆ.

*ಡೆನ್ಮಾರ್ಕ್‌ ಮತ್ತು ಆಸ್ಟ್ರಿಯಾ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ.

*‘ಯೂರೋಪ್‌ ಖಂಡ ವಿಶ್ವದ ಅತ್ಯಂತ ಶಾಂತಿಯುತ ವಲಯ ಎಂಬ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ’ ಎಂದು ವರದಿ ಹೇಳಿದೆ.

*ಪಾಕಿಸ್ತಾನಕ್ಕೆ 154ನೇ ಸ್ಥಾನ ದೊರೆತಿದೆ. 
ಭೂತಾನ್‌ (18), ನೇಪಾಳ (62), ಬಾಂಗ್ಲಾದೇಶ (84) ಮತ್ತು ಶ್ರೀಲಂಕಾ (114) ದೇಶಗಳು ಭಾರತಕ್ಕಿಂತ ಮುಂದಿವೆ.

*ಅಮೆರಿಕಕ್ಕೆ 94ನೇ ಕ್ರಮಾಂಕ ನೀಡಲಾಗಿದೆ.

* ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ದೇಶ ಅಫ್ಘಾನಿಸ್ತಾನ (160).
ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ದಾಳಿಯಿಂದ ನಲುಗಿರುವ ಸಿರಿಯಾ, ಇರಾಕ್‌ ಕೊನೆಯ ಸ್ಥಾನಗಳಲ್ಲಿವೆ.

No comments:

Post a Comment

Comment