Saturday 9 July 2016

ವೃತ್ತಿಯೇ ಪ್ರವೃತ್ತಿಯಾಗಬೇಕು


(ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ)

                                       ನಾನು ಒಂದು ಚಪ್ಪಲಿ ಅಂಗಡಿಗೆ ಹೋದಾಗ ಅಂಗಡಿಯಲ್ಲಿನ ವ್ಯಕ್ತಿ
ನನ್ನನ್ನು ಅತ್ಯಂತ ಗೌರವವಾಗಿ ಒಳಗೆ ಆಹ್ವಾನಿಸಿದ.

ಕುಳಿತು ಕೊಳ್ಳಲು ಹೇಳಿ
ವಿವಿಧ ರೀತಿಯ ಚಪ್ಪಲಿಗಳನ್ನು ತೋರಿಸತೊಡಗಿದ.

ಪ್ರತಿಯೊಂದು ಚಪ್ಪಲಿಯನ್ನು ಆತನೇ ಸ್ವತಃ ನನ್ನ ಕಾಲುಗಳಿಗೆ ತೊಡಿಸುತ್ತಿದ್ದ.

ನನಗೆ ಯಾಕೋ ಹೀಗೆ ಮಾಡುವುದು ಸರಿ ಅನಿಸಲಿಲ್ಲ.

" ನೀವು ಹಾಗೆ ನನ್ನ ಕಾಲುಗಳನ್ನು ಮುಟ್ಟಿ ಚಪ್ಪಲಿ ತೊಡಿಸುವುದು ನನಗೆ ತುಂಬಾ ಮುಜುಗರವಾಗುತ್ತಿದೆ. ನೀವು ಕೊಡಿ ನಾನೇ ಹಾಕಿಕೊಳ್ಳುತ್ತೇನೆ"
ಎಂದು ಹೇಳಿದೆ.

ಅದಕ್ಕೆ ಆತ
"ಪರವಾಗಿಲ್ಲ ಬಿಡಿ ಸರ್!
ನಿಮಗೆ ಇಷ್ಟವಾದ ಚಪ್ಪಲಿಯನ್ನು ಹಾಕಿಕೊಂಡು ನೋಡಿ.
ನಿಮಗೆ ನಮ್ಮ ಅಂಗಡಿಯ ಚಪ್ಪಲಿ ಇಷ್ಟವಾದರೆ ಸಾಕು" ಎಂದು ಹೇಳಿದ.

" ನೀವೂ ಮನುಷ್ಯರೆ.....
ನಾವು ಮನುಷ್ಯರೇ.
ನೀವು ಹೀಗೆ ನಮ್ಮ ಕಾಲು ಹಿಡಿದು ಚಪ್ಪಲಿ ತೊಡಿಸುತ್ತಿರುವುದು ನನ್ನ ಮನಸ್ಸಿಗೆ ನೋವಾಗುತ್ತಿದೆ."
ಎಂದು ಹೇಳಿದೆ.

ಅದಕ್ಕೆ ಅವರು ಹೇಳಿದ ಮಾತು ಕೇಳಿ ನಿಜಕ್ಕೂ ತುಂಬಾ ಆಶ್ಚರ್ಯವಾಯಿತು.
"ಈ ಅಂಗಡಿಯಲ್ಲಿ ಅದು ನನ್ನ ಕರ್ತವ್ಯ..
ಅಂಗಡಿಯ ಹೊರಗೆ ನೀವು ಕೋಟಿ ರೂಪಾಯಿ ಕೊಟ್ಟರೂ ನಿಮ್ಮ ಕಾಲು ಮುಟ್ಟುವುದಿಲ್ಲ.

ಅಂಗಡಿಯಲ್ಲಿ ನೀವು ಕೋಟಿ ರೂ. ಕೊಟ್ಟರೂ ನಿಮ್ಮ ಕಾಲು ಮುಟ್ಟದೇ ಇರಲಾರೆ." ಎಂದು ಹೇಳಿದ ಆ ವ್ಯಕ್ತಿ.

ಇದರಿಂದ ಆತನಿಗೆ ತಾನು ಮಾಡುವ ಕೆಲಸದ ಬಗ್ಗೆ ಇರುವ ಭಕ್ತಿ, ಗೌರವ ಗೊತ್ತಾಗುತ್ತದೆ.

ಪ್ರತಿಯೊಬ್ಬರೂ ತಾವು ಮಾಡುವ ಕೆಲಸ ಚಿಕ್ಕದಾದರೂ, ದೊಡ್ಡದಾದರೂ ಇಂತಹ ಭಾವನೆಯನ್ನು ಹೊಂದಿದ್ದರೆ ಅವರು ಖಂಡಿತಾ ತಾವು ಅಂದುಕೊಂಡಿರುವುದು ಸಾಧಿಸಬಲ್ಲರು.

ಸ್ನೇಹಿತರೆ,
ಇದುವರೆಗೆ ಕೆಲಸ ಯಾರ ಗೌರವವನ್ನೂ ತಗ್ಗಿಸಿಲ್ಲ.!!
ವಿಪಯಾ೯ಸವೆಂದರೆ,
ಹಲವರು  ಕೆಲಸದ ಗೌರವವನ್ನೇ ತಗ್ಗಿಸಿದ್ದಾರೆ.

ಸೆರೆನಾ ವಿಲಿಯಮ್ಸ್


👉🏻ವಿಶ್ವ ಶ್ರೇಷ್ಠ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಏಳನೇ ಬಾರಿಗೆ ವಿಂಬಲ್ಡನ್‌ ಟ್ರೋಫಿಗೆ ಮುತ್ತಿಕ್ಕಿದ್ದಾರೆ.

👉🏻ವಿಂಬಲ್ಡನ್‌ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅವರನ್ನು 7–5, 6–3 ಸೆಟ್‌ಗಳಿಂದ ಮಣಿಸುವ ಮೂಲಕ ಗೆಲುವಿನ ನಗೆ ಬೀರಿದರು.

