Wednesday 23 September 2015

ಮೀಸಲಾತಿ

📡ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ ಪ್ರವರ್ಗವಾರು ಮೀಸಲಾತಿ ನೀಡುವ ಬಗ್ಗೆ ಕೈಗೊಂಡ ತೀರ್ಮಾನ📡
🌷ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಶೇ. 50 ಕ್ಕಿಂತ ಹೆಚ್ಚು ಇರದಂತೆ ಕಾನೂನು ರಚಿಸಬೇಕೆಂದು ಸುಪ್ರಿಂಕೋರ್ಟ್ ಸೆಪ್ಟೆಂಬರ್ 9, 1994 ರಂದು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ಕೊಟ್ಟಿತು. ಆದ್ದರಿಂದ ಕರ್ನಾಟಕ ಸರ್ಕಾರ 1995 ರ ಫೆಬ್ರವರಿಯಲ್ಲಿ ಶೇಕಡ 50 ರಷ್ಟು ಪ್ರಮಾಣದ ಮೀಸಲಾತಿ ನಿಯಮವನ್ನು ಜಾರಿಗೆ ತಂದಿತು. ಸಚಿವರಾಗಿದ್ದ ಎಂ. ಪಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಮಂತ್ರಿಮಂಡಲದ ಉಪಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಈ ನಿಯಮವನ್ನು ಜಾರಿಗೊಳಿಸಲಾಯಿತು. ಪ್ರವರ್ಗವಾರು ಮೀಸಲಾತಿ ಈ ಕೆಳಕಂಡಂತೆ ಇದೆ. [ಸಂವಿಧಾನದ 15 (4) ಮತ್ತು  16 (4)  ವಿಧಿಗಳ ಅನ್ವಯ] 👇🏻👇🏻👇🏻
🌴ವರ್ಗ 1👉🏼  4%
🌴ವರ್ಗ 2A 👉🏼15%
🌴ವರ್ಗ 2B👉🏼  4%
🌴ವರ್ಗ 3A 👉🏼4%
🌴ವರ್ಗ 3B 👉🏼 5%
🌴ಪರಿಶಿಷ್ಟ ಜಾತಿ  👉🏼15%
🌴ಪರಿಶಿಷ್ಟ ಪಂಗಡ 👉🏼3%
ಅಲ್ಲದೆ ಈ ಕೆಳಕಂಡವರಿಗೆ ಮೀಸಲು ಸೌಲಭ್ಯಗಳು ಇರಬಾರದೆಂದು ತಿಳಿಸಿದೆ.
🌹ಉನ್ನತ ಹುದ್ದೆಯಲ್ಲಿರುವವರ ಮಕ್ಕಳು.
🌹ವೈದ್ಯರು,  ವಕೀಲರು, ಚಾರ್ಟಡ್ ಅಕೌಂಟೆಂಟ್,  ಇನ್ ಕನ್ನಡ ಟ್ಯಾಕ್ಸ್ ಕನ್ಸಲ್ಟೆಂಟ್ಸ್, ಇಂಜಿನಿಯರ್ ಗಳು- ಇವರ ಮಕ್ಕಳು.
🌹ಪದವೀಧರ ತಂದೆ/ ತಾಯಿಗಳ ಮಕ್ಕಳು.
🌹ಆದಾಯ ತೆರಿಗೆ  ಕೊಡುವ ತಂದೆ / ತಾಯಿಯ ಮಕ್ಕಳು.
🌹 ವ್ಯಾಪಾರ ತೆರಿಗೆ ಕೊಡುವ ತಂದೆ / ತಾಯಿಯ ಮಕ್ಕಳು.
🌹ಎಂಟು ಹೆಕ್ಟೇರ್ ಗಿಂತ ಹೆಚ್ಚು ವ್ಯವಸಾಯ ಭೂಮಿಯನ್ನು ಹೊಂದಿರುವವರ ಮಕ್ಕಳು.
(ಮಾಹಿತಿ ಅರುಲ್ ಡಿಸೋಜಾ)

