Saturday 2 April 2016

ಮಾಹಿತಿ ಸಂಗ್ರಹ

1) ಯಾವ ದೇಶವು ಕಾಗದವನ್ನು ಸಂಶೋಧಿಸಿತು? 

ಉತ್ತರ:- ಚೀನಾ

2) ಕೋಶಕೇಂದ್ರದಲ್ಲಿ ಕಂಡುಬರುವ ಕನಗಳು ಯಾವವು?

ಉತ್ತರ:- ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು

3) ಪ್ರಪಂಚದಲ್ಲಿಯೇ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?

ಉತ್ತರ:- ಬೈಕಲ್ ಸರೋವರ
 
4) ಯಾವ ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರಾಷ್ಟ್ರೀಕರಣಗೊಂಡಿತು?

ಉತ್ತರ:- 1949 ರಲ್ಲಿ

 
5)  ಸೆಶೆಲ್ಸ್ ದ್ವೀಪ ಕಂಡುಬರುವುದು ಎಲ್ಲಿ? 

ಉತ್ತರ:- ಮಾಹೆಯಲ್ಲಿ

6) ತಾಯ್ಲೆಂಡಿನ ಕರೆನ್ಸಿ ಯಾವುದು?  Thai Baht

ಉತ್ತರ:- ತಾಯ್ ಬಾಟ್ (Thai Baht)

 
7) ಸುಭಾಷ್ ಚಂದ್ರ ಬೋಸರ ತಂದೆಯ ಹೆಸರೇನು? What is father name of Subash Chandra bose?

ಉತ್ತರ:- ಜಾನಕಿನಾತ ಬೋಸ್

 

8) ಮೊಘಲರ ಕೊನೆಯ ಚಕ್ರವರ್ತಿ ಯಾರು?

ಉತ್ತರ:- ಔರಂಗಜೇಬ

 
9) ಯುನೆಸ್ಕೋದ ಪ್ರಧಾನ ಕಚೇರಿಯು ಎಲ್ಲಿ ಕಂಡುಬರುತ್ತದೆ? 

ಉತ್ತರ:- ಪ್ಯಾರಿಸ್ ನಲ್ಲಿ ಕಂಡುಬರುತ್ತದೆ

 

10) ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯಲಾಗುತ್ತದೆ? 

ಉತ್ತರ:- ಖಾನ್ ಅಬ್ದುಲ್ ಗಫರ್ ಖಾನ್

 

11) ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ್ರ ಯಾವುದು? 

ಉತ್ತರ:- ಸಿರೀಸ್ ಎಂಬ ನಕ್ಷತ್ರ

 
12) Aurum ಎಂಬ ಲ್ಯಾಟಿನ್ ಹೆಸರು ಸಂಬಂಧಿಸಿರುವುದು  _____.

ಉತ್ತರ:- ಬಂಗಾರ (Gold)

 
13) ಮಾರ್ಸ್ ಆರ್ಬಿಟರಿ ಮಿಷನ್ ಮಂಗಳಯಾನ ಉಡಾವಣೆ ಮಾಡಿದ್ದು? 

ಉತ್ತರ:- ಶ್ರೀಹರಿಕೋಟಾದಿಂದ

 

14) ಜಿಮ್ಮೀ ವೇಲ್ಸ್ ಅವರು ................ ವೆಬ್ ಸೈಟ್ ನ ಸಂಸ್ಥಾಪಕರಾಗಿದ್ದಾರೆ.

ಉತ್ತರ:- ವಿಕಿಪಿಡಿಯಾ

 
15) ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ? 

ಉತ್ತರ:- ಜೂನ್ 5

 
16) ಹಿಮಪ್ರವಾಹದಲ್ಲಿರುವ ಆಳವಾದ ಬಿರುಕನ್ನು ಏನೆಂದು ವರ್ಣಿಸುವಿರಿ?  

ಉತ್ತರ:- ಕೊರಕಲು

 
17) ಗ್ರೆನೈಟ್ ಎನ್ನುವುದು ಯಾವ ಕಲ್ಲಿಗೆ ಉದಾಹರಣೆಯಾಗಿದೆ?

ಉತ್ತರ:- ಅಗ್ನಿಶಿಲೆ

 
18) ನಮ್ಮ ದೇಶದ ರಾಷ್ತ್ರೀಯ ಹಾಡು ವಂದೆ ಮಾತರಂ ನ್ನು ಬರೆದವರು? 

ಉತ್ತರ:- ಬಂಕಿಮ್ ಚಂದ್ರ ಚಟರ್ಜಿ

 
19) ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾದದ್ದು .............. 

ಉತ್ತರ:- 8 ನೇ ಆಗಷ್ಟ್ 1942 ರಂದು 

20) ದೀನ್ ಇ ಇಲಾಹಿ ಮತದ ಸಂಸ್ಥಾಪಕರಾರು?