👉🏻ಸೆರೆನಾ ಅವರು ಈ ಗೆಲುವಿನ ಮೂಲಕ
(22ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ) ಜರ್ಮನಿಯ ಸ್ಟೆಫಿ ಗ್ರಾಫ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

Thursday 12 May 2016

ಸಾಮಾನ್ಯ ಜ್ಙಾನ

        *ಜಿಕೆಮಣಿ ಸಾಮಾನ್ಯ ಜ್ಙಾನ*
  
          (-ರೋಷನ್ ಜಗಳೂರು-)

✍2011ರ ಜನಗಣತಿ ಪ್ರಕಾರ ಭಾರತದ ಸರಾಸರಿ ಲಿಂಗಾನುಪಾತವು ಪ್ರತಿ ಸಾವಿರ ಪುರುಷರಿಗೆ 940 ಮಹಿಳೆಯರು.

✍ಕೇರಳ ರಾಜ್ಯವು ಪ್ರತಿ ಸಾವಿರ ಪುರುಷರಿಗೆ 1084 ಸ್ತ್ರೀಯರನ್ನು ಹೊಂದಿದ್ದು ಅತಿ ಹೆಚ್ಚು ಲಿಂಗಾನುಪಾತವನ್ನು ಹೊಂದಿದೆ.

✍ಹರಿಯಾಣ ರಾಜ್ಯವು ಪ್ರತಿ ಸಾವಿರ ಪುರುಷರಿಗೆ 877 ಸ್ತ್ರೀಯರನ್ನು ಹೊಂದಿದ್ದು. ಕಡಿಮೆ ಲಿಂಗಾನುಪಾತವನ್ನು ಹೊಂದಿರುವ ರಾಜ್ಯವಾಗಿದೆ.

✍2011ರ ಜನಗಣತಿ ಪ್ರಕಾರ ಭಾರತದ ಸರಾಸರಿ ಜನಸಾಂದ್ರತೆಯು ಪ್ರತಿ ಚದರ ಕಿ.ಮೀ 382 ಜನರು

✍ಬಿಹಾರವು ಪ್ರತಿ ಚ.ಕಿ.ಮೀ 1102 ಜನರನ್ನು ಹೊಂದಿದ್ದು ಅಧಿಕ ಜನಸಾಂದ್ರತೆಯನ್ನು ಹೊಂದಿರುವ ರಾಜ್ಯವಾಗಿದೆ. ಅರುಣಾಚಲ ಪ್ರದೇಶವು ಪ್ರತಿ ಚ.ಕಿ.ಮೀಗೆ 17 ಜನರನ್ನು ಹೊಂದಿದ್ದು ಅತೀ ಕಡಿಮೆ ಜನಸಾಂದ್ರತೆಯನ್ನು ಹೊಂದಿರುವ ರಾಜ್ಯವಾಗಿದೆ.

✍ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ ಅತಿ ಹೆಚ್ಚು (11297 ) ಜನಸಾಂದ್ರತೆಯನ್ನು ಹೊಂದಿದ್ದರೆ. ಅಂಡಮಾನ್ ನಿಕೋಬಾರ್‍ ದ್ವೀಪಗಳು ಕಡಿಮೆ (463) ಜನಸಾಂದ್ರತೆಯನ್ನು ಹೊಂದಿವೆ.

✍ಭಾರತವು ಪ್ರಪಂಚದಲ್ಲಿಯೇ ಮೊದಲ ಬಾರಿಗೆ1952ರಲ್ಕಿ ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದ ದೇಶವಾಗಿದೆ.
( ಇದರ ಮುಖ್ಯ ಉದ್ದೇಶ ವಿವಿಧ ವಿಧಾನಗಳಿಂದ ಜನನ ದರವನ್ನು ನಿಯಂತ್ರಿಸುವುದಾಗಿದೆ)

✍2011ರ ಜಾಗತಿಕ ಹಸಿವು ಸೂಚ್ಯಂಕ ವರದಿಯ ಪ್ರಕಾರ ಹಸಿವಿನಿಂದ ಬಳಲುತ್ತಿರುವ ಪ್ರಪಂಚದ ಪ್ರಮುಖ ರಾಷ್ಟ್ರಗಳಲ್ಲಿ ಭಾರತವು 15 ನೇ ಸ್ಥಾನದಲ್ಲಿದೆ.

☄☄☄☄☄☄☄☄
✍ಕೊಹಿನೂರ್‍ ವಜ್ರದ ಮೂಲ ಈಗಿನ ಆಂದ್ರಪ್ರದೇಶ. ಅದು ಸುಮಾರು 5 ಸಾವಿರ ವರ್ಷಗಳ ಹಿಂದಿಮದ್ದೆಂಬ ನಂಬಿಕೆಯಿದೆ. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಜಾಂಬವಂತನಿಂದ ಈ ವಜ್ರವನ್ನು ಪಡೆದ ಎಂದು ಅನೇಕ ಕಥೆಗಳಲ್ಲಿ ಉಲ್ಲೇಖವಿದೆ.

✍ಇತಿಹಾಸಕಾರರ ಪ್ರಕಾರ ಕೊಹಿನೂರ್‍ ವಜ್ರ ಸುಮಾರು 3000 ವರ್ಷಗಳ ಹಿಂದಿನದ್ದು. ಅಂದರೆ ಮಹಾಭಾರತದ ಕಾಲಘಟ್ಟದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

✍ಈ ವಜ್ರ ಪ್ರಸಿದ್ದಿಗೆ ಬಂದದ್ದು 14ನೇ ಶತಮಾನದಲ್ಲಿ,ಮೂಲದಲ್ಲಿ ಕೊಹಿನೂರ್‍ ವಜ್ರ ಕಾಕತೀಯ ಅರಸರ ಸೊತ್ತಾಗಿತ್ತು. 1320ರಲ್ಲಿ ಕಾಕತೀಯ ಅರಸರನ್ನು ಸೋಲಿಸಿದ ದೆಹಲಿ ಸುಲ್ತಾನರು ವಜ್ರವನ್ನು ದೆಹಲಿಗೆ ಕೊಂಡ್ಯೋಯ್ದರು. ಕಾಲ ಕ್ರಮೇಣ ಅದು ಮೊಘಲ್ ಚಕ್ರವರ್ತಿ ಬಾಬರ್‍ ನ ಕೈ ಸೇರಿತು ಎಂದು ಬಾಬರ್‍ ನಾಮಾ ದಲ್ಲಿ ಉಲ್ಲೇಖವಿದೆ.