ಕೋರ್ಟ್ ಚಲನಚಿತ್ರ

🌹🌹🌹🌹🌹🌹
ಮುಂಬೈ: ರಾಷ್ಟ್ರೀಯ ಚಲನಚಿತ್ರ
ಪ್ರಶಸ್ತಿ ಪಡೆದ ಮರಾಠಿ ಭಾಷೆಯ 'ಕೋರ್ಟ್' ಚಿತ್ರ
ಆಸ್ಕರ್ ಚಲನಚಿತ್ರ ಸ್ಪರ್ಧೆಗೆ
ನಾಮನಿರ್ದೆಶನಗೊಂಡಿದೆ.
ಅಮೋಲ್ ಪಾಲೇಕರ್ ನೇತೃತ್ವದ 17 ಸದಸ್ಯರ
ತಂಡ 'ಕೋರ್ಟ್' ಚಿತ್ರವನ್ನು ಆರಿಸಿದೆ. ವಿದೇಶ
ಭಾಷೆಗಳ ವರ್ಗದಲ್ಲಿ ಈ ಚಿತ್ರ ಸ್ಪರ್ಧಿಸಲಿದೆ.
ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ
ಲೋಪ ದೋಷಗಳನ್ನು ತೋರಿಸುವ ಕಥೆ ಕೋರ್ಟ್ ಚಿತ್ರದಲ್ಲಿದೆ.
ಚೈತನ್ಯ ತಾಮ್ನೆ ಬರೆದು ನಿರ್ದೇಶನದ ಈ
ಚಿತ್ರವನ್ನು ವಿವೇಕ್ ಗೊಂಬರ್
ನಿರ್ಮಿಸಿದ್ದಾರೆ. ಕೋರ್ಟ್ ಚಿತ್ರಕ್ಕೆ 62ನೇ
ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಸಹ
ಸಕ್ಕಿತ್ತು. 116 ನಿಮಿಷದ ಈ ಚಿತ್ರ ಮರಾಠಿ ಅಲ್ಲದೇ
ಹಿಂದಿ, ಗುಜರಾತಿ, ಇಂಗ್ಲಿಷ್ ಭಾಷೆಗೆ ಡಬ್
ಆಗಿದೆ.

ಚಾಬಹಾರ್‍ ಬಂದರು

🌿🌿🌿🌿🌿🌿🌿🌿
ಚಾಬಹಾರ್‌ ಯೂರಿಯಾ ಘಟಕ: ಭಾರತ 1 ಲಕ್ಷ ಕೋಟಿ ಹೂಡಿಕೆ
(ಪ್ರಜಾವಾಣಿ)

ನವದೆಹಲಿ (ಪಿಟಿಐ): ಭಾರತವು ಪರ್ಷಿಯನ್‌ ಕೊಲ್ಲಿಯ  ಚಾಬಹಾರ್‌ ಬಂದರಲ್ಲಿ ನಿರ್ಮಿಸಲು ಉದ್ದೇಶಿಸಿರುವ  ಯೂರಿಯಾ ತಯಾರಿಕಾ ಘಟಕಕ್ಕೆ ಪ್ರತಿ ಬ್ರಿಟೀಷ್‌ ಥರ್ಮಲ್‌ ಯುನಿಟ್‌ಗೆ (ಬಿಟಿಯು) 2.95 ಡಾಲರ್‌ (ಅಂದಾಜು 192 ರೂ) ದರದಲ್ಲಿ ನೈಸರ್ಗಿಕ ಅನಿಲ ಪೂರೈಸಲು ಸಿದ್ಧವಿರುವುದಾಗಿ ಇರಾನ್‌ ಹೇಳಿದೆ.

1 ಬಿಟಿಯು 1055 ಜೌಲ್‌ಗೆ ಸಮ. ಆದರೆ, ಈ ದರವನ್ನು ಇನ್ನಷ್ಟು  ಅಂದರೆ 1.5 ಡಾಲರ್‌ಗಳಿಗೆ ತಗ್ಗಿಸುವಂತೆ ಭಾರತ ಇರಾನ್‌ಗೆ ಮನವಿ ಮಾಡಿದೆ. ಇರಾನ್‌ ಮುಂದಿಟ್ಟಿರುವ ಈ ದರವು ಸದ್ಯ  ಭಾರತ ಆಮದು ಮಾಡಿಕೊಳ್ಳುತ್ತಿರುವ ನೈಸರ್ಗಿಕ ಅನಿಲ ದರಕ್ಕೆ ಹೋಲಿದರೆ ಅರ್ಥದಷ್ಟು ಕಡಿಮೆ ಇದೆ.

