Wednesday 23 September 2015

ಮೀಸಲಾತಿ

📡ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ ಪ್ರವರ್ಗವಾರು ಮೀಸಲಾತಿ ನೀಡುವ ಬಗ್ಗೆ ಕೈಗೊಂಡ ತೀರ್ಮಾನ📡
🌷ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಶೇ. 50 ಕ್ಕಿಂತ ಹೆಚ್ಚು ಇರದಂತೆ ಕಾನೂನು ರಚಿಸಬೇಕೆಂದು ಸುಪ್ರಿಂಕೋರ್ಟ್ ಸೆಪ್ಟೆಂಬರ್ 9, 1994 ರಂದು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ಕೊಟ್ಟಿತು. ಆದ್ದರಿಂದ ಕರ್ನಾಟಕ ಸರ್ಕಾರ 1995 ರ ಫೆಬ್ರವರಿಯಲ್ಲಿ ಶೇಕಡ 50 ರಷ್ಟು ಪ್ರಮಾಣದ ಮೀಸಲಾತಿ ನಿಯಮವನ್ನು ಜಾರಿಗೆ ತಂದಿತು. ಸಚಿವರಾಗಿದ್ದ ಎಂ. ಪಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಮಂತ್ರಿಮಂಡಲದ ಉಪಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಈ ನಿಯಮವನ್ನು ಜಾರಿಗೊಳಿಸಲಾಯಿತು. ಪ್ರವರ್ಗವಾರು ಮೀಸಲಾತಿ ಈ ಕೆಳಕಂಡಂತೆ ಇದೆ. [ಸಂವಿಧಾನದ 15 (4) ಮತ್ತು  16 (4)  ವಿಧಿಗಳ ಅನ್ವಯ] 👇🏻👇🏻👇🏻
🌴ವರ್ಗ 1👉🏼  4%
🌴ವರ್ಗ 2A 👉🏼15%
🌴ವರ್ಗ 2B👉🏼  4%
🌴ವರ್ಗ 3A 👉🏼4%
🌴ವರ್ಗ 3B 👉🏼 5%
🌴ಪರಿಶಿಷ್ಟ ಜಾತಿ  👉🏼15%
🌴ಪರಿಶಿಷ್ಟ ಪಂಗಡ 👉🏼3%
ಅಲ್ಲದೆ ಈ ಕೆಳಕಂಡವರಿಗೆ ಮೀಸಲು ಸೌಲಭ್ಯಗಳು ಇರಬಾರದೆಂದು ತಿಳಿಸಿದೆ.
🌹ಉನ್ನತ ಹುದ್ದೆಯಲ್ಲಿರುವವರ ಮಕ್ಕಳು.
🌹ವೈದ್ಯರು,  ವಕೀಲರು, ಚಾರ್ಟಡ್ ಅಕೌಂಟೆಂಟ್,  ಇನ್ ಕನ್ನಡ ಟ್ಯಾಕ್ಸ್ ಕನ್ಸಲ್ಟೆಂಟ್ಸ್, ಇಂಜಿನಿಯರ್ ಗಳು- ಇವರ ಮಕ್ಕಳು.
🌹ಪದವೀಧರ ತಂದೆ/ ತಾಯಿಗಳ ಮಕ್ಕಳು.
🌹ಆದಾಯ ತೆರಿಗೆ  ಕೊಡುವ ತಂದೆ / ತಾಯಿಯ ಮಕ್ಕಳು.
🌹 ವ್ಯಾಪಾರ ತೆರಿಗೆ ಕೊಡುವ ತಂದೆ / ತಾಯಿಯ ಮಕ್ಕಳು.
🌹ಎಂಟು ಹೆಕ್ಟೇರ್ ಗಿಂತ ಹೆಚ್ಚು ವ್ಯವಸಾಯ ಭೂಮಿಯನ್ನು ಹೊಂದಿರುವವರ ಮಕ್ಕಳು.
(ಮಾಹಿತಿ ಅರುಲ್ ಡಿಸೋಜಾ)

No comments:

Post a Comment

Comment