✍ನಂತರದಲ್ಲಿ ವಜ್ರ ಮೊಘಲ್ ದೊರೆ ಔರಂಗಜೇಬನ ಸುಪರ್ದಿಗೆ ಸೇರುತ್ತದೆ. ಆತ ನಂತರ ಕೊಹಿನೂ‍ರನ್ನು ಲಾಹೋರ್ ದೊರೆಯಾದ ರಣಜಿತ್ ಸಿಂಗ್ ನಿಗೆ ಕಾಣಿಕೆಯಾಗಿ ನೀಡುತ್ತಾನೆ.

✍ಕೊಹಿನರ್‍ ಪರಂಪರೆಯ ಗೌರವಾರ್ಥವಾಗಿ ತನ್ನ ಕಾಲಾನಂತರದಲ್ಲಿ ವಜ್ರವನ್ನು ಪುರಿ ಜಗನ್ನಾಥ ದೇವಾಲಯಕ್ಕೆ ಕಾಣಿಕೆಯಾಗಿ ನೀಡುವುದಾಗಿ ಉಯಿಲು ಬರೆದಿಡುತ್ತಾನೆ ಆದರೆ 1839ರಲ್ಲಿ ನಡೆದ ಎರಡನೇ ಆಂಗ್ಲೋ ಸಿಖ್ ಯುದ್ದದ ನಂತರ ಲಾರ್ಡ್ ಡಾಲ್ ಹೌಸಿಯು ಮೋಸದ ಒಪ್ಪಂದಕ್ಕೆ ಬಲವಂತವಾಗಿ ಸಹಿ ಪಡೆದುಕೊಳ್ಳುತ್ತಾನೆ. ಈ ಒಪ್ಪಂದದ ಪ್ರಕಾರ ಕೊಹಿನೂರ್‍ ವಜ್ರವನ್ನು ಬ್ರಿಟನ್ ಅರಸೊತ್ತಿಗೆಗೆ ಕಾಣಿಕೆಯಾಗಿ ನೀಡುವುದಾಗಿ ಲಾಹೋರ್‍ ಒಪ್ಪಂದದ 3ನೇಯ ವಿಧಿಯಲ್ಲಿ ಮೋಸದಿಂದ ಸೇರಿಸಲಾಗುತ್ತದೆ ಈಗೆ ವಜ್ರ ಬ್ರಿಟೀಷರ ಪಾಲಾಯಿತು.
                             (ಕೃಪೆ:ಕೊಹಿನೂರ್ ವಜ್ರ ವಿಜಯವಾಣಿ ಸುದ್ದಿ)
☄☄☄☄☄☄☄☄
ಪ್ರಚಲಿತ ಘಟನೆ
✍10 ರಾಜ್ಯಗಳಲ್ಲಿ ತಲೆದೋರಿರುವ ಬರ ಪರಿಸ್ಥಿತಿಯಿಂದಾಗಿ ದೇಶದ ಆರ್ಥಿಕತೆಗೆ ಕನಿಷ್ಟವೆಂದರೂ 6.50 ಲಕ್ಷ ಕೋಟಿಗಳಷ್ಟು ನಷ್ಟವಾಗಲಿದೆ ಎಂದು ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯೋದಮದ ಮಹಾಸಂಘದ (ಅಸೋಚಾಂ) ವರದಿ ಅಂದಾಜಿಸಿದೆ.

✍ಪಿಲಿಪ್ಪೀನ್ಸ್ ದೇಶದ ನೂತನ ಅಧ್ಯಕ್ಷರಾಗಿ ರೋಡ್ರಿಗೋ ಡ್ಯುಟರ್ಟ್ ಆಯ್ಕೆಯಾಗಿದ್ದಾರೆ.

✍ಉಕ್ರೇನ್ ನಿರ್ಮಿತ ಆಂಟೋನೊವ್ ಎಎನ್-225 ಮ್ರಿಯಾ ಎಂಬ ಹೆಸರಿನ ವಿಮಾನವು ಜಗತ್ತಿನಲ್ಲೇ ಅತಿದೊಡ್ಡ ವಿಮಾನ ಎಂಬ ಕೀರ್ತಿಗೆ ಪಾತ್ರವಾಗಿದೆ.

☄☄☄☄☄☄☄☄
✍ಮೌರ್ಯರ ಕಾಲದ ಸಂಘಗಳಲ್ಲಿ ದಿನ ನಿತ್ಯದ ಕೂಲಿಗಾಗಿ ದುಡಿಯುತ್ತಿದ್ದ ಸ್ವತಂತ್ರ ಕಾರ್ಮಿಕರನ್ನು ಭೃತಕರು, ಕರಮಕಾರರು ಎಂದು ಕರೆಯುತ್ತಿದ್ದರು.

✍ಅಂಗ ವ್ಯವಸ್ಥೆಯ ಬಗೆಗಿನ ಅಧ್ಯಯನವನ್ನು ಹಿಸ್ಮಾಲಜಿ ಎನ್ನುವರು.

✍ಇನ್ ಕ್ರೆಡಿಬಲ್ ಇಂಡಿಯಾ ಇದು ಭಾರತೀಯ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯವಾಗಿದೆ.

✍ದ ಲೈವ್ಸ್ ಆಫ್ ಅದರ‍್ಸ್ ಕೃತಿಯ ಲೇಖಕ ನೀಲ್ ಮುಖರ್ಜಿ.

✍ಮೆಟ್ಟಿಲ ಬಾವಿ 'ರಾಣಿ ಕಿ ವಾವ್ ನ್ನು ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೋ ಆಯ್ಕೆ ಮಾಡಿದೆ ಈ ತಾಣ ಗುಜರಾತ್ ನಲ್ಲಿದೆ.