ಇರಾನ್‌  ಪರಮಾಣು ಕಾರ್ಯಕ್ರಮದ ಮೇಲೆ ಅಮೆರಿಕ ಮತ್ತು ಪಶ್ಚಿಮ ದೇಶಗಳು ಹೇರಿರುವ ನಿರ್ಬಂಧದ ನಡುವೆಯೂ ಭಾರತ ಚಾಬಹಾರ್‌ ಬಂದರಿನಲ್ಲಿ ಸುಮಾರು 1 ಲಕ್ಷ ಕೋಟಿ ಹೂಡಿಕೆಯಲ್ಲಿ ಯೂರಿಯಾ ತಯಾರಿಕಾ ಘಟಕ ಸ್ಥಾಪಿಸಲು ಉದ್ದೇಶಿಸಿದೆ. ಈ ಘಟಕದಿಂದ ಭಾರತದಲ್ಲಿ ಯೂರಿಯಾ ದರ ಶೇ 50ರಷ್ಟು ಕಡಿಮೆಯಾಗಲಿದೆ. ಯೂರಿಯಾ ಸಬ್ಸಿಡಿ ಹೊರೆಯೂ ಗನನೀಯವಾಗಿ ತಗ್ಗಲಿದೆ. ಇದಕ್ಕಾಗಿ ಟೆಹರಾನ್‌ ಜತೆಗೆ  ಮಾತುಕತೆ ಮುಂದುವರಿದಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಚಾಬಹಾರ್‌ ಬಂದರು ಆಘ್ಫಾನಿಸ್ತಾನ ಮತ್ತು ಪಾಕಿಸ್ತಾನದ ಸಮುದ್ರ ಮಾರ್ಗದ ಆಯಕಟ್ಟಿನ ಪ್ರದೇಶದಲ್ಲಿದೆ.

ಚಾಬಹಾರ್‌ನಲ್ಲಿ ಯೂರಿಯಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ,  ಇರಾನ್‌ ಪೂರೈಸಲಿರುವ ನೈಸರ್ಗಿಕ ಅನಿಲ ದರದ ಮೇಲೆ ಈ ಯೋಜನೆ ಅವಲಂಬಿತವಾಗಿದೆ ಎಂದು ಗಡ್ಕರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

🐍🐍🐍🐍🐍🐍🐍🐍
gkmani2u ROSHAN
🐔🐔🐔🐔🐔🐔🐔🐔

Friday 11 September 2015

ಉದ್ಯೋಗಮಣಿ

🌹ಉದ್ಯೋಗಮಣಿ🌹
📡📡📡📡📡📡📡
🎤ಕೃಷಿ ವಿಶ್ವವಿದ್ಯಾಲಯ ಧಾರವಾಡ. 👇
    ನೇಮಕಾತಿ ಅಧಿಸೂಚನೆ
63 ಸಹಾಯಕ/ ಸಹಾಯಕ ಕಮದ ಕ‍ಂಪ್ಯೂಟರ್‍ ಆಪರೇಟರ್‍ ಹುದ್ದೆಗ‌ಳ ನೇಮಕಾತಿಗೆ ಅರ್ಜಿ ಆಹ್ವಾನ..👆👇