ಉತ್ತರ:- ರಾಜಾ ಅಕ್ಬರ್

21) ಮಾನವನ ದೇಹದಲ್ಲಿರುವ ಅತ್ಯಂತ ಚಿಕ್ಕ ಮೂಳೆ ಯಾವುದು? 

ಉತ್ತರ:- ಕಿವಿಯಲ್ಲಿ ಕಂಡುಬರುವ "ಸ್ಟೆಪ್ಪಿಸ್" ಎಂಬ ಮೂಳೆ

 

22) ಜಗತ್ತಿನ ಅತಿ ದೊಡ್ಡ ಮರುಭೂಮಿ ಯಾವುದು? 

ಉತ್ತರ:- ಸಹಾರ ಮರುಭೂಮಿ

 

23) ಮಾನವನ ದೇಹದಲ್ಲಿರುವ ಯಾವ ಅಂಗವು ಮತ್ತೆ ಪುನರ್ಜನ್ಮ ಪಡೆಯಬಹುದಾಗಿದೆ? 

ಉತ್ತರ:- ಲೀವರ್

 
24) ಕುಂಚಳ್ಳಿ ಜಲಪಾತವು ಎಲ್ಲಿ ಕಂಡುಬರುತ್ತದೆ? kunchilal water falls is situated in which state?

ಉತ್ತರ:- ಕರ್ನಾಟಕ

 

25) ಹಸಿರುಮನೆ ಪರಿಣಾಮಕ್ಕೆ ಕಾರಣವಾದ ಅನಿಲ ಯಾವುದು?

ಉತ್ತರ:- co2

Wednesday 25 November 2015

ವರ್ಗೀಸ್ ಕುರಿಯನ್

ನವೆಂಬರ್‍ 26
🐄🐃🐄ಮಿಲ್ಕ್ ಮ್ಯಾನ್ ಆಪ್ ಇಂಡಿಯಾ ಎಂದೇ ಪ್ರಸಿದ್ದಿ ಪಡೆದ
ವರ್ಗೀಸ್ ಕುರಿಯನ್ ಅವರ ಜನ್ಮದಿನ ಇಂದು🐄🐄🐃

👉🏿(gkmani2u🍃🐃🍃
🍃 ರೋಷನ್ ಜಗಳೂರು🍃)

ಜನನ::ನವೆಂಬರ್ 26 1921
-
 🐄ಅಮುಲ್ ಡೈರಿ ಸಂಸ್ಥೆಯ ಸ್ಥಾಪಕರು ಮತ್ತು ಭಾರತದಲ್ಲಿ ಆಪರೇಶನ್ ಫ್ಲಡ್ ಎಂಬ ಹೆಸರಿನ ಕ್ಷೀರಕ್ರಾಂತಿಯ ಪ್ರಮುಖ ಪಾತ್ರಧಾರಿ.

🐄ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF)ದ ಸಂಸ್ಥಾಪಕ ಅಧ್ಯಕ್ಷರಾಗಿ , ಕುರಿಯನ್ ಅವರು ಅಮುಲ್ ಡೈರಿ ಉತ್ಪನ್ನಗಳ ಬ್ರಾಂಡ್ ನ ಸೃಷ್ಟಿ ಮತ್ತು ಯಶಸ್ಸಿಗೆ ಕಾರಣರಾದವರು. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದಲ್ಲಿ ಅವರ ಸಾಧನೆ ಕಂಡು ರಾಷ್ಟ್ರೀಯ ಮಟ್ಟದಲ್ಲಿ ನ ಅಮುಲ್ ಯಶಸ್ಸನ್ನು ಪುನರಾವರ್ತಿಸಲು, 1965ರಲ್ಲಿ ಅವರನ್ನು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ(NDDB) ಯ ಸ್ಥಾಪಕ ಅಧ್ಯಕ್ಷರನ್ನಾಗಿ ನೇಮಿಸಿದರು. ಕೆಲವು ವರ್ಷಗಳ ನಂತರ, ಕುರಿಯನ್ ರ ಮುಂದಾಳುತನದಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು
👉🏿ಆಪರೇಷನ್ ಫ್ಲಡ್
(ಅಥವಾ ವೈಟ್ ರೆವಲ್ಯೂಷನ್-ಕ್ಷೀರಕ್ರಾಂತಿ ) ಎಂಬ ಜಗತ್ತಿನ ಅತಿ ದೊಡ್ಡ ಡೈರಿ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿತು. ಆಪರೇಷನ್ ಫ್ಲಡ್ ಯೋಜನೆಯು ಭಾರತವನ್ನು ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ದೇಶವನ್ನಾಗಿ ಮಾಡಿತು;
👉🏿2010-11ರಲ್ಲಿ, ಜಾಗತಿಕ ಉತ್ಪಾದನೆಯ ಸುಮಾರು ಪ್ರತಿ ನೂರಕ್ಕೆ 17 ರಷ್ಟು ಭಾಗವು ಭಾರತದ್ದಾಗಿತ್ತು .