✍ದೇವದಾಸಿ ಪದ್ದತಿಯ ಬಗ್ಗೆ ವಿವರ ನೀಡುವ ಮೊದಲ ಶಾಸನ ರಾಮಘರ ಶಾಸನ

Saturday 2 April 2016

ಪೂರ್ಣ ಚಂದ್ರ ತೇಜಸ್ವಿ

👁👁👁👁👁👁👁👁👁
ಕಿರುಗೂರಿನ ಗಯ್ಯಾಳಿಗಳು ಕಥಾ ಸಂಕಲನದ ಕರ್ತೃ ಪೂರ್ಣ ಚಂದ್ರ ತೇಜಸ್ವಿ.. ಇದೀಗ ಈ ‍ಕ‍ಥಾಸಂಕಲನ ಚಲನಚಿತ್ರವಾಗಿದೆ.

ಹಾಗಾಗಿ ಪೂರ್ಣ ಚಂದ್ರ ತೇಜಸ್ವಿ ಅವರು ಕಿರು ಮಾಹಿತಿ ನಿಮಗಾಗಿ:

(ಜಿಕೆಮಣಿ ರೋಷನ್ ಜಗಳೂರು)

👁ಜನನ ಸೆಪ್ಟೆಂಬರ್ 8 1938
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
👁ಮರಣ ಏಪ್ರಿಲ್ 5 2007
(ತಮ್ಮ ಮನೆ ನಿರುತ್ತರದಲ್ಲಿ)
ಮೂಡಿಗೆರೆ
ಕಾವ್ಯನಾಮ ಪೂಚಂತೇ

👁ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗು ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು. ಇವರು 1938 ಸೆಪ್ಟೆಂಬರ್ 8 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಇವರ ಮೊದಲ ಕೃತಿ ಲಿಂಗ ಬಂದ. ಈ ಕೃತಿಗಾಗಿ ಅವರು ರಾಜೋತ್ಸವ ಪ್ರಶಸ್ತಿ ಪಡೆದರು.
ಸ್ನಾತಕೊತ್ತರ ಪದವಿಯ ನಂತರ ಒರಗೆಯ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸಾಹಿತ್ಯ ಕೃತಿಗಳು

👁ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.

👁ಕಾದಂಬರಿಗಳು
ಕರ್ವಾಲೋ (೧೯೮೦)
ಚಿದಂಬರ ರಹಸ್ಯ (೧೯೮೫)
ಜುಗಾರಿ ಕ್ರಾಸ್ (೧೯೯೪)
ಮಾಯಾಲೋಕ (೨೦೦೫)
ಕಾಡು ಮತ್ತು ಕ್ರೌರ್ಯ (೨೦೧೩

👁ಕಥಾಸಂಕಲನ
ಹುಲಿಯೂರಿನ ಸರಹದ್ದು (೧೯೬೨)
ಅಬಚೂರಿನ ಪೋಸ್ಟಾಫೀಸು (೧೯೭೩)
ಕಿರಿಗೂರಿನ ಗಯ್ಯಾಳಿಗಳು (೧೯೯೧)
ಪಾಕಕ್ರಾಂತಿ ಮತ್ತು ಇತರ ಕತೆಗಳು

👁ನಾಟಕ
ಯಮಳ ಪ್ರಶ್ನೆ (೧೯೬೪)

👁ಆತ್ಮ ಕಥನ
ಅಣ್ಣನ ನೆನಪು (೧೯೯೬) ಕುವೆಂಪು ಅವರ ಕುರಿತು

👁ಪ್ರವಾಸ ಕಥನ
ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್ (೧೯೯೦)
ಪ್ರಶಸ್ತಿಗಳು

👁ಇವರಿಗೆ ಸಂದ ಗೌರವಗಳು
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೭ ರಲ್ಲಿ
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೭ ರಲ್ಲಿ
ಪಂಪ ಪ್ರಶಸ್ತಿ 2001 ರಲ್ಲಿ
ರಾಜ್ಯೋತ್ಸವ ಪ್ರಶಸ್ತಿ
  ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸಹ ಅದೇ ವರ್ಷ ತೇಜಸ್ವಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ.

👁ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು",
"ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ.

    "ಕುಬಿ ಮತ್ತು ಇಯಾಲ" ಚಿತ್ರವು ರಾಜ್ಯ ಪ್ರಶಸ್ತಿ ಗಳಿಸಿತು.
    "ಚಿದಂಬರ ರಹಸ್ಯ" ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ,
1987ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಾಪ್ತವಾಯಿತು.

ಕೃಪೆ:,ವಿಕಿಪೀಡಿಯ

ಪದ್ಮ ಪ್ರಶಸ್ತಿ


2016ನೇ ಸಾಲಿನ 'ಪದ್ಮ ಪ್ರಶಸ್ತಿ' ಪಡೆದವರ ಪಟ್ಟಿ
💐💐💐💐💐💐💐💐💐

ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಶ್ರೀಶ್ರೀ ರವಿಶಂಕರ್ ಗುರೂಜಿ, ಅನುಪಮ್ ಖೇರ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸೇರಿದಂತೆ ಹಲವಾರು ಸಾಧಕರು ನವದೆಹಲಿಯಲ್ಲಿ ನಡೆದ ಪದ್ಮ ಪ್ರಶಸ್ತಿಸಮಾರಂಭದಲ್ಲಿ ಪಾಲ್ಗೊಂಡು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ನಾಡಿನ ಪ್ರತಿ‍ಷ್ಠಿತ ಪ್ರಶಸ್ತಿ ಪದ್ಮ ವಿಭೂಷಣಕ್ಕೆ 10, ಪದ್ಮ ಭೂಷಣಕ್ಕೆ 19 ಹಾಗೂ ಪದ್ಮಶ್ರೀ ಪ್ರಶಸ್ತಿಗೆ 83 ಮಂದಿ ಭಾಜನರಾಗಿದ್ದಾರೆ. ಇದರಲ್ಲಿ 19 ಜನ ಮಹಿಳಾ ಸಾಧಕಿಯರಿರುವುದು ಹೆಮ್ಮೆಯ ಸಂಗತಿಯಾಗಿದೆ.