ಹೆಚ್ಚಿನ ಮಾಹಿತಿಗಾಗಿ

www.uasd.edu
🍂🍂🍂🍂🍂🍂🍂📡

ಉದ್ಯೋಗಮಣಿ

🌹🌹ಉದ್ಯೋಗಮಣಿ🌹🌹

📡📡ಚಾಮರಾಜನಗರ ವೈದ್ಯಕೀಯ ವಿಜ್ಙಾನಗಳ ಸಂಸ್ಥೆ📡📡

95 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ,

ಹೆಚ್ಚಿನ ಮಾಹಿತಿಗಾಗಿ ಇಮೇಜ್ ನಲ್ಲಿರುವ ವೆಬ್ ಸೈಟ್ ಗೆ ಭೇಟಿ ಕೊಡಿ📡📡📡🌹🍂

ಪ್ರಚಲಿತ..ಜ್ಙಾನ

🍂🍂🍂🍂🍂🍂🍂🍂
✏ರೋಷನ್ ಜಗಳೂರು
          (ಜಿಕೆಮಣಿ)
🌹🌹🌹🌹📙🌹🌹🌹🌹

🍂"ಬರಾಕ್ 8" ಕ್ಷಿಪ್ಪಣಿಯನ್ನು ಯಾವ ಎರಡು ದೇಶಗಳು ಜಂಟಿಯಾಗಿ ನಿರ್ಮಿಸಿವೆ?
👉ಭಾರತ ಇಸ್ರೇಲ್

🍂ಇತ್ತೀಚೆಗೆ ಸ್ಥಾಪಿಸಲಾದ 'ನವಚಾರಕಕ್ಷಾ' ಎಂ‍ಬ ನೂತನ ಸಂಗ್ರಾಹಲಯ ಇರುವುದು?
👉ರಾಷ್ಟ್ರಪತಿ ಭವನ ದೆಹಲಿ

🍂ಆಗಸ್ಟ್ 7 ರಾಷ್ಟ್ರೀಯ ಕೈ ಮಗ್ಗ ದಿನವಾಗಿದೆ

🍂ಈಶೋಲಿ ಬ್ಯಾಕ್ಟೀರಿಯ ಎಲ್ಲಿ ಕ‍ಂಡು ಬರುತ್ತದೆ?
👉ಮಾನವನ ಕರುಳಿನಲ್ಲಿ

🍂ಮೂತ್ರ ಜನಕಾಂದಲ್ಲಿರುವ ಕಲ್ಲುಗಳಿಗೆ ಕಾರಣವಾದ ಲವಣಗಳು?
👉ಕ್ಯಾಲ್ಸಿಯಂ ಅಕ್ಸಲೇಟ್

🍂ರಿಗೆಲ್ ಎಂಬ ನಕ್ಷತ್ರ ನೀಲಿ ಮಿಶ್ರಿತ ಬೆಳಕು ಬಣ್ಣದಾಗಿ ಕಾಣುತ್ತದೆ ಇದಕ್ಕೆ ಕಾರಣ?
👉ಅದರ ಮೇಲ್ಮೈ ತಾಪ ಬಹಳ ಹೆಚ್ಚಾಗಿರುವುದರಿಂದ

🍂ಮಂದಾ ಎಂಬ ಹಬ್ಬವನ್ನು ಆಚರಿಸುವ ಬುಡಕಟ್ಟು ಜನಾಂಗ ಯಾವ ರಾಜ್ಯದವರು?
👉ಜಾರ್ಖಂಡ್

🍂￿ಅಂಬ್ರೆಲಾ ಕ್ರಾಂತಿ ಇದು ಹಾಂಗಾಂಕ್ ನಲ್ಲಿ ನಡೆಯಿತು (ಚೀನಾದ ವಿರುದ್ದ ನಡೆದ ಪ್ರಜಾಪ್ರಭುತ್ವ ಚಳುವಳಿಯಾಗಿದೆ)

🍂7ನೇ ಬ್ರಿಕ್ಸ್ ಶೃಂಗ ಸಭೆ ನಡೆದದ್ದು ರಷ್ಯಾದ ಉಫಾ ನಗರದಲ್ಲಿ (ಜುಲೈ  8, 9 2015)

🍂ಗುಪ್ತರ ಕಾಲದಲ್ಲಿ ಹೊರಡಿಸಿದ ಬೆಳ್ಳಿ ನಾಣ್ಯದ ಹೆಸರು?
👉ರೂಪಕ

🍂ತಾಯಿ ಭುವನೇಶ್ವರಿ ಎಂಬ ಕವಿತೆಯನ್ನು ರಚಿಸಿದವರು?
👉ಅಂದಾನಪ್ಪ ದೊಡ್ಡಮೇಟಿ

🍂ವೃದ್ದ ಗಂಗೆ ಎಂದು ಗೋದಾವರಿ ನದಿಯನ್ನು ಕರೆಯುವರು

🍂ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾಗುವ ಲೋಕಸಭಾ ಸದಸ್ಯರ ಸಂಖ್ಯೆ?
👉13