👳🏾"ಭಾರತದ ಹಾಲು ವಿತರಕ" ಮತ್ತು "ಕ್ಷೀರ ಕ್ರಾಂತಿಯ ಪಿತಾಮಹ" ಎಂದು ಬಣ್ಣಿಸಲ್ಪಟ್ಟ ಕುರಿಯನ್ ರವರು ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ '"ಪದ್ಮ ವಿಭೂಷಣ" ಪ್ರಶಸ್ತಿ,
ವಿಶ್ವ ಆಹಾರ ಪ್ರಶಸ್ತಿ ಮತ್ತು ಮ್ಯಾಗ್ಸೇಸೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

🍃ಪ್ರಾರಂಭಿಕ ಜೀವನ🍃

ಅವರು ಹುಟ್ಟಿದ್ದು ಕೇರಳದ ಕೋಝಿಕೋಡ್ (ಅಂದರೆ ಕ್ಯಾಲಿಕಟ್) ನಲ್ಲಿ. ಭೌತಶಾಸ್ತ್ರದಲ್ಲಿ ಪದವಿಯ ನಂತರ ಬಿ.ಇ. ( ಮೆಕ್ಯಾನಿಕಲ್ ಇಂಜಿನಿಯರಿಂಗ್) ಮಾಡಿದರು. ಬಳಿಕ ಜಮ್ ಷೆಡ್ ಪುರದ ಟಾಟಾ ಸ್ಟೀಲ್ ತಾಂತ್ರಿಕ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಮೆಟಲರ್ಜಿಕಲ್ ಇಂಜಿನಿಯರಿಂಗ್ ನಲ್ಲಿ ಎಂ.ಎಸ್ಸಿ. ಮಾಡಲು ಸ್ಕಾಲರ್ಶಿಪ್ ಪಡೆದುಕೊಂಡು ಅಮೇರಿಕಕ್ಕೆ ತೆರಳಿದರು.

🍃ವೃತ್ತಿ ಜೀವನ🍃

ಅಮೆರಿಕದಿಂದ 1948ರಲ್ಲಿ ಭಾರತಕ್ಕೆ ಹಿಂದಿರುಗಿದ ವರ್ಗಿಸ್ ಕುರಿಯನ್ನರು ಸರ್ಕಾರಿ ಸೇವೆಗೆ ಸೇರಿ ಆನಂದ್ ನಗರದಲ್ಲಿದ್ದ ಹಾಲಿನ ಪೌಡರ್ ಉತ್ಪಾದಿಸುವ ಸಣ್ಣ ಘಟಕವೊಂದರಲ್ಲಿ ತಂತ್ರಜ್ಞರಾಗಿ ಕೆಲಸಕ್ಕೆ ಸೇರಿದರು. ಇದೇ ಸಮಯದಲ್ಲಿ ಕೈರಾ ಜಿಲ್ಲೆಯ ಹಾಲು ಉತ್ಪಾದನಾ ಸಂಘಟನೆಯು ತನ್ನ ಉಳಿಗಾಲಕ್ಕಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿದ ಕುರಿಯನ್ನರು, ಸರ್ಕಾರಿ ಸೇವೆಯನ್ನು ತ್ಯಜಿಸಿ ಆ ಸಂಸ್ಥೆಗೆ ಜೀವ ತುಂಬಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರು. ವರ್ಗಿಸ್ ಕುರಿಯನ್ನರ ಈ ಸಾಹಸ ‘ಅಮುಲ್’ ಎಂಬ ಹೊಸ ಚರಿತ್ರೆಗೆ ನಾಂದಿಹಾಡಿತು. ಹೀಗೆ ಅವರು ಡೈರಿ ಅಭಿವೃದ್ಧಿಯ ಸಹಕಾರಿ ಮಾದರಿಯನ್ನು ಭಾರತದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವೀ ಉದ್ಯಮವನ್ನಾಗಿ ಮಾಡಿದರು. ಪ್ರಧಾನಿ ಜವಾಹರಲಾಲ್ ನೆಹರು ಅಮುಲ್ "ಫ್ಯಾಕ್ಟರಿ" ಉದ್ಘಾಟಿಸಲು ಆನಂದ್ ಗೆ ಭೇಟಿ ಕೊಟ್ಟಾಗ ಅವರ ಅದ್ಭುತ ಕಾರ್ಯವನ್ನು ಮೆಚ್ಚಿ ಅವರನ್ನು ಆಲಂಗಿಸಿದರು.