ಪದ್ಮ ವಿಭೂಷಣ ಪ್ರಶಸ್ತಿಯನ್ನು ಯಾಮಿನಿ ಕೃಷ್ಣಮೂರ್ತಿ ನೃತ್ಯದಲ್ಲಿ, ನಟ ರಜನಿಕಾಂತ್ ಸಿನಿಮಾ ವಲಯದಲ್ಲಿ, ರಾಮೋಜಿ ರಾವ್ ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಪಡೆದಿದ್ದಾರೆ. ಪದ್ಮ ವಿಭೂಷಣಕ್ಕೆ ಒಟ್ಟು 10 ಮಂದಿ ಭಾಜನರಾಗಿದ್ದಾರೆ. ಅವಿನಾಶ್ ದೀಕ್ಷಿತ್ ಸಾಹಿತ್ಯ ಹಾಗೂ ಶಿಕ್ಷಣ-ಯುಎಸ್ಎ, ಧೀರೂಭಾಯಿ ಅಂಬಾನಿ ಮರಣೋತ್ತರ ಪ್ರಶಸ್ತಿ ಪಡೆದಿದ್ದಾರೆ.

ಪದ್ಮ ಭೂಷಣ ಪ್ರಶಸ್ತಿಯು ಅನುಪಮ್ ಖೇರ್, ಸಾನಿಯಾ ಮಿರ್ಜಾ, ವಿನೋದ್ ರಾಯ್, ಸೈನಾ ನೆಹ್ವಾಲ್ ಸೇರಿದಂತೆ ಒಟ್ಟು 19 ಮಂದಿಗೆ ಸಂದಿದೆ. ಪದ್ಮಶ್ರೀ ಪ್ರಶಸ್ತಿಯನ್ನು ಪ್ರಿಯಾಂಕಾ ಛೋಪ್ರಾ, ತುಳಸಿದಾಸ್ ಬೋರ್ಕರ್, ಭಿಕುದಾನ್ ಗಾಧ್ವಿ, ಅಜಯ್ ಪಾಲ್ ಸಿಂಗ್ ಬಂಗಾ ಹೀಗೆ ಒಟ್ಟು 83 ಮಂದಿ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು.

👁 ಜಿಕೆಮಣಿ ರೋಷನ್👁👁

ಮಾಹಿತಿ ಸಂಗ್ರಹ

1) ಯಾವ ದೇಶವು ಕಾಗದವನ್ನು ಸಂಶೋಧಿಸಿತು? 

ಉತ್ತರ:- ಚೀನಾ

2) ಕೋಶಕೇಂದ್ರದಲ್ಲಿ ಕಂಡುಬರುವ ಕನಗಳು ಯಾವವು?

ಉತ್ತರ:- ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು

3) ಪ್ರಪಂಚದಲ್ಲಿಯೇ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?

ಉತ್ತರ:- ಬೈಕಲ್ ಸರೋವರ
 
4) ಯಾವ ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರಾಷ್ಟ್ರೀಕರಣಗೊಂಡಿತು?

ಉತ್ತರ:- 1949 ರಲ್ಲಿ

 
5)  ಸೆಶೆಲ್ಸ್ ದ್ವೀಪ ಕಂಡುಬರುವುದು ಎಲ್ಲಿ? 

ಉತ್ತರ:- ಮಾಹೆಯಲ್ಲಿ

6) ತಾಯ್ಲೆಂಡಿನ ಕರೆನ್ಸಿ ಯಾವುದು?  Thai Baht

ಉತ್ತರ:- ತಾಯ್ ಬಾಟ್ (Thai Baht)

 
7) ಸುಭಾಷ್ ಚಂದ್ರ ಬೋಸರ ತಂದೆಯ ಹೆಸರೇನು? What is father name of Subash Chandra bose?

ಉತ್ತರ:- ಜಾನಕಿನಾತ ಬೋಸ್

 

8) ಮೊಘಲರ ಕೊನೆಯ ಚಕ್ರವರ್ತಿ ಯಾರು?

ಉತ್ತರ:- ಔರಂಗಜೇಬ

 
9) ಯುನೆಸ್ಕೋದ ಪ್ರಧಾನ ಕಚೇರಿಯು ಎಲ್ಲಿ ಕಂಡುಬರುತ್ತದೆ? 

ಉತ್ತರ:- ಪ್ಯಾರಿಸ್ ನಲ್ಲಿ ಕಂಡುಬರುತ್ತದೆ

 

10) ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯಲಾಗುತ್ತದೆ? 

ಉತ್ತರ:- ಖಾನ್ ಅಬ್ದುಲ್ ಗಫರ್ ಖಾನ್

 

11) ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ್ರ ಯಾವುದು? 

ಉತ್ತರ:- ಸಿರೀಸ್ ಎಂಬ ನಕ್ಷತ್ರ

 
12) Aurum ಎಂಬ ಲ್ಯಾಟಿನ್ ಹೆಸರು ಸಂಬಂಧಿಸಿರುವುದು  _____.

ಉತ್ತರ:- ಬಂಗಾರ (Gold)

 
13) ಮಾರ್ಸ್ ಆರ್ಬಿಟರಿ ಮಿಷನ್ ಮಂಗಳಯಾನ ಉಡಾವಣೆ ಮಾಡಿದ್ದು? 

ಉತ್ತರ:- ಶ್ರೀಹರಿಕೋಟಾದಿಂದ

 

14) ಜಿಮ್ಮೀ ವೇಲ್ಸ್ ಅವರು ................ ವೆಬ್ ಸೈಟ್ ನ ಸಂಸ್ಥಾಪಕರಾಗಿದ್ದಾರೆ.

ಉತ್ತರ:- ವಿಕಿಪಿಡಿಯಾ

 
15) ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ? 

