Saturday 2 April 2016

ಪೂರ್ಣ ಚಂದ್ರ ತೇಜಸ್ವಿ

👁👁👁👁👁👁👁👁👁
ಕಿರುಗೂರಿನ ಗಯ್ಯಾಳಿಗಳು ಕಥಾ ಸಂಕಲನದ ಕರ್ತೃ ಪೂರ್ಣ ಚಂದ್ರ ತೇಜಸ್ವಿ.. ಇದೀಗ ಈ ‍ಕ‍ಥಾಸಂಕಲನ ಚಲನಚಿತ್ರವಾಗಿದೆ.

ಹಾಗಾಗಿ ಪೂರ್ಣ ಚಂದ್ರ ತೇಜಸ್ವಿ ಅವರು ಕಿರು ಮಾಹಿತಿ ನಿಮಗಾಗಿ:

(ಜಿಕೆಮಣಿ ರೋಷನ್ ಜಗಳೂರು)

👁ಜನನ ಸೆಪ್ಟೆಂಬರ್ 8 1938
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
👁ಮರಣ ಏಪ್ರಿಲ್ 5 2007
(ತಮ್ಮ ಮನೆ ನಿರುತ್ತರದಲ್ಲಿ)
ಮೂಡಿಗೆರೆ
ಕಾವ್ಯನಾಮ ಪೂಚಂತೇ

👁ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗು ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು. ಇವರು 1938 ಸೆಪ್ಟೆಂಬರ್ 8 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಇವರ ಮೊದಲ ಕೃತಿ ಲಿಂಗ ಬಂದ. ಈ ಕೃತಿಗಾಗಿ ಅವರು ರಾಜೋತ್ಸವ ಪ್ರಶಸ್ತಿ ಪಡೆದರು.
ಸ್ನಾತಕೊತ್ತರ ಪದವಿಯ ನಂತರ ಒರಗೆಯ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸಾಹಿತ್ಯ ಕೃತಿಗಳು

👁ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.

👁ಕಾದಂಬರಿಗಳು
ಕರ್ವಾಲೋ (೧೯೮೦)
ಚಿದಂಬರ ರಹಸ್ಯ (೧೯೮೫)
ಜುಗಾರಿ ಕ್ರಾಸ್ (೧೯೯೪)
ಮಾಯಾಲೋಕ (೨೦೦೫)
ಕಾಡು ಮತ್ತು ಕ್ರೌರ್ಯ (೨೦೧೩

👁ಕಥಾಸಂಕಲನ
ಹುಲಿಯೂರಿನ ಸರಹದ್ದು (೧೯೬೨)
ಅಬಚೂರಿನ ಪೋಸ್ಟಾಫೀಸು (೧೯೭೩)
ಕಿರಿಗೂರಿನ ಗಯ್ಯಾಳಿಗಳು (೧೯೯೧)
ಪಾಕಕ್ರಾಂತಿ ಮತ್ತು ಇತರ ಕತೆಗಳು

👁ನಾಟಕ
ಯಮಳ ಪ್ರಶ್ನೆ (೧೯೬೪)

👁ಆತ್ಮ ಕಥನ
ಅಣ್ಣನ ನೆನಪು (೧೯೯೬) ಕುವೆಂಪು ಅವರ ಕುರಿತು

👁ಪ್ರವಾಸ ಕಥನ
ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್ (೧೯೯೦)
ಪ್ರಶಸ್ತಿಗಳು

👁ಇವರಿಗೆ ಸಂದ ಗೌರವಗಳು
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೭ ರಲ್ಲಿ
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೭ ರಲ್ಲಿ
ಪಂಪ ಪ್ರಶಸ್ತಿ 2001 ರಲ್ಲಿ
ರಾಜ್ಯೋತ್ಸವ ಪ್ರಶಸ್ತಿ
  ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸಹ ಅದೇ ವರ್ಷ ತೇಜಸ್ವಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ.

👁ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು",
"ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ.

    "ಕುಬಿ ಮತ್ತು ಇಯಾಲ" ಚಿತ್ರವು ರಾಜ್ಯ ಪ್ರಶಸ್ತಿ ಗಳಿಸಿತು.
    "ಚಿದಂಬರ ರಹಸ್ಯ" ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ,
1987ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಾಪ್ತವಾಯಿತು.

ಕೃಪೆ:,ವಿಕಿಪೀಡಿಯ

No comments:

Post a Comment

Comment