👉🏿ಸಹಕಾರಿತನದ ಅಮುಲ್ ಮಾದರಿಯು ಎಷ್ಟು ಯಶಸ್ವಿಯಾಯಿತೆಂದರೆ ಗುಜರಾತ್ ಹಾಲಿನ ಒಕ್ಕೂಟದ ಯಶಸ್ಸು ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಪ್ರೇರೇಪಿಸಿ ಡಾ. ವರ್ಗಿಸ್ ಕುರಿಯನ್ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸುವಂತೆ ಮಾಡಿತು. ಹೀಗೆ 1965ರ ವರ್ಷದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ರಾಷ್ತ್ರೀಯ ಹಾಲು ಉತ್ಪಾದನಾ ನಿಗಮಕ್ಕೆ ಅಧ್ಯಕ್ಷರೆಂದು ನೇಮಿಸಲ್ಪಟ್ಟ ವರ್ಗಿಸ್ ಕುರಿಯನ್ನರು ಮುಂದೆ 1973ರಲ್ಲಿ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಸ್ಥಾಪಿಸಿ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸಮರ್ಥವಾಗಿ ವಿತರಣೆಯಾಗುವಂತೆ ವ್ಯವಸ್ಥೆ ಮಾಡಿದರು. ಹೀಗೆ ವರ್ಗಿಸ್ ಕುರಿಯನ್ನರು ಭಾರತವನ್ನು ಅತ್ಯಂತ ಬ್ರಹತ್ ಹಾಲು ಉತ್ಪಾದನಾ ದೇಶವನ್ನಾಗಿ ಮಾಡಿದರು.

👉🏿ಕುರಿಯನ್ ಮತ್ತು ಅವರ ತಂಡದವರು ಆಕಳ ಹಾಲಿನ ಬದಲಾಗಿ ಎಮ್ಮೆಯ ಹಾಲಿನಿಂದ ಹಾಲಿನ ಪುಡಿ ಮತ್ತು ದಟ್ಟಗೊಳಿಸಿದ ಹಾಲು ಮಾಡುವ ಪ್ರಕ್ರಿಯೆಯನ್ನು ಕಂಡು ಹಿಡಿದರು. ಅಮುಲ್ ಯಶಸ್ವಿಯಾಗಲು ಮತ್ತು ಹಾಲಿನ ಪುಡಿ ಹಾಗೂ ದಟ್ಟಗೊಳಿಸಿದ ಹಾಲನ್ನು ಮಾಡಲು ಹಸುವಿನ ಹಾಲು ಬಳಸುವ ನೆಸ್ಲೆ ವಿರುದ್ಧ ಉತ್ತಮ ಪೈಪೋಟಿ ನೀಡಲು ಇದೇ ಪ್ರಮುಖ ಕಾರಣವಾಯಿತು. ಯುರೋಪ್ ನಲ್ಲಿ ಹಸುವಿನ ಹಾಲು ಹೇರಳವಾಗಿದ್ದರೆ ಭಾರತದಲ್ಲಿ, ಎಮ್ಮೆ ಹಾಲು ಪ್ರಮುಖ ಕಚ್ಚಾ ಪದಾರ್ಥವಾಗಿದೆ.

👉🏿ಅತ್ಯಂತ ಕುಶಲ ಹಾಗೂ ಶ್ರಮಭರಿತ ದುಡಿಮೆಗೆ ಹೆಸರಾದ ವರ್ಗಿಸ್ ಕುರಿಯನ್ನರು ಯಾವುದೇ ಪ್ರತೀಕೂಲ ಪರಿಸ್ಥಿತಿ ಇದ್ದಾಗ್ಯೂ ಹೇಗೆ ಒಬ್ಬ ವ್ಯಕ್ತಿ ಇಡೀ ಸಮಾಜಕ್ಕೆ ದೇಶಕ್ಕೆ ದಾರಿ ದೀಪವಾಗಬಹುದು ಎಂಬುದನ್ನು ಭಾರತೀಯ ಸಮಾಜದಲ್ಲಿ ಸಮರ್ಥವಾಗಿ ಪ್ರತಿಬಿಂಬಿಸಿದ್ದು, ಭಾರತೀಯ ಗ್ರಾಮೀಣ ಅಭಿವೃದ್ಧಿಯ ಆಸಕ್ತಿಯುಳ್ಳ ಹಲವಾರು ಸಂಘಟನೆಗಳ ನೇತಾರರು ಮಾರ್ಗದರ್ಶಕರು ಕೊಡಾ ಆಗಿದ್ದರು.