ಉತ್ತರ:- ಜೂನ್ 5

 
16) ಹಿಮಪ್ರವಾಹದಲ್ಲಿರುವ ಆಳವಾದ ಬಿರುಕನ್ನು ಏನೆಂದು ವರ್ಣಿಸುವಿರಿ?  

ಉತ್ತರ:- ಕೊರಕಲು

 
17) ಗ್ರೆನೈಟ್ ಎನ್ನುವುದು ಯಾವ ಕಲ್ಲಿಗೆ ಉದಾಹರಣೆಯಾಗಿದೆ?

ಉತ್ತರ:- ಅಗ್ನಿಶಿಲೆ

 
18) ನಮ್ಮ ದೇಶದ ರಾಷ್ತ್ರೀಯ ಹಾಡು ವಂದೆ ಮಾತರಂ ನ್ನು ಬರೆದವರು? 

ಉತ್ತರ:- ಬಂಕಿಮ್ ಚಂದ್ರ ಚಟರ್ಜಿ

 
19) ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾದದ್ದು .............. 

ಉತ್ತರ:- 8 ನೇ ಆಗಷ್ಟ್ 1942 ರಂದು 

20) ದೀನ್ ಇ ಇಲಾಹಿ ಮತದ ಸಂಸ್ಥಾಪಕರಾರು?

ಉತ್ತರ:- ರಾಜಾ ಅಕ್ಬರ್

21) ಮಾನವನ ದೇಹದಲ್ಲಿರುವ ಅತ್ಯಂತ ಚಿಕ್ಕ ಮೂಳೆ ಯಾವುದು? 

ಉತ್ತರ:- ಕಿವಿಯಲ್ಲಿ ಕಂಡುಬರುವ "ಸ್ಟೆಪ್ಪಿಸ್" ಎಂಬ ಮೂಳೆ

 

22) ಜಗತ್ತಿನ ಅತಿ ದೊಡ್ಡ ಮರುಭೂಮಿ ಯಾವುದು? 

ಉತ್ತರ:- ಸಹಾರ ಮರುಭೂಮಿ

 

23) ಮಾನವನ ದೇಹದಲ್ಲಿರುವ ಯಾವ ಅಂಗವು ಮತ್ತೆ ಪುನರ್ಜನ್ಮ ಪಡೆಯಬಹುದಾಗಿದೆ? 

ಉತ್ತರ:- ಲೀವರ್

 
24) ಕುಂಚಳ್ಳಿ ಜಲಪಾತವು ಎಲ್ಲಿ ಕಂಡುಬರುತ್ತದೆ? kunchilal water falls is situated in which state?

ಉತ್ತರ:- ಕರ್ನಾಟಕ

 

25) ಹಸಿರುಮನೆ ಪರಿಣಾಮಕ್ಕೆ ಕಾರಣವಾದ ಅನಿಲ ಯಾವುದು?

ಉತ್ತರ:- co2

Wednesday 25 November 2015

ವರ್ಗೀಸ್ ಕುರಿಯನ್

ನವೆಂಬರ್‍ 26
🐄🐃🐄ಮಿಲ್ಕ್ ಮ್ಯಾನ್ ಆಪ್ ಇಂಡಿಯಾ ಎಂದೇ ಪ್ರಸಿದ್ದಿ ಪಡೆದ
ವರ್ಗೀಸ್ ಕುರಿಯನ್ ಅವರ ಜನ್ಮದಿನ ಇಂದು🐄🐄🐃

👉🏿(gkmani2u🍃🐃🍃
🍃 ರೋಷನ್ ಜಗಳೂರು🍃)

ಜನನ::ನವೆಂಬರ್ 26 1921
-
 🐄ಅಮುಲ್ ಡೈರಿ ಸಂಸ್ಥೆಯ ಸ್ಥಾಪಕರು ಮತ್ತು ಭಾರತದಲ್ಲಿ ಆಪರೇಶನ್ ಫ್ಲಡ್ ಎಂಬ ಹೆಸರಿನ ಕ್ಷೀರಕ್ರಾಂತಿಯ ಪ್ರಮುಖ ಪಾತ್ರಧಾರಿ.

🐄ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF)ದ ಸಂಸ್ಥಾಪಕ ಅಧ್ಯಕ್ಷರಾಗಿ , ಕುರಿಯನ್ ಅವರು ಅಮುಲ್ ಡೈರಿ ಉತ್ಪನ್ನಗಳ ಬ್ರಾಂಡ್ ನ ಸೃಷ್ಟಿ ಮತ್ತು ಯಶಸ್ಸಿಗೆ ಕಾರಣರಾದವರು. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದಲ್ಲಿ ಅವರ ಸಾಧನೆ ಕಂಡು ರಾಷ್ಟ್ರೀಯ ಮಟ್ಟದಲ್ಲಿ ನ ಅಮುಲ್ ಯಶಸ್ಸನ್ನು ಪುನರಾವರ್ತಿಸಲು, 1965ರಲ್ಲಿ ಅವರನ್ನು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ(NDDB) ಯ ಸ್ಥಾಪಕ ಅಧ್ಯಕ್ಷರನ್ನಾಗಿ ನೇಮಿಸಿದರು. ಕೆಲವು ವರ್ಷಗಳ ನಂತರ, ಕುರಿಯನ್ ರ ಮುಂದಾಳುತನದಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು
👉🏿ಆಪರೇಷನ್ ಫ್ಲಡ್
(ಅಥವಾ ವೈಟ್ ರೆವಲ್ಯೂಷನ್-ಕ್ಷೀರಕ್ರಾಂತಿ ) ಎಂಬ ಜಗತ್ತಿನ ಅತಿ ದೊಡ್ಡ ಡೈರಿ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿತು. ಆಪರೇಷನ್ ಫ್ಲಡ್ ಯೋಜನೆಯು ಭಾರತವನ್ನು ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ದೇಶವನ್ನಾಗಿ ಮಾಡಿತು;
👉🏿2010-11ರಲ್ಲಿ, ಜಾಗತಿಕ ಉತ್ಪಾದನೆಯ ಸುಮಾರು ಪ್ರತಿ ನೂರಕ್ಕೆ 17 ರಷ್ಟು ಭಾಗವು ಭಾರತದ್ದಾಗಿತ್ತು .

