Monday 12 October 2015

ಕಲಾಂ

👀👀👀👀👀👀👀
🌿ಕಲಾಂ ಇಂಟರ್‍ ನ್ಯಾಚನಲ್ ಪೌಂಢೇಶನ್🌿
ROSHAN jagalur

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಆಲೋಚನೆಯನ್ನು ಜಗತ್ತಿನಾದ್ಯಂತ ಪಸರಿಸುವ ನಿಲುವಿನೊಂದಿಗೆ ಕಲಾಂ ಸಂಬಂಧಿಕರು
🌹'ಡಾ.ಎ ಪಿ ಜೆ ಅಬ್ದುಲ್ ಕಲಾಂ ಇಂಟರ್ ನ್ಯಾಷನಲ್ ಫೌಂಡೇಶನ್'🌹 ಹುಟ್ಟುಹಾಕಿದ್ದಾರೆ. ಇದರ ಲಾಂಛನವನ್ನು
👉🏿'ಹೌಸ್ ಆಫ್ ಕಲಾಂ' ಎಂಬ ಶೀರ್ಷಿಕೆ ಅಡಿಯಲ್ಲಿ ಅಕ್ಟೋಬರ್ 12ರ ಸೋಮವಾರದಂದು ಬಿಡುಗಡೆಗೊಳಿಸಲಾಯಿತು.

👉🏿ಕಲಾಂ ಅವರ ವ್ಯಕ್ತಿತ್ವ ಇಂದಿನ ಯುವಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. ಭಾರತದ ಬಗ್ಗೆ ಹಲವಾರು ಕನಸುಗಳನ್ನು ಇಟ್ಟುಕೊಂಡಿದ್ದರು. ಇವರ ಕನಸುಗಳನ್ನು ಇಂದಿನ ಯುವಪೀಳಿಗೆಯ ಮೂಲಕ ಪೂರೈಸಲು ಆಲೋಚಿಸಿದ್ದೇವೆ ಎಂದು ಕಲಾಂ ಅವರ ಸಹೋದರನ ಮಗಳು ಫೌಂಡೇಶನ್ ಮುಖ್ಯಸ್ಥೆ
ಡಾ. ನಸೀಮಾ ಮರಾಕಯಾರ್ ಹೇಳಿದ್ದಾರೆ.

👉🏿ಯುವಜನತೆಯಲ್ಲಿ ಓದುವ ಹವ್ಯಾಸ ಚಿಗುರಿಸುವ ಸಲುವಾಗಿ 'ಹೋಮ್ ಲೈಬ್ರೇರಿ' ಎಂಬ ಕಾರ್ಯ ಆರಂಭಿಸಲಿದ್ದೇವೆ. ಯುವಜನತೆ ವಿಜ್ಞಾನ ಜಗತ್ತಿನ ಕುರಿತಾಗಿ ಒಲವನ್ನು ಬೆಳೆಸುವ ಪ್ರಯತ್ನ ಮಾಡಲಿದ್ದೇವೆ ಎಂದು ಎಂ.ಜೆ ಶೇಖ್ ದಾವುದ್ ತಿಳಿಸಿದ್ದಾರೆ.
🍒🍒🍒🍒🍒🍒🍒🍒

No comments:

Post a Comment

Comment