👉🏿🐄ಡೈರಿಗಳ ಉತ್ಪನ್ನವನ್ನು ಮಾರಾಟಮಾಡಲು 1973ರಲ್ಲಿ ಕುರಿಯನ್ ಅವರು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವನ್ನು ಸ್ಥಾಪಿಸಿದರು. ಇಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ವು ಭಾರತದಷ್ಟೇ ಅಲ್ಲ ಹೊರದೇಶಗಳಲ್ಲಿ ಕೂಡ ಮಾರಾಟಮಾಡುತ್ತದೆ. ಅವರು ಅಲ್ಲಿನ ಆಡಳಿತದೊಂದಿಗಿನ ಭಿನ್ನಾಭಿಪ್ರಾಯಗಳ ಕಾರಣ 2006 ರಲ್ಲಿ ಅದರ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಿದರು.

🍃ಪ್ರಶಸ್ತಿ ಗೌರವ🍃

ವಿಶ್ವ ಆಹಾರ ಪ್ರಶಸ್ತಿ, ಮ್ಯಾಗ್ಸೇಸೆ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕೃಷಿರತ್ನ ಪ್ರಶಸ್ತಿಗಳು, ಹಲವು ವಿಶ್ವ ವಿದ್ಯಾಲಯದ ಡಾಕ್ಟರೇಟ್, ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳು ಹಾಗೂ ಇವೆಲ್ಲವನ್ನೂ ಮೀರಿದ ಜನಪ್ರಿಯತೆ, ಜನನಂಬುಗೆ ಕುರಿಯನ್ ಅವರನ್ನು ಅರಸಿ ಬಂದಿದವು. ಶ್ಯಾಮ್ ಬೆನಗಲ್ ಅವರ ‘ಮಂಥನ್’ ಅಂತಹ ಸುಂದರ ಚಿತ್ರಗಳು ಸಹಾ ವರ್ಗಿಸ್ ಕುರಿಯನ್ನರ ಕಾಯಕದ ಪ್ರೇರಣೆ ಹೊಂದಿವೆ.

🍃ಆತ್ಮಚರಿತ್ರೆ🍃

ಅನೇಕ ಇತರ ಸಂಸ್ಥೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕುರಿಯನ್ ಜೀವನದ ಕಥೆಯನ್ನು "ಐ ಟೂ ಹ್ಯಾಡ್ ಎ ಡ್ರೀಮ್" ಎಂಬ ಅವರ ಆತ್ಮಚರಿತ್ರೆಯಲ್ಲಿ ಓದಬಹುದು.

🍃ವಿದಾಯ🍃

9 ಸೆಪ್ಟೆಂಬರ್ 2014 ರಂದು ತೀರಿಕೊಂಡ ಅವರು ನಾಸ್ತಿಕರಾಗಿದ್ದರು.
🐄🐄🐄🐄🐄🐄🐄🐄🐃
🐄🐄ರೋಷನ್ ಜಗಳೂರು
(gkmani2u)🐄🐄🐄🐄🐄

ಕೃಪೆ: encylopedia

Monday 12 October 2015

Economic Nobel 2015

🌹BREAKING NEWS🌹
The Nobel Prize in Economic Sciences 2015 was awarded to
👀🌹Angus Deaton🌹👀
of Princeton University, NJ, USA,
"for his analysis of consumption, poverty, and welfare". By linking detailed individual choices and aggregate outcomes, his research has helped transform the fields of microeconomics, macroeconomics, and development economics.
🌿🌿🌿🌿🌿🌿🌿🌿🌿

ಕಲಾಂ

👀👀👀👀👀👀👀
🌿ಕಲಾಂ ಇಂಟರ್‍ ನ್ಯಾಚನಲ್ ಪೌಂಢೇಶನ್🌿
ROSHAN jagalur

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಆಲೋಚನೆಯನ್ನು ಜಗತ್ತಿನಾದ್ಯಂತ ಪಸರಿಸುವ ನಿಲುವಿನೊಂದಿಗೆ ಕಲಾಂ ಸಂಬಂಧಿಕರು
🌹'ಡಾ.ಎ ಪಿ ಜೆ ಅಬ್ದುಲ್ ಕಲಾಂ ಇಂಟರ್ ನ್ಯಾಷನಲ್ ಫೌಂಡೇಶನ್'🌹 ಹುಟ್ಟುಹಾಕಿದ್ದಾರೆ. ಇದರ ಲಾಂಛನವನ್ನು
👉🏿'ಹೌಸ್ ಆಫ್ ಕಲಾಂ' ಎಂಬ ಶೀರ್ಷಿಕೆ ಅಡಿಯಲ್ಲಿ ಅಕ್ಟೋಬರ್ 12ರ ಸೋಮವಾರದಂದು ಬಿಡುಗಡೆಗೊಳಿಸಲಾಯಿತು.