👳🏾"ಭಾರತದ ಹಾಲು ವಿತರಕ" ಮತ್ತು "ಕ್ಷೀರ ಕ್ರಾಂತಿಯ ಪಿತಾಮಹ" ಎಂದು ಬಣ್ಣಿಸಲ್ಪಟ್ಟ ಕುರಿಯನ್ ರವರು ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ '"ಪದ್ಮ ವಿಭೂಷಣ" ಪ್ರಶಸ್ತಿ,
ವಿಶ್ವ ಆಹಾರ ಪ್ರಶಸ್ತಿ ಮತ್ತು ಮ್ಯಾಗ್ಸೇಸೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

🍃ಪ್ರಾರಂಭಿಕ ಜೀವನ🍃

ಅವರು ಹುಟ್ಟಿದ್ದು ಕೇರಳದ ಕೋಝಿಕೋಡ್ (ಅಂದರೆ ಕ್ಯಾಲಿಕಟ್) ನಲ್ಲಿ. ಭೌತಶಾಸ್ತ್ರದಲ್ಲಿ ಪದವಿಯ ನಂತರ ಬಿ.ಇ. ( ಮೆಕ್ಯಾನಿಕಲ್ ಇಂಜಿನಿಯರಿಂಗ್) ಮಾಡಿದರು. ಬಳಿಕ ಜಮ್ ಷೆಡ್ ಪುರದ ಟಾಟಾ ಸ್ಟೀಲ್ ತಾಂತ್ರಿಕ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಮೆಟಲರ್ಜಿಕಲ್ ಇಂಜಿನಿಯರಿಂಗ್ ನಲ್ಲಿ ಎಂ.ಎಸ್ಸಿ. ಮಾಡಲು ಸ್ಕಾಲರ್ಶಿಪ್ ಪಡೆದುಕೊಂಡು ಅಮೇರಿಕಕ್ಕೆ ತೆರಳಿದರು.

🍃ವೃತ್ತಿ ಜೀವನ🍃

ಅಮೆರಿಕದಿಂದ 1948ರಲ್ಲಿ ಭಾರತಕ್ಕೆ ಹಿಂದಿರುಗಿದ ವರ್ಗಿಸ್ ಕುರಿಯನ್ನರು ಸರ್ಕಾರಿ ಸೇವೆಗೆ ಸೇರಿ ಆನಂದ್ ನಗರದಲ್ಲಿದ್ದ ಹಾಲಿನ ಪೌಡರ್ ಉತ್ಪಾದಿಸುವ ಸಣ್ಣ ಘಟಕವೊಂದರಲ್ಲಿ ತಂತ್ರಜ್ಞರಾಗಿ ಕೆಲಸಕ್ಕೆ ಸೇರಿದರು. ಇದೇ ಸಮಯದಲ್ಲಿ ಕೈರಾ ಜಿಲ್ಲೆಯ ಹಾಲು ಉತ್ಪಾದನಾ ಸಂಘಟನೆಯು ತನ್ನ ಉಳಿಗಾಲಕ್ಕಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿದ ಕುರಿಯನ್ನರು, ಸರ್ಕಾರಿ ಸೇವೆಯನ್ನು ತ್ಯಜಿಸಿ ಆ ಸಂಸ್ಥೆಗೆ ಜೀವ ತುಂಬಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರು. ವರ್ಗಿಸ್ ಕುರಿಯನ್ನರ ಈ ಸಾಹಸ ‘ಅಮುಲ್’ ಎಂಬ ಹೊಸ ಚರಿತ್ರೆಗೆ ನಾಂದಿಹಾಡಿತು. ಹೀಗೆ ಅವರು ಡೈರಿ ಅಭಿವೃದ್ಧಿಯ ಸಹಕಾರಿ ಮಾದರಿಯನ್ನು ಭಾರತದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವೀ ಉದ್ಯಮವನ್ನಾಗಿ ಮಾಡಿದರು. ಪ್ರಧಾನಿ ಜವಾಹರಲಾಲ್ ನೆಹರು ಅಮುಲ್ "ಫ್ಯಾಕ್ಟರಿ" ಉದ್ಘಾಟಿಸಲು ಆನಂದ್ ಗೆ ಭೇಟಿ ಕೊಟ್ಟಾಗ ಅವರ ಅದ್ಭುತ ಕಾರ್ಯವನ್ನು ಮೆಚ್ಚಿ ಅವರನ್ನು ಆಲಂಗಿಸಿದರು.

👉🏿ಸಹಕಾರಿತನದ ಅಮುಲ್ ಮಾದರಿಯು ಎಷ್ಟು ಯಶಸ್ವಿಯಾಯಿತೆಂದರೆ ಗುಜರಾತ್ ಹಾಲಿನ ಒಕ್ಕೂಟದ ಯಶಸ್ಸು ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಪ್ರೇರೇಪಿಸಿ ಡಾ. ವರ್ಗಿಸ್ ಕುರಿಯನ್ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸುವಂತೆ ಮಾಡಿತು. ಹೀಗೆ 1965ರ ವರ್ಷದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ರಾಷ್ತ್ರೀಯ ಹಾಲು ಉತ್ಪಾದನಾ ನಿಗಮಕ್ಕೆ ಅಧ್ಯಕ್ಷರೆಂದು ನೇಮಿಸಲ್ಪಟ್ಟ ವರ್ಗಿಸ್ ಕುರಿಯನ್ನರು ಮುಂದೆ 1973ರಲ್ಲಿ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಸ್ಥಾಪಿಸಿ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸಮರ್ಥವಾಗಿ ವಿತರಣೆಯಾಗುವಂತೆ ವ್ಯವಸ್ಥೆ ಮಾಡಿದರು. ಹೀಗೆ ವರ್ಗಿಸ್ ಕುರಿಯನ್ನರು ಭಾರತವನ್ನು ಅತ್ಯಂತ ಬ್ರಹತ್ ಹಾಲು ಉತ್ಪಾದನಾ ದೇಶವನ್ನಾಗಿ ಮಾಡಿದರು.