🍂ಮೊಟೆರಾ ಸ್ಟೇಡಿಯಂ ಕಂಡು ಬರುವ ನಗರ?
👉ಅಹಮದಬಾದ್

🍂ಚುಂಚು ಎಂಬ ಬುಡಕಟ್ಟು ಜನಾಂಗ ಕಂಡುಬರುವ ರಾಜ್ಯ?
👉ಒಡಿಶಾ
🍂🙏🙏🍂🙏🍂🙏🍂
ರೋಷನ್ ಜಗಳೂರು

Saturday 1 August 2015

ವಿಶ್ವ ಸ್ನೇಹಿತರ ದಿನ

🍂🍂🍂🍂🍂🍂🍂🍂
gkmani2u Roshan
🍂🍂🍂🍂🍂🍂🍂🍂

👬👬👬ವಿಶ್ವ ಸ್ನೇಹಿತರ ದಿನ: ಕುತೂಹಲ ಕೆರಳಿಸುವ ಇಂಟರೆಸ್ಟಿಂಗ್ ಕಹಾನಿ! 👬👬

👉 ನಿಷ್ಕಲ್ಮಷ ಸಂಬಂಧಕ್ಕೆ ಮತ್ತೊಂದು ಹೆಸರೇ ಸ್ನೇಹ. ಯಾವುದೇ ಸಂಬಂಧಗಳು ಮುರಿದು ಬಿದ್ದರೂ ಸ್ನೇಹ ಮಾತ್ರ ಕೊನೇ ತನಕ ಗಟ್ಟಿಯಾಗಿರುತ್ತದೆ. ಅದರ ಶಕ್ತಿಯೇ ಹಾಗೆ. ಸ್ನೇಹಿತರು ಯಾವುದೇ ಕಾರಣಗಳಿಂದ ದೂರಾದರೂ ಯಾವತ್ತಾದರೂ ಅವರ ಸ್ನೇಹ ಮತ್ತೆ ಒಂದಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹವು ಚಿರಾಯುವಾಗಿದೆ.
👉ಸ್ನೇಹಿತರ ಬಗ್ಗೆ ತಮಗಿರುವ ಕಾಳಜಿ ವ್ಯಕ್ತಪಡಿಸುವ ಸಲುವಾಗಿ ವಿಶ್ವದೆಲ್ಲೆಡೆಯಲ್ಲಿ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಸ್ನೇಹಿತರ ದಿನ, ಅದರ ಮೂಲ, ಅದು ಹೇಗೆ ಆರಂಭವಾಯಿತು, ವಿವಿಧ ದೇಶಗಳಲ್ಲಿ ಅದನ್ನು ಹೇಗೆ ಆಚರಿಸಲಾಗುತ್ತದೆ ಹಾಗೂ ಮತ್ತಿತರ ಕೌತುಕದ ವಿಷಯಗಳನ್ನು ಈ ಲೇಖನವು ನಿಮ್ಮ ಮುಂದಿಡಲಿದೆ.
👉ಸ್ನೇಹದ ಬಗ್ಗೆ ಸಾವಿರಾರು ವರ್ಷಗಳಿಂದ ಚರ್ಚೆ ನಡೆಸಲಾಗುತ್ತಿದೆ. ನಂಬಿಕೆ, ಪ್ರೋತ್ಸಾಹ, ಸಂವಹನ, ಪ್ರಾಮಾಣಿಕತೆ, ತಿಳುವಳಿಕೆ, ಕರುಣೆಯನ್ನು ಒಳಗೊಂಡಿರುವಂತಹ ಅತ್ಯಂತ ದೃಢ ಸಂಬಂಧವೇ ಸ್ನೇಹ.
👉ಸ್ನೇಹಿತರ ಬಗ್ಗೆ ಕಾಳಜಿ ಮತ್ತು ಪ್ರೀತಿ ವ್ಯಕ್ತಪಡಿಸಲು ಯಾವುದೇ ವಿಶೇಷ ದಿನ ಬೇಕೆಂದಿಲ್ಲ. ಆದರೆ ಸ್ನೇಹಿತರ ದಿನವು ನಿಮ್ಮ ಸ್ನೇಹಿತರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಗೌರವ ತೋರಿಸುವಂತಹ ಒಂದು ಅವಕಾಶವನ್ನು ಒದಗಿಸುತ್ತದೆ.
👉ಈ ಜಗತ್ತಿನಲ್ಲಿ ಇನ್ನೂ ಗಟ್ಟಿಯಾಗಿ ಉಳಿದಿರುವ ಸಂಬಂಧವೆಂದರೆ ಅದು ಸ್ನೇಹ ಮಾತ್ರ. ಇದು ಅತ್ಯಂತ ವಿಶೇಷವಾಗಿರುಂತಹ ಆಕರ್ಷಣೆ ಮತ್ತು ನಂಬಿಕೆಯ ಸಂಬಂಧ. 👉ಸ್ನೇಹವೆಂದರೆ ನಮ್ಮ ಬಗ್ಗೆ ಕಾಳಜಿ ವಹಿಸುವ ಮತ್ತು ಕಷ್ಟದಲ್ಲಿ ಹೆಗಲು ಕೊಡುವಂತಹ ಒಂದು ಅಭೂತಪೂರ್ವ ಸಂಬಂಧ.
👉 ಸ್ನೇಹಿತರ ದಿನವನ್ನು ಮೊದಲು ಆರಂಭಿಸಿದವರು ಜಾಯ್ಸ್ ಹಾಲ್. 1919ರಲ್ಲಿ ಹಾಲ್ ಮಾರ್ಕ್ ಕಾರ್ಡ್ ಗಳನ್ನು ಸ್ಥಾಪಿಸಿದ ಈತ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಜನರು ಸ್ನೇಹಿತರ ದಿನವಾಗಿ ಆಚರಿಸಬೇಕೆಂದು ಬಯಸಿ ಇದನ್ನು ಆರಂಭಿಸಿದ.