👉🏿ಕಲಾಂ ಅವರ ವ್ಯಕ್ತಿತ್ವ ಇಂದಿನ ಯುವಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. ಭಾರತದ ಬಗ್ಗೆ ಹಲವಾರು ಕನಸುಗಳನ್ನು ಇಟ್ಟುಕೊಂಡಿದ್ದರು. ಇವರ ಕನಸುಗಳನ್ನು ಇಂದಿನ ಯುವಪೀಳಿಗೆಯ ಮೂಲಕ ಪೂರೈಸಲು ಆಲೋಚಿಸಿದ್ದೇವೆ ಎಂದು ಕಲಾಂ ಅವರ ಸಹೋದರನ ಮಗಳು ಫೌಂಡೇಶನ್ ಮುಖ್ಯಸ್ಥೆ
ಡಾ. ನಸೀಮಾ ಮರಾಕಯಾರ್ ಹೇಳಿದ್ದಾರೆ.

👉🏿ಯುವಜನತೆಯಲ್ಲಿ ಓದುವ ಹವ್ಯಾಸ ಚಿಗುರಿಸುವ ಸಲುವಾಗಿ 'ಹೋಮ್ ಲೈಬ್ರೇರಿ' ಎಂಬ ಕಾರ್ಯ ಆರಂಭಿಸಲಿದ್ದೇವೆ. ಯುವಜನತೆ ವಿಜ್ಞಾನ ಜಗತ್ತಿನ ಕುರಿತಾಗಿ ಒಲವನ್ನು ಬೆಳೆಸುವ ಪ್ರಯತ್ನ ಮಾಡಲಿದ್ದೇವೆ ಎಂದು ಎಂ.ಜೆ ಶೇಖ್ ದಾವುದ್ ತಿಳಿಸಿದ್ದಾರೆ.
🍒🍒🍒🍒🍒🍒🍒🍒

Wednesday 7 October 2015

ರಸಾಯನಶಾಸ್ತ್ರದ ನೊಬೆಲ್ 2015

🌹🌹ರಸಾಯನ ಶಾಸ್ತ್ರದ🌹🌹      👉👉ನೊಬೆಲ್ ಪ್ರಕಟ
(ROSHAN JAGALUR)

📡ಲ‍ಂಡನ್ನಿನ ಡಾ.ಥಾಮಸ್ ಲಿಂಡಾಲ್,
📡ಪೌಲ್ ಎಲ್ ಮಾಡ್ರಿಚ್ ಮತ್ತು 📡ಅಜಿಜ್ ಸ್ಯಾನ್ ಕರ್ ಅವರಿಗೆ ರಾಸಾಯನಿಕ ಶಾಸ್ತ್ರದ
(ಡಿಎನ್ ಎ ಬಂಧ) ಕುರಿತಾಗಿ ವಿಭಿನ್ನ ಸಂಶೋಧನೆ ಕೈಗೊಂಡ ಕಾರಣ 2015ನೇ ಸಾಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ.
🌹🌹🌹🌹🌹🌹🌹🌹
📡ಲಂಡನ್ನಿನ ಫ್ರಾನ್ಸಿಸ್ ಕ್ರಿಕ್
ಇನ್ ಸ್ಟಿಟ್ಯೂಟ್ ನ ಡಾ. ಲಿಂಡಾಲ್ ಅವರು
ಅವನತಿಯ ಹಂತದಲ್ಲಿಯ
ಡಿಎನ್ ಎಯಿಂದ ಜಗತ್ತಿನಲ್ಲಿ ಹೊಸ ಜೀವ ಸೃಷ್ಟಿಸಬಹುದು ಎಂದು ಕಂಡು ಹಿಡಿದ ಕಾರಣಕ್ಕೆ ನೊಬೆಲ್ ಪ್ರಶಸ್ತಿ ದೊರೆತಿದೆ.

📡ಪೌಲ್ ಎಲ್ ಮಾಡ್ರಿಚ್ ಹೋವರ್ಡ್ ಹಗಿಸ್ ಮೆಡಿಕಲ್ ಇನ್ ಸ್ಟಿಟ್ಯೂಟ್ ಮತ್ತು ಡ್ಯೂಕ್ ವಿಶ್ವವಿದ್ಯಾಲಯ
    ಮೆಡಿಕಲ್ ಸೆಂಟರ್ ಡಿಎನ್ ಎ ಯನ್ನು ಆವರಿಸಿದ ಬೇಡವಾದ ಜೀವಕೋಶಗಳು ಕೋಶ ವಿಭಜನೆಯ ಸಮಯದಲ್ಲಿ ಹೇಗೆ ಮರು ರೂಪುಗೊಳ್ಳುತ್ತದೆ ಎಂದು ತೋರಿಸಿದಕ್ಕಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

