Monday 5 October 2015

ನೊಬೆಲ್ ಮಾಹಿತಿ

🌹ನೊಬೆಲ್ ಪ್ರಶಸ್ತಿಯ ಬಗ್ಗೆ ಒಂದಷ್ಟು ಮಾಹಿತಿ (ಜಿಕೆಮಣಿ) ಸ್ನೇಹಿತರಿಗಾಗಿ🌹
🌿🌿👏🏻📡👏🏻👏🏻📡🌿🌿
   ✨ (ರೋಷನ ಜಗಳೂರು)✨

👉🏿ನೊಬೆಲ್ ಪ್ರಶಸ್ತಿಯು 
ಅಲ್‌ಫ್ರೆಡ್ ನೊಬೆಲ್‌ರ ಮರಣೋತ್ತರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ.

👉👉🏿ನೊಬೆಲ್ ಪ್ರಶಸ್ತಿಯನ್ನು ಜಗತ್ತಿನ ಅತ್ಯುಚ್ಚ ಸನ್ಮಾನ ಎಂದು ಪರಿಗಣಿಸಲಾಗಿದೆ. 

🌍ಪ್ರಶಸ್ತಿಯ ಇತಿಹಾಸ🌍

👉🏿ಆಲ್ಫ್ರೆಡ್ ನೋಬೆಲ್ 'ಡೈನಮೈಟ್' ವಿಸ್ಪೋಟಕವನ್ನು ಆವಿಷ್ಕರಿಸಿದಾತ. ಈ ವಿಸ್ಪೋಟಕವು ಯುದ್ದಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು - ನೋವುಗಳಿಂದ ವಿಚಲಿತಗೊಂಡು, 1895ರಲ್ಲಿ ತನ್ನ ಸಂಪತ್ತಿನ 94% ಭಾಗವನ್ನು ಈ ಪ್ರಶಸ್ತಿಗಳ ಸ್ತಾಪನೆಗೆ ಉಯಿಲಿನಲ್ಲಿ ನಮೂದಿಸಿದ.
ಈ ಪ್ರಕಾರವಾಗಿ 1901ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಗಳನ್ನು ವಿತರಿಸಲಾಯಿತು.

🎩ವಿವಿಧ ಪುರಸ್ಕಾರಗಳು🎩

👉🏿ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.)

👉🏿ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.)

👉🏿ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ಕ್ಯಾರೋಲಿನ್‌ಸ್ಕಾ ಸಂಸ್ಥೆಯು ನಿರ್ಧರಿಸುತ್ತದೆ.)

👉🏿ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.)

👉🏿ನೊಬೆಲ್ ಶಾಂತಿ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ನಾರ್ವೆಯ ಸಂಸತ್ತು ನೇಮಕ ಮಾಡಿದ ನಾರ್ವೆಯ ನೊಬೆಲ್ ಸಮಿತಿಯು ನಿರ್ಧರಿಸುತ್ತದೆ.)

👉🏿ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.) 👉🏿👇🏿
(ಇದನ್ನು ಅರ್ಥ ಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. ಈ ಪುರಸ್ಕಾರವನ್ನು 1969ರಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಾರಂಭ ಮಾಡಿತು.)

🌿🌹ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು🌹🌿

🌹 ರವೀಂದ್ರನಾಥ ಠಾಗೋರ್ - ಸಾಹಿತ್ಯದಲ್ಲಿ (1913) 
🌹ಸರ್. ಸಿ. ವಿ. ರಾಮನ್ - ಭೌತಶಾಸ್ತ್ರದಲ್ಲಿ (1930)
 🌹 ಹರಗೋಬಿಂದ್ ಖೊರಾನ - ವೈದ್ಯಶಾಸ್ತ್ರದಲ್ಲಿ (೧೯೬೮)
🌹ಮದರ್ ತೆರೇಸಾ - ಶಾಂತಿ ಪ್ರಶಸ್ತಿ (೧೯೭೯) 
🌹ಸುಬ್ರಮಣ್ಯಮ್ ಚಂದ್ರಶೇಖರ್ - ಭೌತಶಾಸ್ತ್ರದಲ್ಲಿ (೧೯೮೩)
🌹ಅಮರ್ತ್ಯ ಸೇನ್ - ಅರ್ಥಶಾಸ್ತ್ರದಲ್ಲಿ (೧೯೯೮) 

🌹ಡಾ. ರಾಜೇಂದ್ರಕುಮಾರ್ ಪಚೌರಿ-'ಪರಿಸರ ಸಂರಕ್ಷಣೆಗಾಗಿ,' 'ನೋಬೆಲ್ ಶಾಂತಿಪ್ರಶಸ್ತಿ' (೨೦೦೭)
🌹ವೆಂಕಟರಾಮನ್ ರಾಮಕೃಷ್ಣನ್, ರಸಾಯನಶಾಸ್ತ್ರದಲ್ಲಿ (೨೦೦೯)

ಕೈಲಾಸ್ ಸತ್ಯಾರ್ಥಿ - ಶಾಂತಿ (2014)

ಗಾಂಧಿವಾದಿಯಾಗಿರುವ ಸತ್ಯಾರ್ಥಿ ಅವರು ಏಕಾಂಗಿ ವೀರನಂತೆ 'ಬಚಪನ್ ಬಚಾವೋ' ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಕಳ್ಳಸಾಗಣೆ ನಿಯಂತ್ರಣದ ಕುರಿತು ನಿರಂತರವಾಗಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಶೋಷಿತರ ಧ್ವನಿಯಾಗಿ ನಿಂತಿದ್ದಾರೆ.ಮಹಾತ್ಮನ ಅಹಿಂಸಾ ಹೋರಾಟದ ಪರಂಪರೆಯನ್ನು ಅವರು ಮುಂದವರಿಸಿಕೊಂಡು ಬಂದಿದ್ದು, ಪ್ರತಿಭಟನೆ ಹಾಗೂ ಜಾಗೃತಿ ಶಿಬಿರಗಳನ್ನು ನಡೆಸಿದ್ದಾರೆ. ಮಕ್ಕಳ ಹಕ್ಕುಗಳ ಪ್ರಮುಖ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ತಮ್ಮ ವಿಚಾರಧಾರೆ ಹಂಚಿ ಕೊಂಡಿದ್ದಾರೆ.ಭಾರತದ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ಹೋರಾಡಿದ ಮಲಾಲ ಅವರಿಗೆ ಪಾಕ್‌`ನ ಮಲಾಲಾ ಯೂಸುಫ್ ಝಾಯಿ ಅವರಿಗೆ ೨೦೧೪ ರ ನೊಬೆಲ್ ಶಾಂತಿ ಪುರಸ್ಕಾರ ನೀಡಿದೆ. ತಾಲಿಬಾನ್‌ ಉಗ್ರರ ದಾಳಿಗೆ ಸಿಲುಕಿ ಬಚಾವಾಗಿದ್ದ ಮಲಾಲ ಯೂಸುಫ್ ಝಾಯಿ ನೊಬೆಲ್‌ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

🌹🌹🌹🌹🌹🌹🌹🌹🌹      🌹ರೋಷನ್ ಜಗಳೂರು🌹

No comments:

Post a Comment

Comment