👉1958ರ ಜುಲೈ 20ರಂದು ಡಾ. ಅರ್ಟೆಮಿಯೊ ಬ್ರಾಚೊ ಎಂಬವರು ವಿಶ್ವ ಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸಬೇಕೆಂಬ ಪ್ರಸ್ತಾಪವನ್ನಿಟ್ಟರು. ಪರಾಗ್ವೆಯ ಅಸುನಸಿಯೊನ್ ನಿಂದ 200 ಕಿ.ಮೀ. ಉತ್ತರದಲ್ಲಿರುವ ಪರಾಗ್ವೆ ನದಿಯ ನಗರದವಾದ ಪುರ್ಟೊ ಪಿನಾಸ್ಕೋದಲ್ಲಿ ತನ್ನ ಸ್ನೇಹಿತರೊಂದಿಗೆ ರಾತ್ರಿಯೂಟವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಾಚೋ ಅವರು ಈ ಪ್ರಸ್ತಾವವನ್ನಿಟ್ಟಿದ್ದರು.

👉2011 ಎಪ್ರಿಲ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜುಲೈ 30ನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಅಚರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.
👉 ದಕ್ಷಿಣ ಅಮೆರಿಕಾದ ದಕ್ಷಿಣಭಾಗದ ಕೆಲವೊಂದು ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪರಾಗ್ವೆಯಲ್ಲಿ ಇದನ್ನು ಆಚರಿಸಲಾಗುತ್ತದೆ. 👉1958ರಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಆಚರಿಸಲು ಪರಾಗ್ವೆ ಪ್ರಸ್ತಾವ ಮಾಡಿತ್ತು. ಸಾಂಪ್ರದಾಯಿಕವಾಗಿ ಆಗಸ್ಟ್‌ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಕೆಲವೊಂದು ರಾಷ್ಟ್ರಗಳಲ್ಲಿ ಸ್ನೇಹಿತರ ದಿನ ಆಚರಣೆಗೆ ಯಾವುದೇ ನಿಗದಿತ ದಿನವಿಲ್ಲ. ಗ್ರೀಟಿಂಗ್ ಕಾರ್ಡ್ ಕಂಪೆನಿಗಳಿಂದ ಆರಂಭವಾದಂತಹ ಈ ಆಚರಣೆಯು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಪಡೆದುಕೊಂಡು ರಜಾದಿನವನ್ನು ತುಂಬಾ ಆಸಕ್ತಿಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಭಾರತ, ಬಾಂಗ್ಲಾದೇಶ ಮತ್ತು ಮಲೇಶಿಯಾದಲ್ಲಿ ಇದರ ಬಗ್ಗೆ ಆಸಕ್ತಿ ಬೆಳೆಯುತ್ತಿದೆ.