📡ಚಾಪೆಲ್ ಹಿಲ್ ನ ಉತ್ತರ ಕೆರೋಲಿನಾ ವಿಶ್ವವಿದ್ಯಾಲಯದ ಡಾ. ಅಜೀಜ್ ಸ್ಯಾನ್ಕಾರ್ ಯಾಂತ್ರಿಕ ಜೀವಕೋಶಗಳು ನೀಳಾತೀತ ಕಿರಣಗಳಿಂದ ಹಾನಿಗೊಳಗಾದ ಡಿಎನ್ ಎ ಯನ್ನು ಹೇಗೆ ಮರು ರೂಪಿಸುತ್ತದೆ ಎಂದು ನಕ್ಷೆ ತಯಾರಿಸಿದ ಕಾರಣ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ
🌹🌹🌹🌹🌹🌹🌹🌹🌹

Monday 5 October 2015

ನೊಬೆಲ್ ಮಾಹಿತಿ

🌹ನೊಬೆಲ್ ಪ್ರಶಸ್ತಿಯ ಬಗ್ಗೆ ಒಂದಷ್ಟು ಮಾಹಿತಿ (ಜಿಕೆಮಣಿ) ಸ್ನೇಹಿತರಿಗಾಗಿ🌹
🌿🌿👏🏻📡👏🏻👏🏻📡🌿🌿
   ✨ (ರೋಷನ ಜಗಳೂರು)✨

👉🏿ನೊಬೆಲ್ ಪ್ರಶಸ್ತಿಯು 
ಅಲ್‌ಫ್ರೆಡ್ ನೊಬೆಲ್‌ರ ಮರಣೋತ್ತರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ.

👉👉🏿ನೊಬೆಲ್ ಪ್ರಶಸ್ತಿಯನ್ನು ಜಗತ್ತಿನ ಅತ್ಯುಚ್ಚ ಸನ್ಮಾನ ಎಂದು ಪರಿಗಣಿಸಲಾಗಿದೆ. 

🌍ಪ್ರಶಸ್ತಿಯ ಇತಿಹಾಸ🌍

👉🏿ಆಲ್ಫ್ರೆಡ್ ನೋಬೆಲ್ 'ಡೈನಮೈಟ್' ವಿಸ್ಪೋಟಕವನ್ನು ಆವಿಷ್ಕರಿಸಿದಾತ. ಈ ವಿಸ್ಪೋಟಕವು ಯುದ್ದಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು - ನೋವುಗಳಿಂದ ವಿಚಲಿತಗೊಂಡು, 1895ರಲ್ಲಿ ತನ್ನ ಸಂಪತ್ತಿನ 94% ಭಾಗವನ್ನು ಈ ಪ್ರಶಸ್ತಿಗಳ ಸ್ತಾಪನೆಗೆ ಉಯಿಲಿನಲ್ಲಿ ನಮೂದಿಸಿದ.
ಈ ಪ್ರಕಾರವಾಗಿ 1901ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಗಳನ್ನು ವಿತರಿಸಲಾಯಿತು.

🎩ವಿವಿಧ ಪುರಸ್ಕಾರಗಳು🎩

👉🏿ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.)

👉🏿ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.)

👉🏿ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ಕ್ಯಾರೋಲಿನ್‌ಸ್ಕಾ ಸಂಸ್ಥೆಯು ನಿರ್ಧರಿಸುತ್ತದೆ.)

👉🏿ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.)

👉🏿ನೊಬೆಲ್ ಶಾಂತಿ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ನಾರ್ವೆಯ ಸಂಸತ್ತು ನೇಮಕ ಮಾಡಿದ ನಾರ್ವೆಯ ನೊಬೆಲ್ ಸಮಿತಿಯು ನಿರ್ಧರಿಸುತ್ತದೆ.)

👉🏿ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.) 👉🏿👇🏿
(ಇದನ್ನು ಅರ್ಥ ಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. ಈ ಪುರಸ್ಕಾರವನ್ನು 1969ರಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಾರಂಭ ಮಾಡಿತು.)

🌿🌹ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು🌹🌿

🌹 ರವೀಂದ್ರನಾಥ ಠಾಗೋರ್ - ಸಾಹಿತ್ಯದಲ್ಲಿ (1913) 
🌹ಸರ್. ಸಿ. ವಿ. ರಾಮನ್ - ಭೌತಶಾಸ್ತ್ರದಲ್ಲಿ (1930)
 🌹 ಹರಗೋಬಿಂದ್ ಖೊರಾನ - ವೈದ್ಯಶಾಸ್ತ್ರದಲ್ಲಿ (೧೯೬೮)
🌹ಮದರ್ ತೆರೇಸಾ - ಶಾಂತಿ ಪ್ರಶಸ್ತಿ (೧೯೭೯) 
🌹ಸುಬ್ರಮಣ್ಯಮ್ ಚಂದ್ರಶೇಖರ್ - ಭೌತಶಾಸ್ತ್ರದಲ್ಲಿ (೧೯೮೩)
🌹ಅಮರ್ತ್ಯ ಸೇನ್ - ಅರ್ಥಶಾಸ್ತ್ರದಲ್ಲಿ (೧೯೯೮) 