👉🏿ಕುರಿಯನ್ ಮತ್ತು ಅವರ ತಂಡದವರು ಆಕಳ ಹಾಲಿನ ಬದಲಾಗಿ ಎಮ್ಮೆಯ ಹಾಲಿನಿಂದ ಹಾಲಿನ ಪುಡಿ ಮತ್ತು ದಟ್ಟಗೊಳಿಸಿದ ಹಾಲು ಮಾಡುವ ಪ್ರಕ್ರಿಯೆಯನ್ನು ಕಂಡು ಹಿಡಿದರು. ಅಮುಲ್ ಯಶಸ್ವಿಯಾಗಲು ಮತ್ತು ಹಾಲಿನ ಪುಡಿ ಹಾಗೂ ದಟ್ಟಗೊಳಿಸಿದ ಹಾಲನ್ನು ಮಾಡಲು ಹಸುವಿನ ಹಾಲು ಬಳಸುವ ನೆಸ್ಲೆ ವಿರುದ್ಧ ಉತ್ತಮ ಪೈಪೋಟಿ ನೀಡಲು ಇದೇ ಪ್ರಮುಖ ಕಾರಣವಾಯಿತು. ಯುರೋಪ್ ನಲ್ಲಿ ಹಸುವಿನ ಹಾಲು ಹೇರಳವಾಗಿದ್ದರೆ ಭಾರತದಲ್ಲಿ, ಎಮ್ಮೆ ಹಾಲು ಪ್ರಮುಖ ಕಚ್ಚಾ ಪದಾರ್ಥವಾಗಿದೆ.

👉🏿ಅತ್ಯಂತ ಕುಶಲ ಹಾಗೂ ಶ್ರಮಭರಿತ ದುಡಿಮೆಗೆ ಹೆಸರಾದ ವರ್ಗಿಸ್ ಕುರಿಯನ್ನರು ಯಾವುದೇ ಪ್ರತೀಕೂಲ ಪರಿಸ್ಥಿತಿ ಇದ್ದಾಗ್ಯೂ ಹೇಗೆ ಒಬ್ಬ ವ್ಯಕ್ತಿ ಇಡೀ ಸಮಾಜಕ್ಕೆ ದೇಶಕ್ಕೆ ದಾರಿ ದೀಪವಾಗಬಹುದು ಎಂಬುದನ್ನು ಭಾರತೀಯ ಸಮಾಜದಲ್ಲಿ ಸಮರ್ಥವಾಗಿ ಪ್ರತಿಬಿಂಬಿಸಿದ್ದು, ಭಾರತೀಯ ಗ್ರಾಮೀಣ ಅಭಿವೃದ್ಧಿಯ ಆಸಕ್ತಿಯುಳ್ಳ ಹಲವಾರು ಸಂಘಟನೆಗಳ ನೇತಾರರು ಮಾರ್ಗದರ್ಶಕರು ಕೊಡಾ ಆಗಿದ್ದರು.

👉🏿🐄ಡೈರಿಗಳ ಉತ್ಪನ್ನವನ್ನು ಮಾರಾಟಮಾಡಲು 1973ರಲ್ಲಿ ಕುರಿಯನ್ ಅವರು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವನ್ನು ಸ್ಥಾಪಿಸಿದರು. ಇಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ವು ಭಾರತದಷ್ಟೇ ಅಲ್ಲ ಹೊರದೇಶಗಳಲ್ಲಿ ಕೂಡ ಮಾರಾಟಮಾಡುತ್ತದೆ. ಅವರು ಅಲ್ಲಿನ ಆಡಳಿತದೊಂದಿಗಿನ ಭಿನ್ನಾಭಿಪ್ರಾಯಗಳ ಕಾರಣ 2006 ರಲ್ಲಿ ಅದರ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಿದರು.

🍃ಪ್ರಶಸ್ತಿ ಗೌರವ🍃

ವಿಶ್ವ ಆಹಾರ ಪ್ರಶಸ್ತಿ, ಮ್ಯಾಗ್ಸೇಸೆ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕೃಷಿರತ್ನ ಪ್ರಶಸ್ತಿಗಳು, ಹಲವು ವಿಶ್ವ ವಿದ್ಯಾಲಯದ ಡಾಕ್ಟರೇಟ್, ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳು ಹಾಗೂ ಇವೆಲ್ಲವನ್ನೂ ಮೀರಿದ ಜನಪ್ರಿಯತೆ, ಜನನಂಬುಗೆ ಕುರಿಯನ್ ಅವರನ್ನು ಅರಸಿ ಬಂದಿದವು. ಶ್ಯಾಮ್ ಬೆನಗಲ್ ಅವರ ‘ಮಂಥನ್’ ಅಂತಹ ಸುಂದರ ಚಿತ್ರಗಳು ಸಹಾ ವರ್ಗಿಸ್ ಕುರಿಯನ್ನರ ಕಾಯಕದ ಪ್ರೇರಣೆ ಹೊಂದಿವೆ.

🍃ಆತ್ಮಚರಿತ್ರೆ🍃

ಅನೇಕ ಇತರ ಸಂಸ್ಥೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕುರಿಯನ್ ಜೀವನದ ಕಥೆಯನ್ನು "ಐ ಟೂ ಹ್ಯಾಡ್ ಎ ಡ್ರೀಮ್" ಎಂಬ ಅವರ ಆತ್ಮಚರಿತ್ರೆಯಲ್ಲಿ ಓದಬಹುದು.

🍃ವಿದಾಯ🍃

9 ಸೆಪ್ಟೆಂಬರ್ 2014 ರಂದು ತೀರಿಕೊಂಡ ಅವರು ನಾಸ್ತಿಕರಾಗಿದ್ದರು.
🐄🐄🐄🐄🐄🐄🐄🐄🐃
🐄🐄ರೋಷನ್ ಜಗಳೂರು
(gkmani2u)🐄🐄🐄🐄🐄

ಕೃಪೆ: encylopedia