👉ಸ್ನೇಹಕ್ಕೇಕೆ ಶಾಸ್ತ್ರದ ಹಂಗು !! ದಕ್ಷಿಣ ಏಶ್ಯಾದಲ್ಲಿ ರಜಾದಿನವನ್ನು ಪ್ರಚುರ ಮಾಡುವವರು 1935ರಲ್ಲಿ ಅಮೆರಿಕಾದಲ್ಲಿ ನೆಲೆಸಿರುವಂತಹ ತಮ್ಮ ಸ್ನೇಹಿತರಿಗಾಗಿ ಈ ದಿನವನ್ನು ಅರ್ಪಿಸುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ಆದರೆ ಇದರ ನಿಜವಾದ ವರ್ಷ 1919.
👉ಸ್ನೇಹಿತರ ದಿನದಂದು ಉಡುಗೊರೆ, ಕಾರ್ಡ್ ಮತ್ತು ಕೈಗೆ ರಿಬ್ಬನ್‌ನಂತಹ ಪಟ್ಟಿಗಳನ್ನು ಧರಿಸುವುದು ಸಾಮಾನ್ಯವಾಗಿ ಆಚರಿಸಿಕೊಂಡಿರುವಂತಹ ಸಂಪ್ರದಾಯ.
👉 1935ರಲ್ಲಿ ಅಮೆರಿಕಾದ ಕಾಂಗ್ರೆಸ್ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಘೋಷಿಸಿತು. ಸ್ನೇಹಿತರಿಗೆ ಗೌರವ ಸೂಚಿಸುವ ಸಲುವಾಗಿ ರಾಷ್ಟ್ರೀಯ ರಜೆಯನ್ನು ಘೋಷಿಸಿದೆ. ಮಹಿಳೆಯರ ಸ್ನೇಹಿತರ ದಿನವನ್ನು ಸಪ್ಟೆಂಬರ್ ತಿಂಗಳ ಮೂರನೇ ಭಾನುವಾರದಂದು ಆಚರಿಸಲಾಗುತ್ತದೆ. ಪ್ರತಿಯೊಬ್ಬರು ಸ್ನೇಹಿತರ ದಿನವನ್ನು ಆಚರಿಸಿದರೆ ಬೆಸ್ಟ್ ಫ್ರೆಂಡ್ಸ್ ಅನಿಮಲ್ ಸೊಸೈಟಿಯು ಉತ್ತಮ ಸ್ನೇಹಿತರ ವಾರವನ್ನು ಆಚರಿಸುತ್ತಾ ಬಂದಿದೆ. ಅದು ಪ್ರತೀ ವರ್ಷ ಜೂನ್ 23ರಿಂದ 25ರ ತನಕ. ಇದನ್ನು ಪ್ರಾಣಿಗಳ ರಕ್ಷಣೆ ಮತ್ತು ಹಕ್ಕಿಗಾಗಿ ಆಚರಿಸುತ್ತಾ ಇದೆ. ಈ ವಾರದ ಮೊದಲ ದಿನವನ್ನು ಉತ್ತಮ ಗೆಳೆಯನ ದಿನವೆಂದು ಕರೆಯಲಾಗುತ್ತದೆ.
🍂🍂🍂🍂🍂🍂🍂🍂
🌹WISH U HAPPY
FREINDSHIP DAY🌹
🍂🍂🍂🍂🍂🍂🍂🍂
FM:ರೋಷನ್ ಜಗಳೂರು