🌹ಡಾ. ರಾಜೇಂದ್ರಕುಮಾರ್ ಪಚೌರಿ-'ಪರಿಸರ ಸಂರಕ್ಷಣೆಗಾಗಿ,' 'ನೋಬೆಲ್ ಶಾಂತಿಪ್ರಶಸ್ತಿ' (೨೦೦೭)
🌹ವೆಂಕಟರಾಮನ್ ರಾಮಕೃಷ್ಣನ್, ರಸಾಯನಶಾಸ್ತ್ರದಲ್ಲಿ (೨೦೦೯)

ಕೈಲಾಸ್ ಸತ್ಯಾರ್ಥಿ - ಶಾಂತಿ (2014)

ಗಾಂಧಿವಾದಿಯಾಗಿರುವ ಸತ್ಯಾರ್ಥಿ ಅವರು ಏಕಾಂಗಿ ವೀರನಂತೆ 'ಬಚಪನ್ ಬಚಾವೋ' ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಕಳ್ಳಸಾಗಣೆ ನಿಯಂತ್ರಣದ ಕುರಿತು ನಿರಂತರವಾಗಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಶೋಷಿತರ ಧ್ವನಿಯಾಗಿ ನಿಂತಿದ್ದಾರೆ.ಮಹಾತ್ಮನ ಅಹಿಂಸಾ ಹೋರಾಟದ ಪರಂಪರೆಯನ್ನು ಅವರು ಮುಂದವರಿಸಿಕೊಂಡು ಬಂದಿದ್ದು, ಪ್ರತಿಭಟನೆ ಹಾಗೂ ಜಾಗೃತಿ ಶಿಬಿರಗಳನ್ನು ನಡೆಸಿದ್ದಾರೆ. ಮಕ್ಕಳ ಹಕ್ಕುಗಳ ಪ್ರಮುಖ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ತಮ್ಮ ವಿಚಾರಧಾರೆ ಹಂಚಿ ಕೊಂಡಿದ್ದಾರೆ.ಭಾರತದ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ಹೋರಾಡಿದ ಮಲಾಲ ಅವರಿಗೆ ಪಾಕ್‌`ನ ಮಲಾಲಾ ಯೂಸುಫ್ ಝಾಯಿ ಅವರಿಗೆ ೨೦೧೪ ರ ನೊಬೆಲ್ ಶಾಂತಿ ಪುರಸ್ಕಾರ ನೀಡಿದೆ. ತಾಲಿಬಾನ್‌ ಉಗ್ರರ ದಾಳಿಗೆ ಸಿಲುಕಿ ಬಚಾವಾಗಿದ್ದ ಮಲಾಲ ಯೂಸುಫ್ ಝಾಯಿ ನೊಬೆಲ್‌ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

🌹🌹🌹🌹🌹🌹🌹🌹🌹      🌹ರೋಷನ್ ಜಗಳೂರು🌹

2015 ನೋಬೆಲ್

BREAKING NEWS
🌹2015ರ ನೋಬೆಲ್ ಪ್ರಶಸ್ತಿ🌹

ವೈದ್ಯವಿಜ್ಞಾನ ಕ್ಷೇತ್ರದ
ಕೊಡುಗೆಗಾಗಿ ಐರಿಷ್ ಮೂಲದ
👉ವಿಲಿಯಂ ಕ್ಯಾಂಪ್ಬೆಲ್,
👉ಜಪಾನ್ ಸತೋಶಿ
ಒಮುರಾ ಮತ್ತು
👉ಚೀನಾದ ಯುಯು ಟು
ಅವರಿಗೆ 2015ನೇ ಸಾಲಿನ ನೊಬೆಲ್
ಪುರಸ್ಕಾರ ಘೋಷಿಸಲಾಗಿದೆ.

📡‘ವೈದ್ಯವಿಜ್ಞಾನ ಕ್ಞೇತ್ರದಲ್ಲಿನ
ಗಣನೀಯ ಕೊಡುಗೆಗಾಗಿ ಈ
ಮೂವರನ್ನು ನೊಬೆಲ್ ಪುರಸ್ಕಾರಕ್ಕೆ
ಆಯ್ಕೆ ಮಾಡಲಾಗಿದೆ’ ಎಂದು ಆಯ್ಕೆ ಸಮಿತಿ
ಹೇಳಿದೆ.
🌹🌍🌍🌹🌍🌍🌹🌹🌍