Wednesday 23 September 2015

ಚಾಬಹಾರ್‍ ಬಂದರು

🌿🌿🌿🌿🌿🌿🌿🌿
ಚಾಬಹಾರ್‌ ಯೂರಿಯಾ ಘಟಕ: ಭಾರತ 1 ಲಕ್ಷ ಕೋಟಿ ಹೂಡಿಕೆ
(ಪ್ರಜಾವಾಣಿ)

ನವದೆಹಲಿ (ಪಿಟಿಐ): ಭಾರತವು ಪರ್ಷಿಯನ್‌ ಕೊಲ್ಲಿಯ  ಚಾಬಹಾರ್‌ ಬಂದರಲ್ಲಿ ನಿರ್ಮಿಸಲು ಉದ್ದೇಶಿಸಿರುವ  ಯೂರಿಯಾ ತಯಾರಿಕಾ ಘಟಕಕ್ಕೆ ಪ್ರತಿ ಬ್ರಿಟೀಷ್‌ ಥರ್ಮಲ್‌ ಯುನಿಟ್‌ಗೆ (ಬಿಟಿಯು) 2.95 ಡಾಲರ್‌ (ಅಂದಾಜು 192 ರೂ) ದರದಲ್ಲಿ ನೈಸರ್ಗಿಕ ಅನಿಲ ಪೂರೈಸಲು ಸಿದ್ಧವಿರುವುದಾಗಿ ಇರಾನ್‌ ಹೇಳಿದೆ.

1 ಬಿಟಿಯು 1055 ಜೌಲ್‌ಗೆ ಸಮ. ಆದರೆ, ಈ ದರವನ್ನು ಇನ್ನಷ್ಟು  ಅಂದರೆ 1.5 ಡಾಲರ್‌ಗಳಿಗೆ ತಗ್ಗಿಸುವಂತೆ ಭಾರತ ಇರಾನ್‌ಗೆ ಮನವಿ ಮಾಡಿದೆ. ಇರಾನ್‌ ಮುಂದಿಟ್ಟಿರುವ ಈ ದರವು ಸದ್ಯ  ಭಾರತ ಆಮದು ಮಾಡಿಕೊಳ್ಳುತ್ತಿರುವ ನೈಸರ್ಗಿಕ ಅನಿಲ ದರಕ್ಕೆ ಹೋಲಿದರೆ ಅರ್ಥದಷ್ಟು ಕಡಿಮೆ ಇದೆ.

ಇರಾನ್‌  ಪರಮಾಣು ಕಾರ್ಯಕ್ರಮದ ಮೇಲೆ ಅಮೆರಿಕ ಮತ್ತು ಪಶ್ಚಿಮ ದೇಶಗಳು ಹೇರಿರುವ ನಿರ್ಬಂಧದ ನಡುವೆಯೂ ಭಾರತ ಚಾಬಹಾರ್‌ ಬಂದರಿನಲ್ಲಿ ಸುಮಾರು 1 ಲಕ್ಷ ಕೋಟಿ ಹೂಡಿಕೆಯಲ್ಲಿ ಯೂರಿಯಾ ತಯಾರಿಕಾ ಘಟಕ ಸ್ಥಾಪಿಸಲು ಉದ್ದೇಶಿಸಿದೆ. ಈ ಘಟಕದಿಂದ ಭಾರತದಲ್ಲಿ ಯೂರಿಯಾ ದರ ಶೇ 50ರಷ್ಟು ಕಡಿಮೆಯಾಗಲಿದೆ. ಯೂರಿಯಾ ಸಬ್ಸಿಡಿ ಹೊರೆಯೂ ಗನನೀಯವಾಗಿ ತಗ್ಗಲಿದೆ. ಇದಕ್ಕಾಗಿ ಟೆಹರಾನ್‌ ಜತೆಗೆ  ಮಾತುಕತೆ ಮುಂದುವರಿದಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಚಾಬಹಾರ್‌ ಬಂದರು ಆಘ್ಫಾನಿಸ್ತಾನ ಮತ್ತು ಪಾಕಿಸ್ತಾನದ ಸಮುದ್ರ ಮಾರ್ಗದ ಆಯಕಟ್ಟಿನ ಪ್ರದೇಶದಲ್ಲಿದೆ.

ಚಾಬಹಾರ್‌ನಲ್ಲಿ ಯೂರಿಯಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ,  ಇರಾನ್‌ ಪೂರೈಸಲಿರುವ ನೈಸರ್ಗಿಕ ಅನಿಲ ದರದ ಮೇಲೆ ಈ ಯೋಜನೆ ಅವಲಂಬಿತವಾಗಿದೆ ಎಂದು ಗಡ್ಕರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

🐍🐍🐍🐍🐍🐍🐍🐍
gkmani2u ROSHAN
🐔🐔🐔🐔🐔🐔🐔🐔

No comments:

Post a Comment

Comment